ಮುಂಡ್ಕೂರಿನಲ್ಲಿ ಕೆಸರ್ದ ಗೊಬ್ಬುಲು ಕಾರ್ಯಕ್ರಮ
ಮುಂಡ್ಕೂರು ಗರಡಿ ಇಂದಿರಾನಗರ ಬಳಿ ನೂಜಿಗದ್ದೆಯಲ್ಲಿ ಕ್ರೀಡಾ ಕೂಟ
(Mundkuru) ಮುಂಡ್ಕೂರು: ನಮ್ಮ ಫ್ರೆಂಡ್( ರಿ) ಮುಂಡ್ಕೂರು ಇದರ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮುಂಡ್ಕೂರು ಮುಲ್ಲಡ್ಕ ಗ್ರಾಮಸ್ಥರಿಗೆ ಕೆಸರ್ದ ಗೊಬ್ಬುಲು ಕಾರ್ಯಕ್ರಮ ಮುಂಡ್ಕೂರು ಗರಡಿ ಇಂದಿರಾನಗರ ಬಳಿ ನೂಜಿಗದ್ದೆಯಲ್ಲಿ ನಡೆಯಿತು.
ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ್ ಆಶೀರ್ವಚನ ನೀಡಿ, ತುಳುನಾಡಿನ ಮಣ್ಣು ಅತ್ಯಂತ ಪವಿತ್ರವಾಗಿದ್ದು, ಔಷಧೀಯ ಗುಣಗಳನ್ನು ಹೊಂದಿದೆ. ಈ ಮಣ್ಣಿನಲ್ಲಿ ಶ್ರಮಪಟ್ಟು ದುಡಿದ ಹಿರಿಯರು ಇಂದಿಗೂ ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿದ್ದಾರೆ ಎಂದರು.
ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೋರಿಬೆಟ್ಟು ಗುತ್ತು ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಮಾತನಾಡಿ, ಯುವಕರು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಸ್ಥೈರ್ಯ ಹಾಗೂ ಆರೋಗ್ಯವಂತರಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಸಮಾಜಮುಖ ಚಿಂತನೆಗಳ ಮೂಲಕ ಮನೆ ಮಾತಾಗಿರುವ ನಮ್ಮ ಫ್ರೆಂಡ್ಸ್ ಗ್ರಾಮೀಣ ಕ್ರೀಡಾ ಕೂಟವನ್ನು ಸಂಘಟಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ನಮ್ಮ ಫ್ರೆಂಡ್ ಸಂಚಾಲಕ ಅರುಣ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುಲ್ಲಡ್ಕ ಪರಾರಿ ರವೀಂದ್ರ ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಪಳಿಗ, ಜಯರಾಮ್ ಕುಲಾಲ್, ಗ್ರಾಮ ಪಂಚಾಯತ್ ಸದಸ್ಯ ಭಾಸ್ಕರ್ ಶೆಟ್ಟಿ, ಸಂದೀಪ್ ಶೆಟ್ಟಿ ಸಚ್ಚೇರಿ ಪರಾರಿ, ಅಶೋಕ್ ಶೆಟ್ಟಿ, ಬೋಳದ ಗುತ್ತು ಸಂತೋಷ್ ಶೆಟ್ಟಿ, ಮುಂಬೈ ಉದ್ಯಮಿ ವಸಂತ ಪೂಜಾರಿ ಶೇಖರ್ ಪೂಜಾರಿ ದಡ್ಡು, ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ಶೆಟ್ಟಿ, ಉದಯ್ ಹೆಗ್ಡೆ, ಸಂತೋಷ್ ಕುಲಾಲ್ ಇನ್ನಾ, ಜೆ ಸಿ ಐ ಅಧ್ಯಕ್ಷ ವಸಂತ್, ಕೃಷ್ಣಶೆಟ್ಟಿ ಮುಲ್ಲಡ್ಕ, ಸುಧಾಕರ್ ಕುಲಾಲ್ ಉದಯ ಮುಂಡ್ಕೂರು, ಆನಂದ ಸಾಲ್ಯಾನ್, ಅರುಣ್ ಕುಮಾರ್, ನಿಶಾಂತ್ ಗುರುತಿಲಕ್, ಸತೀಶ್ ಶೆಟ್ಟಿ, ರಮೇಶ್ ಪೂಜಾರಿ, ನವನೀತ್ ಅಮೀನ್, ಸುರೇಶ್ ಪೂಜಾರಿ, ಪ್ರಮೋದ್ ಕಜೆ, ಶರತ್ ಶೆಟ್ಟಿ ಉಪಸ್ಥಿತರಿದ್ದರು.
ಉದಯ ಮುಂಡ್ಕೂರು ಸ್ವಾಗತಿಸಿ, ಪ್ರಶಾಂತ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಮುಲ್ಲಡ್ಕ ಪರಾರಿ ರವೀಂದ್ರ ಶೆಟ್ಟಿಯವರ ಕಂಬಳದ ಕೋಣಗಳನ್ನು ಸನ್ಮಾನಿಸಲಾಯಿತು.

