• Home  
  • ಪಿಪಿಸಿ ಸಂಧ್ಯಾ ಕಾಲೇಜು ಉಡುಪಿ : ಜ್ಞಾನಂ -2025 ಸ್ಪರ್ಧೆ(PPC Sandhya College Udupi : Gnanam-2025 Competition)
- ಶಾಲಾ ಕಾಲೇಜು - ಸ್ಪರ್ಧೆ

ಪಿಪಿಸಿ ಸಂಧ್ಯಾ ಕಾಲೇಜು ಉಡುಪಿ : ಜ್ಞಾನಂ -2025 ಸ್ಪರ್ಧೆ(PPC Sandhya College Udupi : Gnanam-2025 Competition)

Share: ಪಿಪಿಸಿ ಸಂಧ್ಯಾ ಕಾಲೇಜು ಉಡುಪಿ : ಜ್ಞಾನಂ -2025 ಸ್ಪರ್ಧೆ ಅ. 28 : ಉಡುಪಿ, ಮಂಗಳೂರು, ಕಾರ್ಕಳ, ಕುಂದಾಪುರದ  ಪ. ಪೂ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ (Udupi) ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ ಇದರ ವತಿಯಿಂದ ದಿನಾಂಕ ಅ. 28 (ಮಂಗಳವಾರ) ರಂದು ಉಡುಪಿ, ಮಂಗಳೂರು, ಕಾರ್ಕಳ ಹಾಗೂ ಕುಂದಾಪುರದ  ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಜ್ಞಾನಂ – 2025 ಎಂಬ ವಿಭಿನ್ನ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ.      ಈ ಕಾರ್ಯಕ್ರಮ ಪ್ರಯುಕ್ತ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ […]

(Udupi) ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ ಇದರ ವತಿಯಿಂದ ದಿನಾಂಕ ಅ. 28 (ಮಂಗಳವಾರ) ರಂದು ಉಡುಪಿ, ಮಂಗಳೂರು, ಕಾರ್ಕಳ ಹಾಗೂ ಕುಂದಾಪುರದ  ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಜ್ಞಾನಂ – 2025 ಎಂಬ ವಿಭಿನ್ನ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ. 

    ಈ ಕಾರ್ಯಕ್ರಮ ಪ್ರಯುಕ್ತ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ, ವಾಣಿಜ್ಯ ವಿಭಾಗ,  ಮಾಹಿತಿ ತಂತ್ರಜ್ಞಾನ ಹಾಗೂ ಕಲಾ ವಿಭಾಗಗಳಿಗೆ ಸಂಬಂಧಿಸಿದಂತೆ ವಿಶಿಷ್ಟವಾದ  ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

     ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳ ತಂಡವು ಈಗಾಗಲೇ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜುಗಳನ್ನು ಸಂಪರ್ಕಿಸಿದ್ದು, ಮಾಹಿತಿಯನ್ನು ನೀಡಿದ್ದಾರೆ.     ಸ್ಥಳದಲ್ಲಿಯೇ ಹೆಸರು ನೋಂದಾವಣೆಗೆ ಅವಕಾಶವಿರುವುದರಿಂದ ಪದವಿಪೂರ್ವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಅವರು ತಿಳಿಸಿದ್ದಾರೆ

Leave a comment

Your email address will not be published. Required fields are marked *

eMedia Kannada  @2025. All Rights Reserved.