• Home  
  • ಮಂಗಳೂರು ಬಳಿ  ಟ್ರಾಲ್ ಬೋಟ್‌ ಮುಳುಗಡೆ 35 ಲಕ್ಷಕ್ಕೂ ಅಧಿಕ ನಷ್ಟ (Trawl boat sinking near Mangalore, loss more than 35 lakhs)
- ಅಪಘಾತ

ಮಂಗಳೂರು ಬಳಿ  ಟ್ರಾಲ್ ಬೋಟ್‌ ಮುಳುಗಡೆ 35 ಲಕ್ಷಕ್ಕೂ ಅಧಿಕ ನಷ್ಟ (Trawl boat sinking near Mangalore, loss more than 35 lakhs)

Share: ಮಂಗಳೂರು ಬಳಿ  ಟ್ರಾಲ್ ಬೋಟ್‌ ಮುಳುಗಡೆ 35 ಲಕ್ಷಕ್ಕೂ ಅಧಿಕ ನಷ್ಟ   ಮುಳುಗಡೆಗೊಂಡ ಕನ್ಯಾಣದ ವೀರ ಕಲ್ಕುಡ-2 ಟ್ರಾಲ್ ಬೋಟ್‌ (Kota) ಕೋಟ: ಸಾಸ್ತಾನ ಕೋಡಿ ಕನ್ಯಾಣದ ವೀರ ಕಲ್ಕುಡ-2 ಟ್ರಾಲ್ ಬೋಟ್‌ ಮಂಗಳೂರು ಬಳಿ ಮುಳುಗಡೆಯಾಗಿ ಅದರಲ್ಲಿದ್ದ ಮೀನಿನ ಬಲೆ, ಮೀನು ಮತ್ತು ಇತರ ಸಲಕರಣೆಗಳು ಸಮುದ್ರಪಾಲಾದ ಘಟನೆ ನಡೆದಿದೆ. ನ. 17ರಂದು ಮಲ್ಪೆ ಬಂದರಿನಿಂದ ಹೊರಟ ಈ ಬೋಟು ತಣ್ಣೀರುಬಾವಿ ಮಾರ್ಗವಾಗಿ ನ. 19ರಂದು ಮೀನುಗಾರಿಕೆ ನಡೆಸುತ್ತಾ ಇದ್ದಾಗ, ಸಮುದ್ರದ ಅಲೆಗಳ ಹೊಡೆತಕ್ಕೆ […]

(Kota) ಕೋಟ: ಸಾಸ್ತಾನ ಕೋಡಿ ಕನ್ಯಾಣದ ವೀರ ಕಲ್ಕುಡ-2 ಟ್ರಾಲ್ ಬೋಟ್‌ ಮಂಗಳೂರು ಬಳಿ ಮುಳುಗಡೆಯಾಗಿ ಅದರಲ್ಲಿದ್ದ ಮೀನಿನ ಬಲೆ, ಮೀನು ಮತ್ತು ಇತರ ಸಲಕರಣೆಗಳು ಸಮುದ್ರಪಾಲಾದ ಘಟನೆ ನಡೆದಿದೆ.

ನ. 17ರಂದು ಮಲ್ಪೆ ಬಂದರಿನಿಂದ ಹೊರಟ ಈ ಬೋಟು ತಣ್ಣೀರುಬಾವಿ ಮಾರ್ಗವಾಗಿ ನ. 19ರಂದು ಮೀನುಗಾರಿಕೆ ನಡೆಸುತ್ತಾ ಇದ್ದಾಗ, ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟಿನ ತಳಭಾಗದ ಫೈಬರ್ ಒಡೆದು, ಬೋಟಿನ ತಳಭಾಗದಿಂದ ನೀರು ಬೋಟಿನೊಳಗೆ ನುಗ್ಗಿ, ಬೋಟಿನಲ್ಲಿದ್ದ 10 ಮೀನಿನ ಬಲೆ, ಡಿಸೇಲ್, ಮಂಜುಗಡ್ಡೆ, ರೂ.60 ಸಾವಿರ  ಮೌಲ್ಯದ ಮೀನು, ಜಿಪಿಎಸ್, ವಿ.ಹೆಚ್.ಎಫ್. ಎಕೋ ಸೌಂಡರ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಎಲ್ಲಾ 05 ಜನರ ಮೊಬೈಲ್ ಗಳು ಕಳೆದುಹೋಗಿದೆ.

     ಈ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ತುರ್ತು ಸಂದರ್ಭದಲ್ಲಿ ಬಳಸುವಂತಹ ಟಾರ್ಚ್ ಲೈಟ್‌ನ್ನು ಬಳಸಿ ಬೋಟಿನಲ್ಲಿದ್ದ 5 ಜನರನ್ನು ರಕ್ಷಿಸಲಾಗಿದೆ.

    ಬೋಟು ಸಂಪೂರ್ಣ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ ಎಲ್ಲಾ ಸಾಮಾಗ್ರಿಗಳು ಮತ್ತು ವಿವಿಧ ರೀತಿಯ ಮೀನುಗಳು ಸಮುದ್ರ ಪಾಲಾಗಿ, ಒಟ್ಟು ಸುಮಾರು ಅಂದಾಜು 35 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

  ವಿಮಾ ಪರಿಹಾರಕ್ಕೆ ಮನವಿ

   ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ವಿಮಾ ಪರಿಹಾರ ಪಡೆಯುವ ಬಗ್ಗೆ ಮಂಗಳೂರಿನ ಕರಾವಳಿ ಕಾವಲು ಪೊಲೀಸ್‌ ಠಾಣೆಯಲ್ಲಿ ಸಾಸ್ತಾನ ಕೋಡಿ ಕನ್ಯಾಣದ ರವೀಂದ್ರ ಎಸ್‌ ಪೂಜಾರಿ ದೂರು ದಾಖಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.