ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಂಕರಪುರ ಸಾಯಿ ಮಂದಿರಕ್ಕೆ ರೂ. 2ಲ. ರೂ. ಹಸ್ತಾಂತರ
ಶ್ರೀ ಮುಖ್ಯಪ್ರಾಣ ದೇವರ 19 ಅಡಿ ಎತ್ತರದ ಶಿಲಾಮೂರ್ತಿ ಪ್ರತಿಷ್ಠೆಗೆ ಹಣ ಸಹಾಯ
(Shankarapura) ಶಂಕರಪುರ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನದಲ್ಲಿ ಶ್ರೀ ಮುಖ್ಯಪ್ರಾಣ ದೇವರ 19 ಅಡಿ ಎತ್ತರದ ಶಿಲಾಮೂರ್ತಿ ಪ್ರತಿಷ್ಠೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 2 ಲಕ್ಷ ರೂ. ಮೊತ್ತದ ಡಿ.ಡಿ. ಯನ್ನು ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಗೆ ಹಸ್ತಾಂತರಿಸಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟಪೂರ್ವ ರಾಜ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಜಿಲ್ಲಾ ಸದಸ್ಯ ಕೆ. ಸತ್ಯೇಂದ್ರ ಪೈ ಕಟಪಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ತಾಲೂಕು ವೇದಿಕೆ ಸದಸ್ಯ ಭುವನೇಶ್ ಎಲ್. ಪೂಜಾರಿ ಕುರ್ಕಾಲು, ಒಕ್ಕೂಟ ಅಧ್ಯಕ್ಷೆ ಸುಮಾ ಯು. ಶೆಟ್ಟಿ, ಮೇಲ್ವಿಚಾರಕಿಯರಾದ ಗೀತಾ, ಸೇವಾ ಪ್ರತಿನಿಧಿ ಸುನಂದಾ, ಶಕುಂತಳ ಪ್ರಮುಖರಾದ ಗಣೇಶ್ ಕಿಣಿ, ಗೀತಾಂಜಲಿ ಎಂ. ಸುವರ್ಣ, ಸತೀಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

