• Home  
  • ಅದಾನಿ ಫೌಂಡೇಷನ್: ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ರೂ. 17 ಲಕ್ಷದ ಕಾಮಗಾರಿ ಉದ್ಘಾಟನೆ (Adani Foundation: Inauguration of Rs. 17 lakhs of work in Bada Grama panchayat limits)
- social service

ಅದಾನಿ ಫೌಂಡೇಷನ್: ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ರೂ. 17 ಲಕ್ಷದ ಕಾಮಗಾರಿ ಉದ್ಘಾಟನೆ (Adani Foundation: Inauguration of Rs. 17 lakhs of work in Bada Grama panchayat limits)

Share: ಅದಾನಿ ಫೌಂಡೇಷನ್: ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ರೂ. 17 ಲಕ್ಷದ ಕಾಮಗಾರಿ ಉದ್ಘಾಟನೆ   ನೂತನ ಮಾರುಕಟ್ಟೆ ಸಂಕೀರ್ಣ ಉದ್ಘಾಟಿಸಿದ  ಅದಾನಿ ಅಧ್ಯಕ್ಷ ಕಿಶೋರ್ ಆಳ್ವ (Uchila) ಉಚ್ಚಿಲ: ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ 1200 ಮೆಗಾ ವ್ಯಾಟ್‌ ಸಾಮರ್ಥ್ಯದ ಅದಾನಿ ಪವರ್ ಲಿಮಿಟೆಡ್ ಉಷ್ಣ ವಿದ್ಯುತ್‌ ಉತ್ಪಾದನಾ ಘಟಕದ ಸಿಎಸ್‌ಆರ್ ನಿಧಿಯಿಂದ  ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ರೂ. 17 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮಾರುಕಟ್ಟೆ ಸಂಕೀರ್ಣವನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು […]

(Uchila) ಉಚ್ಚಿಲ: ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ 1200 ಮೆಗಾ ವ್ಯಾಟ್‌ ಸಾಮರ್ಥ್ಯದ ಅದಾನಿ ಪವರ್ ಲಿಮಿಟೆಡ್ ಉಷ್ಣ ವಿದ್ಯುತ್‌ ಉತ್ಪಾದನಾ ಘಟಕದ ಸಿಎಸ್‌ಆರ್ ನಿಧಿಯಿಂದ  ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ರೂ. 17 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮಾರುಕಟ್ಟೆ ಸಂಕೀರ್ಣವನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷರಾದ ಕಿಶೋರ್ ಆಳ್ವ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಆಳ್ವ,  ಗ್ರಾಮೀಣ ಸಮುದಾಯಗಳನ್ನು ಸಬಲೀಕರಿಸುವುದು ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ಕೃಷಿ ಮೂಲಸೌಕರ್ಯವನ್ನು ಬಲಪಡಿಸುವುದು, ಗ್ರಾಮೀಣ  ಆರ್ಥಿಕತೆಯಅಭಿವೃದ್ಧಿಗೆ ಅವಶ್ಯಕವೆಂದು ಹೇಳಿದರು. 

   ಹೊಸ ಮಾರುಕಟ್ಟೆಯು ಆದಾಯ ಮತ್ತು ಪಾರದರ್ಶಕ ಮಾರಾಟ ವ್ಯವಸ್ಥೆಯನ್ನುಒದಗಿಸುವ ಮೂಲಕ ಮಹತ್ವದ ಪ್ರಯೋಜನ ನೀಡಲಿದೆ ಎಂದರು.

   ಕಳೆದ ಒಂದು ದಶಕದಿಂದ ಸಮುದಾಯ ಆರೋಗ್ಯ, ಶಿಕ್ಷಣ, ಗ್ರಾಮೀಣ ಕ್ರೀಡಾ ಪ್ರೋತ್ಸಾಹ ಮತ್ತು ಮೂಲ ಸೌಕರ್ಯ ನಿರ್ಮಾಣ ಸೇರಿದಂತೆ ವಿವಿಧ ಸಿಎಸ್‌ಆರ್ ಉಪಕ್ರಮಗಳನ್ನು ಅದಾನಿ ಪವರ್ ಲಿಮಿಟೆಡ್ ಸಕ್ರಿಯವಾ ಗಿಕೈಗೆತ್ತಿಕೊಂಡಿದೆ.  ಒಟ್ಟು ರೂ. 23 ಕೋಟಿ ಮೌಲ್ಯದ ಮೂಲ ಸೌಕರ್ಯ ಕಾಮಗಾರಿಗಳನ್ನು ಸುತ್ತ ಮುತ್ತಲಿನ 7 ಗ್ರಾಮ ಪಂಚಾಯತ್‌ಗಳಲ್ಲಿ ಹಂತ ಹಂತವಾಗಿ ಜಾರಿಗೆ ತರುವ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಇದುವರೆಗೆ ರೂ. 1.51 ಕೋಟಿ ಮೌಲ್ಯದ ಮೂಲಭೂತ ಸೌಕರ್ಯಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಗ್ರಾಮಸ್ಥರ ಉಪಯೋಗಕ್ಕೆ ಸಮರ್ಪಿಸಲಾಗಿದೆ ಎಂದರು.

 ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ಅದಾನಿ ಪವರ್ ಲಿಮಿಟೆಡ್‌ ಎಜಿಎಂ ರವಿ ಆರ್. ಜೇರೆ ಮತ್ತುಅದಾನಿ ಫೌಂಡೇಷನ್‌ನ ಅನುದೀಪ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.