• Home  
  • ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ, ಸಾಂಕೇತಿಕ ಕುದಿ ಕಂಬಳ ಸಂಪನ್ನ (Yermal Tenka- Bada Kambala’s preliminary first Kudi)
- fastival - ಪ್ರಚಲಿತ

ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ, ಸಾಂಕೇತಿಕ ಕುದಿ ಕಂಬಳ ಸಂಪನ್ನ (Yermal Tenka- Bada Kambala’s preliminary first Kudi)

Share: ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ, ಸಾಂಕೇತಿಕ ಕುದಿ ಕಂಬಳ ಸಂಪನ್ನ  ಫೆ 28 ಕ್ಕೆ ಎರ್ಮಾಳು ತೆಂಕ- ಬಡ ಕಂಬಳ ನಿಗದಿ  (Yermal) ಎರ್ಮಾಳು : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪ್ರಥಮ ಸಾಂಕೇತಿಕ ಕುದಿ ಕಂಬಳವು ಗುರುವಾರ ಬೆಳಿಗ್ಗೆ  ಗಂಟೆಗೆ ಕಂಬಳ ಗದ್ದೆಯಲ್ಲಿ ನಡೆಯಿತು.   ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ಈ ಬಾರಿ ಪ್ರಥಮಥವಾಗಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳಕ್ಕಾಗಿ ನಿಗದಿ ಪಡಿಸಲಾಗಿದೆ. ಹಿಂದೆ ಜೈನ […]

 (Yermal) ಎರ್ಮಾಳು : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪ್ರಥಮ ಸಾಂಕೇತಿಕ ಕುದಿ ಕಂಬಳವು ಗುರುವಾರ ಬೆಳಿಗ್ಗೆ  ಗಂಟೆಗೆ ಕಂಬಳ ಗದ್ದೆಯಲ್ಲಿ ನಡೆಯಿತು.

  ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ಈ ಬಾರಿ ಪ್ರಥಮಥವಾಗಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳಕ್ಕಾಗಿ ನಿಗದಿ ಪಡಿಸಲಾಗಿದೆ. ಹಿಂದೆ ಜೈನ ಮತದವರು ಕಂಬಳ ಮಾಡುತ್ತಿದ್ದ ಜಾಗ ಇದಾಗಿತ್ತು. ಊರ ಜನರಿಗೆ ಯಾವುದೇ ತೊಂದರೆ ಬಾರದಂತೆ ಇಂದು ಬೆಳಿಗ್ಗೆ ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಎರ್ಮಾಳು ಶ್ರೀ ಕುದ್ರೊಟ್ಟು ಬ್ರಹ್ಮ ಬೈದರ್ಕಳ ಗರಡಿ, ಕೋರ್ದಬ್ಬು ದೈವಸ್ಥಾನ, ಎರ್ಮಾಳು ಬೀಡಿನ ಧರ್ಮ ದೈವಗಳು, ಧೂಮಾವತಿ ದೈವಸ್ಥಾನ, ನಂದಿಗೋಣ, ರಕ್ತೇಶ್ವರಿ, ನಾಗ ಬ್ರಹ್ಮ ದೈವ ಸನ್ನಿಧಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಕುದಿ ಕಂಬಳಕ್ಕಾಗಿ ಕೋಣಗಳನ್ನು ಕಂಬಳ ಕರೆಗೆ ಇಳಿಸಲಾಯಿತು.

ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್‌ ರವರು ಕಂಬಳ ಕರೆಗೆ ಪೂಜೆ ಸಲ್ಲಿಸಿದರು.

   ಎರ್ಮಾಳು ರೋಹಿತ್‌ ಹೆಗ್ಡೆಯವರ ಒಂದು ಜೋಡಿ, ಪುಚ್ಚೊಟ್ಟು ಬೀಡು ಲೋಕಯ್ಯ ಶೆಟ್ಟಿಯವರ ಒಂದು ಜೊತೆ, ಉಚ್ಚಿಲ ಶಿವರಾಮ ಪೂಜಾರಿಯವರ ಒಂದು ಜೊತೆ ಮತ್ತು ಬರ್ಪಾಣಿ ಜಗನ್ನಾಥ ಶೆಟ್ಟಿಯವರ ಎರಡು ಜೊತೆ ಕಂಬಳ ಕೋಣಗಳನ್ನು ಕರೆಗೆ ಇಳಿಸಿ ಕುದಿ ಕಂಬಳ ನೆರವೇರಿಸಿ ಕಂಬಳಕ್ಕೆ ಚಾಲನೆ ನೀಡಲಾಯಿತು.

   ಈ ಸಂದರ್ಭ ಎರ್ಮಾಳು ತೆಂಕ- ಬಡ ಜೋಡುಕರೆ  ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿ, ಕಂಬಳ ಜಾತ್ಯಾತೀತ ಜನಪದ ಕ್ರೀಡೆ. ಇದು ಕಂಬಳದ ಪ್ರಥಮ ಕುದಿಯಾಗಿದೆ. ಮೊದಲಿಗೆ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಾಂಕೇತಿಕವಾಗಿ ನಾಲ್ಕು ಜೋಡಿ ಕೋಣಗಳನ್ನು ಓಡಿಸಲಾಯಿತು.  ಇದರಿಂದ ಓಡುವ ಕೋಣಗಳು ಮತ್ತು ಓಟಗಾರರಿಗೆ ಕಂಬಳ ಗದ್ದೆಯ ಮೇಲಿನ ಹಿಡಿತ ಸಿಗಲಿದೆ ಎಂದ ರೋಹಿತ್ ಹೆಗ್ಡೆ ಮುಂದೆ ಹೆಚ್ಚಿನ ಕೋಣಗಳನ್ನು ಇಲ್ಲಿಗೆ ಕರೆಯಿಸಿ ಕುದಿ ಮಾಡಲಾಗುವುದು. ಸಾರ್ವಜನಿಕರು ಮತ್ತು ಮಾಧ್ಯಮದವರು ನಮಗೆ ಸಹಕರಿಸುವಂತೆ ವಿನಂತಿಸಿದರು.

ಈ ಸಂದರ್ಭ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು, ಎರ್ಮಾಳು ಜನಾರ್ಧನ ಜನಕಲ್ಯಾಣ ಸಮಿತಿ ಅಧ್ಯಕ್ಷ  ಸುರೇಶ್ ಜಿ ಶೆಟ್ಟಿ, ಕಾರ್ಯಾಧ್ಯಕ್ಷ ಪುಚ್ಚೊಟ್ಟು ಬೀಡು  ಸೀತಾರಾಮ ಲೋಕಯ್ಯ ಶೆಟ್ಟಿ, ಮುಂಬಯಿ ಸಮಿತಿ ಅಧ್ಯಕ್ಷ ಎರ್ಮಾಳು ಹರೀಶ್‌ ಶೆಟ್ಟಿ, ಕಂಬಳ ಸಮಿತಿಯ ಪದಾಧಿಕಾರಿಗಳಾದ ಬಾಲಚಂದ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಜಗಜೀವನ್ ಚೌಟ, ಸಂತೋಷ್ ಶೆಟ್ಟಿ ಬರ್ಪಾಣಿ, ಕಿಶೋರ್‌ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಯಶೋಧರ ಶೆಟ್ಟಿ ಬಗ್ಗೇಡಿ ಗುತ್ತು, ಬರ್ಪಾಣಿ ಗಣೇಶ ಶೆಟ್ಟಿ, ಉಮಾನಾಥ ಶೆಟ್ಟಿ, ಶಿವಪ್ರಸಾದ್‌ ಶೆಟ್ಟಿ ಎಲ್ಲದಡಿ, ಅಮರನಾಥ ಶೆಟ್ಟಿ,  ಅಶೋಕ್ ಶೆಟ್ಟಿ ಚೊಕ್ಕಾಡಿ, ಶಶಿಧರ ಶೆಟ್ಟಿ ಬಾಚೇತ್ರಿ ಗುತ್ತು, ಶ್ರೀನಿವಾಸ ಪೂಜಾರಿ ಎರ್ಮಾಳು, ಪಡು ಸಾಂತೂರು ಪ್ರಜ್ವಲ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.