ಕವತ್ತಾರಿನಲ್ಲಿ ಮನೆಯ ಹಟ್ಟಿಯಿಂದ ಕರು ಎಳೆದೊಯ್ದು ಗದ್ದೆಯಲ್ಲಿ ತಿಂದ ಚಿರತೆ
ಕೊಲ್ಲೂರು ಪದವು, ಕವತಾರು ಗುಡ್ಡೆಯಂಗಡಿ ಪರಿಸರದಲ್ಲಿ ಚಿರತೆ ಕಾಟ
ಸಾಂದರ್ಭಿಕ ಚಿತ್ರ
(Mulki) ಮುಲ್ಕಿ: ಮೂಲ್ಕಿ ಸಮೀಪದ ಕವತ್ತಾರು ದೇವಸ್ಥಾನದ ಬಳಿಯ ಆಸ್ಟಿನ್ ಸಿಕ್ವೇರಾ ಎಂಬವರ ಮನೆಯ ಹಟ್ಟಿಯಿಂದ ಶನಿವಾರ ಮಧ್ಯರಾತ್ರಿ ಚಿರತೆಯೊಂದು ಸಣ್ಣ ಕರುವನ್ನು ಎಳೆದೊಯ್ದು ಮನೆಯ ಸಮೀಪದ ಗದ್ದೆಯಲ್ಲಿ ಅರ್ಧಂಬರ್ಧ ತಿಂದು ಹಾಕಿ ಬಿಟ್ಟು ಹೋದ ಆತಂಕರಾರಿ ಘಟನೆ ಘಟಿಸಿದೆ.
ಆಸ್ಟಿನ್ ಸಿಕ್ವೇರಾರವರು ಹೈನುಗಾರರಾಗಿದ್ದು, ಅವರ ಹಟ್ಟಿಯಲ್ಲಿ 11ಕ್ಕೂ ಹೆಚ್ಚು ದನಗಳಿವೆ.
ದನದ ಕರುವಿಗೆ ಪ್ರತ್ಯೇಕ ಹಟ್ಟಿ ಇದ್ದು ರಾತ್ರಿ 11:30 ಗಂಟೆ ಬಳಿಕ ಮನೆಯವರು ಮಲಗಿದ್ದನ್ನು ಗಮನಿಸಿದ ಚಿರತೆ ಹಟ್ಟಿಗೆ ನುಗ್ಗಿ ಕರುವನ್ನು ಎಳೆದೊಯ್ದಿದೆ.
ಈ ಘಟನೆಯಿಂದ ಪರಿಸರದ ಜನರು ಭಯಭೀತರಾಗಿದ್ದು, ಅರಣ್ಯ ಇಲಾಖೆಗೆ ಕೂಡಲೇ ಚಿರತೆಯನ್ನು ಹಿಡಿಯುವಂತೆ ಆಗ್ರಹಿಸಿದ್ದಾರೆ.
ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲೂರು ಪದವು, ಕವತಾರು ಗುಡ್ಡೆಯಂಗಡಿ ಪರಿಸರದಲ್ಲಿ ಕಳೆದ ಹಲವು ದಿನಗಳಿಂದ ಚಿರತೆ ಕಾಟ ವಿಪರೀತವಾಗಿದ್ದು ಅನೇಕ ಮನೆಯ ನಾಯಿಗಳು ಚಿರತೆಗೆ ಆಹಾರವಾಗಿದೆ. ಈ ಬಗ್ಗೆ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಕೂಡ ದಾಖಲಾಗಿದೆ
ಇದೀಗ ಹಟ್ಟಿಗೆ ನುಗ್ಗಿ ಕರುವನ್ನು ಎಳೆದೊಯ್ದ ಚಿರತೆಗೆ ಬೋನ್ ಇರಿಸಿ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

