ಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ
ಡಿ. 20 (ಶನಿವಾರ) ಮಹಾರಥೋತ್ಸವ ನೆರವೇರಲಿದೆ
(Yermal) ಎರ್ಮಾಳು : ಪುರಾಣ ಪ್ರಸಿದ್ಧಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸೋಮವಾರ ಬೆಳಿಗ್ಗೆ ನೆರವೇರಿತು.
ದೇವಳದ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ವೈ ಪೂರ್ಣೇಶ್ ರಾವ್, ಅರ್ಚಕರುಗಳಾದ ಕೃಷ್ಣಮೂರ್ತಿ ಭಟ್ ಮತ್ತು ವಿಷ್ಣುಮೂರ್ತಿಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿವಿದಾನಗಳು ಸಂಪನ್ನಗೊಂಡಿತು.
ಈ ಸಂದರ್ಭ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು, ಎರ್ಮಾಳು ಜನಾರ್ಧನ ಜನಕಲ್ಯಾಣ ಸಮಿತಿ ಅಧ್ಯಕ್ಷ ಸುರೇಶ್ ಜಿ ಶೆಟ್ಟಿ, ಪುಚ್ಚೊಟ್ಟು ಬೀಡು ಸೀತಾರಾಮ ಲೋಕಯ್ಯ ಶೆಟ್ಟಿ, ಯಶೋಧರ ಶೆಟ್ಟಿ ಬಗ್ಗೇಡಿ ಗುತ್ತು, ನೈಮಾಡಿ ನಾರಾಯಣ ಕೆ. ಶೆಟ್ಟಿ, ಉದಯ ಕೆ ಶೆಟ್ಟಿ ಎರ್ಮಾಳು, ಎರ್ಮಾಳು ಹರೀಶ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಜಗಜೀವನ್ ಚೌಟ, ಸಂತೋಷ್ ಶೆಟ್ಟಿ ಬರ್ಪಾಣಿ, ಕಿಶೋರ್ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಬರ್ಪಾಣಿ ಗಣೇಶ ಶೆಟ್ಟಿ, ಉಮಾನಾಥ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಶ್ರೀನಿವಾಸ ಪೂಜಾರಿ ಎರ್ಮಾಳು, ನೈಮಾಡಿ ವಸಂತ ಕೆ. ಶೆಟ್ಟಿ ಮತ್ತು ಜನಾರ್ಧನ ಜನಕಲ್ಯಾಣ ಸಮಿತಿಯ ಸದಸ್ಯರು, ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

