• Home  
  • ತೆಂಕ ಎರ್ಮಾಳು : ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸಾವು (Tenka Yermal: Man dies in bike collision)
- ಅಪಘಾತ

ತೆಂಕ ಎರ್ಮಾಳು : ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸಾವು (Tenka Yermal: Man dies in bike collision)

Share: ತೆಂಕ ಎರ್ಮಾಳು : ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸಾವು ತೆಂಕ ಎರ್ಮಾಳು ನಿವಾಸಿ ಅಣ್ಣಯ್ಯ ಬಂಗೇರ ಮೃತ ವ್ಯಕ್ತಿ (Padubidri) ಪಡುಬಿದ್ರಿ : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಎರ್ಮಾಳು ಸತ್ಯಂ ಬಾರ್ ಎದುರು ಸೋಮವಾರ ಸಂಜೆ ಘಟಿಸಿದೆ. ಅಪಘಾತದಲ್ಲಿ ಬೈಕ್‌ ಸವಾರನೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.     ಮೃತ ವ್ಯಕ್ತಿಯನ್ನು ತೆಂಕ ಎರ್ಮಾಳು ನಿವಾಸಿ ಅಣ್ಣಯ್ಯ ಬಂಗೇರ (67) ಎಂದು ಗುರುತಿಸಲಾಗಿದೆ.   […]

(Padubidri) ಪಡುಬಿದ್ರಿ : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಎರ್ಮಾಳು ಸತ್ಯಂ ಬಾರ್ ಎದುರು ಸೋಮವಾರ ಸಂಜೆ ಘಟಿಸಿದೆ. ಅಪಘಾತದಲ್ಲಿ ಬೈಕ್‌ ಸವಾರನೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮೃತ ವ್ಯಕ್ತಿಯನ್ನು ತೆಂಕ ಎರ್ಮಾಳು ನಿವಾಸಿ ಅಣ್ಣಯ್ಯ ಬಂಗೇರ (67) ಎಂದು ಗುರುತಿಸಲಾಗಿದೆ.  

   ಬೈಕ್ ಸವಾರ ಹಸನ್ ಕಾಪುವಿನಿಂದ ಕುಳಾಯಿ  ಕಡೆಗೆ ಸಾಗುತ್ತಿದ್ದರು. ಅಣ್ಣಯ್ಯರವರು ರಸ್ತೆ ದಾಟುತ್ತಿದ್ದ ಸಂದರ್ಭ ಅತಿವೇಗದಿಂದ ಬಂದ ಬೈಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡಿದ್ದಾರೆ. 

  ಎಸ್ಡಿಪಿಐ ಆಂಬುಲೆನ್ಸ್ ಮೂಲಕ ಉಚ್ಚಿಲದ ಸಮಾಜಸೇವಕ ಜಲಾಲುದ್ದೀನ್‌ ರವರು ಪ್ರಥಮ ಚಿಕಿತ್ಸೆ ನೀಡಿ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಅಣ್ಣಯ್ಯರವರು ಮೃತಪಟ್ಟಿದ್ದಾರೆ.

ಗಾಯಗೊಂಡ ಬೈಕ್ ಸವಾರ ಹಸನ್ ರವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಘಟನಾ ಸ್ಥಳಕ್ಕೆ ಪಡುಬಿದ್ರಿ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.