ಪರ್ಯಾಯ ಪೀಠಾರೋಹಣ ಗೈಯುವ ಮೊದಲು ಶಿರೂರು ಶ್ರೀಗಳಿಂದ ದಂಡತೀರ್ಥದಲ್ಲಿ ಸ್ನಾನ
ದಂಡತೀರ್ಥಕೆರೆಯಲ್ಲಿ ಪವಿತ್ರ ಸ್ನಾನ ಮಾಡಿ ಪರ್ಯಾಯ ಪೀಠಾರೋಹಣ ಗೈಯುವ ಸಂಪ್ರದಾಯ
(Kaup)ಕಾಪು: ಪ್ರಥಮ ಬಾರಿಗೆ ಶ್ರೀ ಕೃಷ್ಣ ಮಠದಲ್ಲಿ ಪೀಠಾರೋಹಣ ಗೈಯಲಿರುವ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು (Vedhavardhan Theertha Swamiji) ಶನಿವಾರ ಬೆಳಗಿನ ಜಾವ ಕಾಪು ಬಳಿಯ ದಂಡತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಮಾಡಿ ಪರ್ಯಾಯ ಪೀಠಾರೋಹಣಕ್ಕೆ ನಿರ್ಗಮಿಸಿದ್ದಾರೆ.
ರಾತ್ರಿ ಒಂದು ಗಂಟೆಯಸುಮಾರಿಗೆ ಶ್ರೀಕೃಷ್ಣಾಪುರ ಮಠದ ಆಧೀನದಲ್ಲಿರುವ ದಂಡತೀರ್ಥ ಮಠಕ್ಕೆ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ವೃಂದದವರೊಂದಿಗೆ ಆಗಮಿಸಿ ಪವಿತ್ರ ದಂಡತೀರ್ಥ ಕೆರೆಯಲ್ಲಿ ಸ್ನಾನ ಮಾಡಿದರು.
ಸ್ವಾಮೀಜಿಯವರು ಮಠದ ದೇವರಕೋಣೆಯಲ್ಲಿ ಜಪ, ತಪದ ನಂತರ ಮಹಾಪೂಜೆ ನೆರವೇರಿಸಿ, ಅಲ್ಲಿಂದ ನೇರವಾಗಿ ಪರ್ಯಾಯ ಪೀಠೋಹರಣಕ್ಕೆ ನಿರ್ಗಮಿಸಿದರು.
ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಶೆಟ್ಟಿ, ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉದ್ಯಮಿಗಳಾದ ಮನೋಹರ ಶೆಟ್ಟಿ, ಗೌರವ್ ಶೇಣವ, ರವಿ ಭಟ್, ಲಕ್ಷ್ಮೀಶ ತಂತ್ರಿ, ಡಾ. ಸೀತಾರಾಮ ತೋಣಿತ್ತಾಯ ಸಹಿತ ಗಣ್ಯರು ಉಪಸ್ಥಿತರಿದ್ದರು

