• Home  
  • ಶಿರ್ವ: ಸಾವುದ್ ಅಮ್ಮನ ದೇವಾಲಯದ ಪರಮ ಪ್ರಸಾದ ಮೆರವಣಿಗೆ (Shirva: Param Prasad procession of Savud Amma Church)
- ಧಾರ್ಮಿಕ

ಶಿರ್ವ: ಸಾವುದ್ ಅಮ್ಮನ ದೇವಾಲಯದ ಪರಮ ಪ್ರಸಾದ ಮೆರವಣಿಗೆ (Shirva: Param Prasad procession of Savud Amma Church)

Share: ಶಿರ್ವ: ಸಾವುದ್ ಅಮ್ಮನ ದೇವಾಲಯದ ಪರಮ ಪ್ರಸಾದ ಮೆರವಣಿಗೆ ಬಲಿ ಪೂಜೆಯನ್ನು ಪ್ರಧಾನ ಗುರುಗಳಾದ ರೆ. ಫಾ. ಜೆಸನ್ ಲೋಬೊ ನೆರವೇರಿಸಿದರು (Shirva) ಶಿರ್ವ: ಶಿರ್ವದಲ್ಲಿರುವ ಸಾವುದ್ ಅಮ್ಮನ ದೇವಾಲಯ ವಾರ್ಷಿಕ ಹಬ್ಬದ ಪ್ರಯುಕ್ತ ಪರಮ ಪ್ರಸಾದದ ಮೆರವಣಿಗೆಯು ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.   ರೆ. ಫಾ. ಜೆಸನ್ ಲೋಬೊ (ಎಸ್ ಜೆ) ಪ್ರಧಾನ ಗುರುಗಳಾಗಿ ಬಲಿ ಪೂಜೆಯನ್ನು ನೆರವೇರಿಸಿ ಪರಮ ಪ್ರಸಾದದ ಬಗ್ಗೆ ಸಂದೇಶ ನೀಡಿದರು.    ಬಲಿ ಪೂಜೆಯ ನಂತರ ಪರಮ ಪ್ರಸಾದದ […]

(Shirva) ಶಿರ್ವ: ಶಿರ್ವದಲ್ಲಿರುವ ಸಾವುದ್ ಅಮ್ಮನ ದೇವಾಲಯ ವಾರ್ಷಿಕ ಹಬ್ಬದ ಪ್ರಯುಕ್ತ ಪರಮ ಪ್ರಸಾದದ ಮೆರವಣಿಗೆಯು ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.

  ರೆ. ಫಾ. ಜೆಸನ್ ಲೋಬೊ (ಎಸ್ ಜೆ) ಪ್ರಧಾನ ಗುರುಗಳಾಗಿ ಬಲಿ ಪೂಜೆಯನ್ನು ನೆರವೇರಿಸಿ ಪರಮ ಪ್ರಸಾದದ ಬಗ್ಗೆ ಸಂದೇಶ ನೀಡಿದರು.

   ಬಲಿ ಪೂಜೆಯ ನಂತರ ಪರಮ ಪ್ರಸಾದದ ಮೆರವಣಿಗೆಯು ಶಿರ್ವ ಆರೋಗ್ಯ ಮಾತೆ ದೇವಾಲಯದ ಮುಖ್ಯದ್ವಾರದಿಂದ ಹೊರಟು, ಸಂತ ಮೇರಿ ಶಾಲೆಯ ದ್ವಾರದಿಂದ ಹೊರಬಂದು ಶಿರ್ವ ಪೇಟೆಯಲ್ಲಿ ಭಕ್ತರಿಂದ ಮೆರವಣಿಗೆ ಸಾಗಿ ಪೆಟ್ರೋಲ್ ಪಂಪಿನವರೆಗೆ  ಹಾದು ಹೋಗಿ ಅಲ್ಲಿಂದ ತಿರುಗಿ ಸಾವುದ್ ಅಮ್ಮನವರ ಇಗರ್ಜಿಗೆ ತಲುಪಿ ಮೆರವಣಿಗೆ ಸಂಪನ್ನಗೊಂಡಿತು.

   ಮೆರವಣಿಗೆಯ ಉದ್ದಕ್ಕೂ ದೇವರ ಭಕ್ತಿ ಗೀತೆಗಳು ಮೊಳಗಿದವು. ಮೆರವಣಿಗೆ ಮೆರಗನ್ನು ಹೆಚ್ಚಿಸಲು ಬ್ರಾಸ್ ಬ್ಯಾಂಡ್ ಹಾಗೂ ಯುವಕರ ತಂಡದಿಂದ ಛತ್ರಿಯ ಮೆರವಣಿಗೆ ಹಿಂದಿನ ವರ್ಷದಲ್ಲಿ ಪರಮ ಪ್ರಸಾದವನ್ನು ಸೇವಿಸಿದ ಮಕ್ಕಳಿಂದ ಹೂವು ಅರ್ಪಣೆ, ತೆರೆದ ವಾಹನದಲ್ಲಿ ಪರಮ ಪ್ರಸಾದವನ್ನು ಹಿಡಿದು ಪೇಟೆಯಲ್ಲಿ ಸಂಭ್ರಮದ ದಿಂದ ಮೆರವಣಿಗೆ ನಡೆಯಿತು.

   ಪರಮ ಪ್ರಸಾದದ ಮೆರವಣಿಗೆಯಲ್ಲಿ ಶಿರ್ವ ಹಾಗೂ ಆಸುಪಾಸಿನ  ಸರಿ ಸುಮಾರು 2,000 ಜನಕ್ಕೂ ಮಿಕ್ಕಿ ಭಕ್ತಾಧಿಗಳು ಪಾಲ್ಗೊಂಡರು. ಪರಮ ಪ್ರಸಾದದ ಮೆರವಣಿಗೆಯ ನಂತರ ಬಂದ ಎಲ್ಲಾ ಭಕ್ತಾದಿಗಳಿಗೆ ಪರಮ ಪ್ರಸಾದದ ಆಶೀರ್ವಾದವನ್ನು ನೀಡಿ ಬಂದ ಎಲ್ಲಾ ಭಕ್ತಾದಿಗಳಿಗೆ ಸಹ ಭೋಜನವನ್ನು  ಏರ್ಪಡಿಸಲಾಗಿತ್ತು.

   ಈ ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರಾಯೋಜಕರಾದ ದಾನಿಗಳನ್ನು ಸನ್ಮಾನಿಸಲಾಯಿತು. ಭಕ್ತಾದಿಗಳಿಗೆ ಭೋಜನವನ್ನು ಏರ್ಪಡಿಸಿದ ದಾನಿಗಳಾದ ಗಾಡ್ವಿನ್ ಲವೀನಾ ಹಾಗೂ ಕ್ಲೋವಿ ಅರನ್ನ ಇವರಿಗೆ ಶಾಲು ಹೊಂದಿಸಿ ಸನ್ಮಾನಿಸಲಾಯಿತು.

   ಪರಮ ಪ್ರಸಾದದ ಮೆರವಣಿಗೆಯಲ್ಲಿ ಶಿರ್ವ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ರೆ. ಫಾ. ಡಾ. ಲೆಸ್ಲಿ ಕ್ಲಿಪ್ಪರ್ಡ್ ಡಿಸೋಜಾ, ಚರ್ಚಿನ ಸಹಾಯಕ ಧರ್ಮಗುರುಗಳಾದ  ಫಾ. ರಾಲ್ವಿನ್ ಅರನ್ನ, ಫಾ. ರೋಷನ್ ಡಿಸೋಜಾ, ಫಾ. ಅನಿಲ್ ರೊಡ್ರಿಗಸ್, ಫಾ. ವಿನ್ಸೆಂಟ್ ಲೋಬೋ (ಕಲ್ಕತ್ತಾ), ಫಾ. ಕಿರಣ್ ನಜರೆತ್, (SDB ) ಫಾ. ಅಲ್ವಿನ್ ಬೋಳ (SDB ), ಫಾ. ರೂವೆಲ್ ಫರ್ನಾಂಡಿಸ್(SDB ) ಉಪಸ್ಥಿತರಿದ್ದರು.

    ಪಾಲನ ಮಂಡಳಿಯ ಉಪಾಧ್ಯಕ್ಷರಾದ ಜುಲಿಯನ್ ರೊಡ್ರಿಗಸ್, ಕಾರ್ಯದರ್ಶಿಯಾದ ಗಿಲ್ಬರ್ಟ್ ಪಿಂಟೋ, ಆಯೋಗದ ಸಂಚಾಲಕಿ ಶಾಲಿನಿ ಕೊರ್ಡ, ಆರ್ಥಿಕ ಸಮಿತಿಯ ಸದಸ್ಯರು ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಶಿರ್ವ ಪೊಲೀಸ್ ಠಾಣಾಧಿಕಾರಿ ಹಾಗೂ ಠಾಣಾ ಸಿಬ್ಬಂದಿಗಳು ಪೇಟೆಯ ರಸ್ತೆಯಲ್ಲಿ ಮೆರವಣಿಗೆಯ ಬಂದೋಬಸ್ತ್  ಹಾಗೂ ವಾಹನ ಸಂಚಾರವನ್ನು ಅಚ್ಚುಕಟ್ಟಾಗಿ ಮಾಡುವಲ್ಲಿ ಸಹಕರಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.