• Home  
  • ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಪ್ರಥಮ ಗ್ರಾಮ ಸಭೆ (Uchila Bada Gram Panchayat First Gram Sabha)
- PROBLEMS

ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಪ್ರಥಮ ಗ್ರಾಮ ಸಭೆ (Uchila Bada Gram Panchayat First Gram Sabha)

Share:   ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಪ್ರಥಮ ಗ್ರಾಮ ಸಭೆ   ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿದ ಗ್ರಾಮಸ್ಥರು, ಉತ್ತರ ಶೂನ್ಯ (Uchila) ಉಚ್ಚಿಲ: ಉಚ್ಚಿಲ ಬಡಾಗ್ರಾಮ ಪಂಚಾಯತಿಯ ಪ್ರಥಮ ಗ್ರಾಮ ಸಭೆಯು ಉಚ್ಚಿಲ ಬಡಾಗ್ರಾಮ ಪಂಚಾಯತಿಯ ಅಧ್ಯಕ್ಷ ಶಿವಕುಮಾರ್‌ ಮೆಂಡನ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆಯಿತು. ಕೃಷಿ ಇಲಾಖಾಧಿಕಾರಿ ಪುಷ್ಪಲತಾರವರು ನೋಡಲ್‌ ಅಧಿಕಾರಿಯಾಗಿ ಭಾಗವಹಿಸಿದ್ದರು.   ಗ್ರಾಮದ ಅಭಿವೃಧ್ಧಿಯ ಬಗ್ಗೆ ಗ್ರಾಮಸ್ಥರು ಹತ್ತು ಹಲವು ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದರೂ. […]

(Uchila) ಉಚ್ಚಿಲ: ಉಚ್ಚಿಲ ಬಡಾಗ್ರಾಮ ಪಂಚಾಯತಿಯ ಪ್ರಥಮ ಗ್ರಾಮ ಸಭೆಯು ಉಚ್ಚಿಲ ಬಡಾಗ್ರಾಮ ಪಂಚಾಯತಿಯ ಅಧ್ಯಕ್ಷ ಶಿವಕುಮಾರ್‌ ಮೆಂಡನ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆಯಿತು.

ಕೃಷಿ ಇಲಾಖಾಧಿಕಾರಿ ಪುಷ್ಪಲತಾರವರು ನೋಡಲ್‌ ಅಧಿಕಾರಿಯಾಗಿ ಭಾಗವಹಿಸಿದ್ದರು.

  ಗ್ರಾಮದ ಅಭಿವೃಧ್ಧಿಯ ಬಗ್ಗೆ ಗ್ರಾಮಸ್ಥರು ಹತ್ತು ಹಲವು ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದರೂ. “ಆಯಿತು ನೋಡೋಣʼ ಸರಿ ಪಡಿಸೋಣ” ಎಂಬ ಹಾರಿಕೆಯ ಉತ್ತರದಲ್ಲೇ ಗ್ರಾಮ ಸಭೆ ಮುಗಿಯಿತು.

ಉಚ್ಚಿಲ ಪೊಲ್ಯ ರಸ್ತೆಯ ಬಗ್ಗೆ

ಉಚ್ಚಿಲ ಪೊಲ್ಯ ರಸ್ತೆಯುಸಂಪೂರ್ಣ ಕುಲಗೆಟ್ಟಿದ್ದು, ಸಾರ್ವಜನಿಕರೋರ್ವರು ಈ ಬಗ್ಗೆ ಪ್ರಶ್ನಿಸಿದಾಗ, ಈ ರಸ್ತೆಗೆ ಈಗಾಗಲೇ 1 ಕೋಟಿ 26 ಲಕ್ಷ ರೂಪಾಯಿಗೆ ಟೆಂಡರ್‌ ಕರೆಯಲಾಗಿದೆ. ಕಾರ್ಕಳದ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಅವರಿಗೆ ಗುತ್ತಿಗೆ ನೀಡಲಾಗಿದ್ದು, ಸದ್ಯದಲ್ಲಿಯೇ ವ್ಯವಸ್ಥಿತ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ನೆರವೇರಲಿದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.

 ಸದ್ಯದಲ್ಲಿಯೇ ವ್ಯವಸ್ಥಿತ ಮೀನು ಮಾರುಕಟ್ಟೆ

ಅದಾನಿ ಸಂಸ್ಥೆಯವರು 17 ಲಕ್ಷ ರುಪಾಯಿ ವೆಚ್ಚದಲ್ಲಿ ಸಂತೆ ತರಕಾರಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಿದ್ದು, ಅದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಈ ಬಗ್ಗೆ ಮೀಡಿಯಾ ಕನ್ನಡ ವಿಸ್ಕೃತ ವರದಿ ಮಾಡಿದ್ದು, ಕೆಲವೇ ದಿನಗಳಲ್ಲಿ ತರಕಾರಿ ಮಾರಿಕಟ್ಟೆಯನ್ನು ಮೀನು ಮಾರುಕಟ್ಟೆಯಾಗಿ ಪರಿವರ್ತಿಸಲಾಗುವುದು. ಪಣಿಯೂರು ಉಚ್ಚಿಲ ತಿರುವಿನಲ್ಲಿ ಮೀನು ಮಾರಾಟ ಮಾಡುವುದರಿಂದ ಜನರಿಗೆ ಅತೀವ ತೊಂದರೆ ಆಗುತ್ತಿರುವುದನ್ನು ಮನಗಂಡು ಅಲ್ಲಿ ಮೀನು ಮಾರಾಟ ಮಾಡುವುದನ್ನು ನಿಷೇಧಿಸಿ, ಅವರನ್ನು ಮೀನು ಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು. ಗ್ರಾಮ ಪಂಚಾಯತ್‌ ಆದೇಶವನ್ನು ಧಿಕ್ಕರಿಸಿ ಮೀನು ಮಾರಾಟ ಮಾಡಿದರೆ, ಅವರ ವಿರುದ್ಧ ಪೋಲಿಸರಿಗೆ ದೂರು ನೀಡಿ ಪ್ರಕರಣ ದಾಖಲಿಸಲಾಗುವುದು ಎಂದೂ ಅಧ್ಯಕ್ಷರು ಗ್ರಾಮ ಸಭೆಗೆ ಮಾಹಿತಿ ನೀಡಿದರು.

  ಉಪಾಧ್ಯಕ್ಷರಿಂದ ಗ್ರಾಮ ಪಂಚಾಯತ್ವಿರುದ್ಧ ಆರೋಪ:

ಉಚ್ಚಿಲ ಬಡಾಗ್ರಾಮ ಪಂಚಾಯತ್‌ ಉಪಾಧ್ಯಕ್ಷ ದೀಪಕ್‌ ರವರು ಸಾಮಾಜಿಕ ಜಾಲತಾಣವಾದ ಪೇಸ್‌ಬುಕ್‌ನಲ್ಲಿ ಗ್ರಾಮ ಪಂಚಾಯತ್‌ ಕಮಿಷನ್‌ ದಂಧೆ ಮತ್ತು ಅವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪ ಮಾಡಿದ್ದರು. ಈ ಬಗ್ಗೆ ಗ್ರಾಮಸ್ಥರು ಉಚ್ಚಿಲ ಬಡಾ ಗ್ರಾಮ ಪಂಚಾಯತಿಯಲ್ಲಿ ಅವ್ಯಹಾರ ನಡೆದಿದೆಯೇ ಎಂದು ಉಪಾಧಯಕ್ಷರಲ್ಲಿ ಸ್ಪಷ್ಠನೆ ಕೇಳಿದರು. ಅದಕ್ಕೆ ಉತ್ತರಿಸಿದ ಉಪಾಧ್ಯಕ್ಷ, ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ಉತ್ತರ ನೀಡುತ್ತೇನೆ ಎಂದರು.

ಕಾಪು ಪುರಸಭೆಗೆ ಬಡಾ ಗ್ರಾಮ ಪಂಚಾಯತಿಯನ್ನು ವಿಲೀನ ಮಾಡಲು ಗ್ರಾಮಸ್ಥರ ಆಗ್ರಹ

ಬಡಾ ಗ್ರಾಮ ಪಂಚಾಯತಿಯನ್ನು ಕಾಪು ಪುರಸಭೆಗೆ ವಿಲೀನ ಮಾಡುವ ನಿರ್ಣಯ ಕೈಗೊಳ್ಳುವಂತೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು. ಇದರಿಂದ ನೀರಿನ ಸಮಸ್ಯೆ ಮತ್ತು ಮುಖ್ಯವಾಗಿ ತ್ಯಾಜ್ಯ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ಗ್ರಾಮ ಸಭೆಯಲ್ಲಿ ನಿರ್ಣಯ ಆಗಿಲ್ಲ.

 ಗ್ರಾಮ ಪಂಚಾಯತ್‌ ಅಧ್ಯಕ್ಷ ಶಿವಕುಮಾರ್‌ ಮೆಂಡನ್‌ರವರು ಮಾತನಾಡಿ ಕಾಪು ಪುರಸಭೆಯೊಂದಿಗೆ ವಿಲೀನ ಗೊಳಿಸುವ ಬಗ್ಗೆ ವಿಶೇಷ ಗ್ರಾಮ ಸಭೆ ಕರೆದು ಅಲ್ಲಿ ನಿರ್ಣಯಮಾಡಬೇಕು. ಮುಂದಿನ ದಿನದಲ್ಲಿ ವಿಶೇಷ ಸಭೆ ಕರೆಯೋಣ ಎಂದರು.

    ಗ್ರಾಮದಲ್ಲಿ ತ್ಯಾಜ್ಯ ಸಮಸ್ಯೆ, ನೀರಿನ ಸಮಸ್ಯೆ, ಹೆದ್ದಾರಿ ಪಕ್ಕದಲ್ಲಿ ಮೀನು ಮಾರಾಟದಿಂದ ಸ್ಥಳೀಯರಿಗೆ ತೊಂದರೆ, ಕೋಳಿ, ಮಾಂಸದಂಗಡಿಗಳಿಂದ ಪರಿಸರ ಮಾಲಿನ್ಯ ಉಂಟಾಗುವ ಬಗ್ಗೆ ಗ್ರಾಮಸ್ಥರು ದೂರಿದ್ದಾರೆ.

ಅಧಿಕಾರಿಗಳ ಗೈರು:

  ಪಶು ಸಂಗೋಪನೆ, ಮೆಸ್ಕಾಂ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮತ್ತು ಶಿಕ್ಷಣ ಇಲಾಖಾಧಿಕಾರಿಗಳು ಆಗಮಿಸಿ ತಮ್ಮ ಇಲಾಖಾ ಮಾಹಿತಿ ನೀಡಿದರು. ಆದರೆ ಪೊಲೀಸ್‌ ಇಲಾಖೆ, ಮೀನುಗಾರಿಕಾ ಇಲಾಖೆ, ಹೆದ್ದಾರಿ ಇಲಾಖಾಧಿಕಾರಿಗಳು ಗೈರಾಗಿದ್ದರೂ, ಗ್ರಾಮಸ್ಥರು ತಲೆ ಕೆಡಿಸಿಕೊಂಡಿಲ್ಲ.

Leave a comment

Your email address will not be published. Required fields are marked *

eMedia Kannada  @2025. All Rights Reserved.