ಮೂಡುಬೆಳ್ಳೆ ದೇಗುಲದಲ್ಲಿ ಸಹಸ್ರ ಬಿಲ್ವಾರ್ಚನಾ ಪೂಜಾ ಕಾರ್ಯಕ್ರಮ
ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ಬಿ ಸಿ ಟ್ರಸ್ಟ್ ಆಯೋಜನೆ
(Modu Belle) ಮೂಡುಬೆಳ್ಳೆ : ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಸೋಮವಾರ ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ ಬೆಳ್ಳೆ ಕಟ್ಟಿಂಗೇರಿ ಕಾರ್ಯಕ್ಷೇತ್ರ ಶಿರ್ವ ವಲಯದ ಆಯೋಜನೆಯಲ್ಲಿ ಸಹಸ್ರ ಬಿಲ್ವಾರ್ಚನಾ ಪೂಜಾಜ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮವು ಪ್ರಥಮದಲ್ಲಿ ದೇವರಿಗೆ ಸಹಸ್ರ ಬಿಲ್ವಾರ್ಚನ ಪೂಜಾ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮವು ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿರಂಜನ್ ರಾವ್ ನೆರವೇರಿಸಿದರು.
ಸಭಾ ಕಾರ್ಯಕ್ರಮದ ಪ್ರವಚನಕಾರ ವೇದಮೂರ್ತಿ ವಿಖ್ಯಾತ್ ಭಟ್ ರವರು, ಮಕ್ಕಳಲ್ಲಿ ಇರಬೇಕಾದ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಹಾಗೂ ದೇವರ ಸ್ಮರಣೆಯಿಂದ ಆಗುವ ಅನುಕೂಲತೆ ಮಕ್ಕಳನ್ನು ಬೆಳೆಸುವಲ್ಲಿ ತಂದೆ ತಾಯಿಯರ ಪಾತ್ರ ಹೀಗೆ ಅನೇಕ ವಿಷಯಗಳ ಬಗ್ಗೆ ಉತ್ತಮವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ನಿಕಟ ಪೂರ್ವ ಜನ ಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷ ದೇವದಾಸ್ ಹೆಬ್ಬಾರ್, ವಲಯ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಬೆಳ್ಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ದಿವ್ಯ ಆಚಾರ್ಯ, ಎರಡು ಒಕ್ಕೂಟಗಳ ಅಧ್ಯಕ್ಷರಾದ ಶ್ರೀಮತಿ ದೀಪ, ಶ್ರೀಮತಿ ಸುಜಾತ ಸುವರ್ಣ ಹಾಗೂ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

