• Home  
  • ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ : ವೇ.ಮೂ ಗೋವಿಂದ ರಾಜ್ ಭಟ್ (God’s blessings are possible only when you bow down: Ve.Moo Govinda Raj Bhat)
- ಮನೋರಂಜನೆ

ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ : ವೇ.ಮೂ ಗೋವಿಂದ ರಾಜ್ ಭಟ್ (God’s blessings are possible only when you bow down: Ve.Moo Govinda Raj Bhat)

Share: ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ : ವೇ.ಮೂ ಗೋವಿಂದ ರಾಜ್ ಭಟ್ ನಟೇಶ ನೃತ್ಯ ನಿಕೇತನ ಸಂಸ್ಥೆ ಉಚ್ಚಿಲ ಇದರ “ಕೃಷ್ಣಂ ವಂದೇ ಜಗದ್ಗುರುಂ” ನೃತ್ಯ ನಾಟಕ ಪ್ರಸ್ತುತಿ (Uchila)ಉಚ್ಚಿಲ : ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ. ದೇವರಂತೆ ಗುರುಗಳಿಗೂ ಬಗ್ಗಿದರೆ ಜೀವನದಲ್ಲಿ ಯಶ ಖಂಡಿತ ಎಂದು ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಗೋವಿಂದ ರಾಜ್ ಭಟ್ ಹೇಳಿದರು.     ಅವರು ನಟೇಶ ನೃತ್ಯ ನಿಕೇತನ ಸಂಸ್ಥೆ ಉಚ್ಚಿಲ ಇದರ […]

(Uchila)ಉಚ್ಚಿಲ : ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ. ದೇವರಂತೆ ಗುರುಗಳಿಗೂ ಬಗ್ಗಿದರೆ ಜೀವನದಲ್ಲಿ ಯಶ ಖಂಡಿತ ಎಂದು ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಗೋವಿಂದ ರಾಜ್ ಭಟ್ ಹೇಳಿದರು.

    ಅವರು ನಟೇಶ ನೃತ್ಯ ನಿಕೇತನ ಸಂಸ್ಥೆ ಉಚ್ಚಿಲ ಇದರ 22 ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವಠಾರದಲ್ಲಿ ಜರಗಿದ “ಕೃಷ್ಣಂ ವಂದೇ ಜಗದ್ಗುರುಂ” ಕನ್ನಡ ನೃತ್ಯ ನಾಟಕ ಭರತನಾಟ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

  ವಿದೂಷಿ ಮಂಗಳಾ ಕಿಶೋರ್ ರವರ ನೇತೃತ್ವದ ನಟೇಶ ನೃತ್ಯ ನಿಕೇತನ ಸಂಸ್ಥೆ ಮತ್ತಷ್ಟು ವಿದ್ಯಾರ್ಥಿಗಳಿಗೆ ನಾಟ್ಯ ಕಲೆ ಕಲಿಸಲಿ ಎಂದು ಶುಭ ಹಾರೈಸಿದರು.

 ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಬಾಲ್ಯದಲ್ಲಿ ವಿದೇಶಿ ಸಂಸ್ಕೃತಿಯ ಬದಲು ಅಪ್ಪಟ ದೇಶಿ ಸಂಸ್ಕೃತಿಯ ಭರತನಾಟ್ಯಕ್ಕೆ ಒತ್ತು ನೀಡಬೇಕು.  ಮಕ್ಕಳನ್ನು ಸನ್ನಡತೆಯಲ್ಲಿ ಸಾಗಲು ಭರತನಾಟ್ಯ ಪ್ರಮುಖವಾಗಿದೆ ಎಂದರು.

   ವಿದ್ವಾನ್ ಡಾ. ಪಿ. ಶ್ರೀಧರ ಆಚಾರ್ಯ ಮಾತನಾಡಿ, ಕರಾವಳಿ ಕರ್ನಾಟಕ ಶೈಲಿಯು ಭರತನಾಟ್ಯದಲ್ಲಿ ಬರಬೇಕಿದೆ. ಹಿಮ್ಮೇಳವಿಲ್ಲದೆ ಭರತನಾಟ್ಯವಿಲ್ಲ. ಆದರೆ ಇಂದು ಹಿಮ್ಮೇಳ ಮರೆಯಾಗುತ್ತಿದೆ ಎಂದರು.

ಸನ್ಮಾನ/ ಗೌರವ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯ ಗುರು ವಿದೂಷಿ ಭಾಗೀರಥಿ ಎಮ್ ರಾವ್ , ವಯೋಲಿನ್ ವಾದಕ ವಿದ್ವಾನ್ ಡಾ. ಪಿ. ಶ್ರೀಧರ ಆಚಾರ್ಯ, ಕಲಾವಿದ ವಿಜೇಶ್ ದೇವಾಡಿಗರನ್ನು ಸನ್ಮಾನಿಸಲಾಯಿತು. ಭರತನಾಟ್ಯ ಜೂನಿಯರ್ ಗ್ರೇಡ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

   ವಿದೂಷಿ ಭಾಗೀರಥಿ ಎಮ್ ರಾವ್, ಬಿ.ಎಂ. ಶ್ರೀನಿವಾಸ ಮಾತನಾಡಿದರು.

  ನೃತ್ಯ ವಿದೂಷಿ ವೀಣಾ ಎಲ್ ಸಾಮಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

  ಈ ಸಂದರ್ಭ ಬಡಾ ಗ್ರಾ.ಪಂ. ಅಧ್ಯಕ್ಷ  ಶಿವಕುಮಾರ್ ಮೆಂಡನ್, ನಾಟ್ಯ ಗುರು ವಿದೂಷಿ ಭಾಗೀರಥಿ ಎಮ್ ರಾವ್, ವಯೋಲಿನ್ ವಾದಕ ವಿದ್ವಾನ್ ಡಾ.ಪಿ. ಶ್ರೀಧರ ಆಚಾರ್ಯ, ಮುಲ್ಕಿ ದೇವಾಡಿಗ ಸಂಘದ ಅಧ್ಯಕ್ಷರಾದ  ಸಂಜೀವ ದೇವಾಡಿಗ, ಬಿ.ಎಂ. ಶ್ರೀನಿವಾಸ, ನಟೇಶ ನೃತ್ಯ ನಿಕೇತನ ಸಂಸ್ಥೆ ಉಚ್ಚಿಲ ಮುಖ್ಯಸ್ಥೆ ವಿದೂಷಿ ಮಂಗಳಾ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.

   ವಿಜೇಶ್ ದೇವಾಡಿಗ ನಿರೂಪಿಸಿ, ಪಂಚಮಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ನಟೇಶ ನೃತ್ಯ ನಿಕೇತನ ಸಂಸ್ಥೆ ಉಚ್ಚಿಲ ಸಂಸ್ಥೆಯ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಪರಮಾತ್ಮನ ಪುಣ್ಯ ಕಥಾನಕ :ಕೃಷ್ಣಂ ವಂದೇ ಜಗದ್ಗುರುಂ” ಕನ್ನಡ ನೃತ್ಯ ನಾಟಕ ಜರಗಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.