• Home  
  • ಉಡುಪಿ: ಮಾ. 4 ರಿಂದ 8 ರವರೆಗೆ ರಂಗಭೂಮಿ‌ ರಂಗೋತ್ಸವ (Udupi: Theatre Festival from March 4 to 8)
- ಸಾಂಸ್ಕೃತಿಕ

ಉಡುಪಿ: ಮಾ. 4 ರಿಂದ 8 ರವರೆಗೆ ರಂಗಭೂಮಿ‌ ರಂಗೋತ್ಸವ (Udupi: Theatre Festival from March 4 to 8)

Share: ಉಡುಪಿ: ಮಾ. 4 ರಿಂದ 8 ರವರೆಗೆ ರಂಗಭೂಮಿ‌ ರಂಗೋತ್ಸವ   ಮಾ.6ರಿಂದ 8ರ ವರೆಗೆ ದಕ್ಷಿಣ ಮಧ್ಯ ಭಾರತ ರಾಜ್ಯಗಳ ಜಾನಪದ ಉತ್ಸವ (Udupi) ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯ ಈ ವರ್ಷದ ರಂಗಭೂಮಿ‌ ರಂಗೋತ್ಸವ ಇದೇ ಮಾ.4 ರಿಂದ 8ರ ವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಬಯಲು ರಂಗಮಂದಿರದಲ್ಲಿ ನಡೆಯಲಿದೆ.  ಮೊದಲನೆಯ ದಿನ ಮಾ. 4 ರಂದು ಸಂಜೆ 6 ಗಂಟೆಗೆ ಹಿರಿಯ ರಂಗಕರ್ಮಿ, ನಾಟಕಕಾರ ಪ್ರಸನ್ನ ಅವರಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ […]

(Udupi) ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯ ಈ ವರ್ಷದ ರಂಗಭೂಮಿ‌ ರಂಗೋತ್ಸವ ಇದೇ ಮಾ.4 ರಿಂದ 8ರ ವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಬಯಲು ರಂಗಮಂದಿರದಲ್ಲಿ ನಡೆಯಲಿದೆ.

 ಮೊದಲನೆಯ ದಿನ ಮಾ. 4 ರಂದು ಸಂಜೆ 6 ಗಂಟೆಗೆ ಹಿರಿಯ ರಂಗಕರ್ಮಿ, ನಾಟಕಕಾರ ಪ್ರಸನ್ನ ಅವರಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗಭೂಮಿ‌ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

  ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎರಡನೆಯ ದಿನ ಗುರುವಾರದಂದು ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಹಾಗೂ ದಿ. ಮಲ್ಪೆ ಮಧ್ವರಾಜ್ ಸ್ಮಾರಕ 46ನೇ ವರ್ಷದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

  ಈ ಸಂದರ್ಭದಲ್ಲಿ ನಾಟಕ ಸ್ಪರ್ಧೆಯ ವಿಜೇತ ಸುಮನಸಾ ಕೊಡವೂರು ತಂಡದ “ಈದಿ” ನಾಟಕದ  ಪ್ರದರ್ಶನ ನಡೆಯಲಿದೆ ಎಂದರು.

   ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಮಾತನಾಡಿ, ಮಾ.6 ರಿಂದ 8ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರದ ಆಶ್ರಯದಲ್ಲಿ ದಕ್ಷಿಣ ಮಧ್ಯ ಭಾರತ ರಾಜ್ಯಗಳ ಜಾನಪದ ಉತ್ಸವ ನಡೆಯಲಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸಗಢ ರಾಜ್ಯಗಳ ಜಾನಪದ ಕಲಾವೈವಿಧ್ಯ ಪ್ರದರ್ಶನಗೊಳ್ಳಲಿದೆ.

  ಮಾ.8ರಂದು ಸಂಜೆ 5.30ಕ್ಕೆ ಜಾನಪದ ಪ್ರಶಸ್ತಿ ಪ್ರದಾನ ಹಾಗೂ ಜಾನಪದ ಉತ್ಸವದ ಸಮಾರೋಪ ಜರಗಲಿದೆ ಎಂದು ತಿಳಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.