ಎಸ್.ಕೆ.ಪಿ.ಎ ಕಾಪು ವಲಯ ಸದಸ್ಯರ ಕಾಪು ಪ್ರೀಮಿಯರ್ ಲೀಗ್ ಸಮಾರೋಪ
ಕ್ರಿಕೆಟ್ ಮುಂಬೈ ವಾರಿಯರ್ ಪ್ರಥಮ, ವಾಲಿಬಾಲ್ ಎಸ್ ಆರ್ ಎಸ್ ಪ್ರಥಮ
(Kaup)ಕಾಪು : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಮತ್ತು ಉಡುಪಿ ಇದರ ಕಾಪು ವಲಯ ಹಮ್ಮಿಕೊಂಡಿರುವ ಕಾಪು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಕಾಪು ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದಿದ್ದು, ಸಮಾರೋಪ ಕಾರ್ಯಕ್ರಮವನ್ನು ದಂಡತೀರ್ಥ ಶಾಲಾ ಪ್ರಾಂಶುಪಾಲ ನೀಲಾನಂದ ನಾಯ್ಕ್ ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ತಮ್ಮ ಕೆಲಸದ ಒತ್ತಡದ ಮದ್ಯೆ ಬಿಡುವು ಮಾಡಿಕೊಂಡು ಇಡೀದಿನ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆದ ಕಾಪುವಿನ ಛಾಯಾ ಗ್ರಾಹಕರು ಅಭಿನಂದಾರ್ಹರು. ಮುಂದೆಯೂ ಬಿಡುವು ಮಾಡಿ, ಇನ್ನಷ್ಟು ಕ್ರೀಡೆಯನ್ನು ಇಲ್ಲಿ ಆಯೋಜಿಸಿದರೆ ನಮ್ಮ ಸಂಸ್ಥೆ ಸಹಕಾರ ನೀಡಲಿದೆ ಎಂದರು.
ಎಸ್.ಕೆ.ಪಿ.ಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್ ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ವಿವೇಕ್ ಬಳ್ಳಾಲ್ ನೇತೃತ್ವದ ಮುಂಬೈ ವಾರಿಯರ್ ತಂಡವು ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ಪಡೆದಿದೆ. ಸುಭಾಷ್ ಬಳ್ಳಾಲ್ ನೇತೃತ್ವದ ಬಳ್ಳಾಲ್ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನಿಯಾಗಿ ಹೊರ ಹೊಮ್ಮಿದೆ.
ರವಿ ಕಟಪಾಡಿ ನೇತೃತ್ವದ ಎಸ್ ಆರ್ ಎಸ್ ಫ್ರೆಂಡ್ಸ್ ಕಟಪಾಡಿ ತಂಡವು ವಾಲಿಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವಾಗಿದೆ. ಅರುಲ್ ಶಿರ್ವ ನೇತೃತ್ವದ ಶಿರ್ವ ಸ್ಟೈಕರ್ಸ್ ತಂಡ ರನ್ನರ್ಸ್ ಆಗಿ ಹೊರ ಹೊಮ್ಮಿದೆ.
ಸಮಾರೋಪದ ಸಮಾರಂಭದಲ್ಲಿ ಗಣ್ಯರು ಬಹುಮಾನ ವಿತರಿಸಿದರು.
ಇದೇ ಸಂದರ್ಭ ಕ್ರಿಕೆಟ್ನಲ್ಲಿ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ ಮ್ಯಾನ್, ಮ್ಯಾನ್ ಆಫ್ ದ ಮ್ಯಾಚ್, ವಾಲಿಬಾಲ್ ನಲ್ಲಿ ಬೆಸ್ಟ್ ಅಟ್ಯಾಕರ್, ಪಾಸರ್ ಪ್ರಶಸ್ತಿ ನೀಡಲಾಯಿತು.
ವೇದಿಕೆಯಲ್ಲಿ ಎಸ್ಕೆಪಿಎ ಕಾಪು ವಲಯದ ಅಧ್ಯಕ್ಷ ಸಂತೋಷ್ ಕಾಪು, ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಪ್ರಕಾಶ್ ಶೇರಿಗಾರ್, ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ, ತಂಡಗಳ ಮಾಲಕರಾದ ವಿವೇಕ್ ಬಲ್ಲಾಳ್, ಅರುಲ್ ಶಿರ್ವ, ರವಿ ಕುಮಾರ್ ಕಟಪಾಡಿ, ಸುಭಾಸ್ ಬಲ್ಲಾಳ್, ಕ್ರೀಡಾ ಕಾರ್ಯದರ್ಶಿಗಳಾದ ಅನೀಶ್ ಕಾಪು, ಉದಯ್ ಇನ್ನಾ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.
ವಲಯದ ಅಧ್ಯಕ್ಷ ಸಂತೋಷ್ ಕಾಪು ಸ್ವಾಗತಿಸಿದರು. ಶ್ರೀನಿವಾಸ ಐತಾಳ್ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ವಂದಿಸಿದರು.

