ಪಡುಬಿದ್ರಿ ಮೀನುಗಾರರ ಪ್ರಾ. ವಿ. ಸಹಕಾರ ಸಂಘದ ಅಧ್ಯಕ್ಷರಾಗಿ ಲೀಲಾಧರ್ ಸಾಲ್ಯಾನ್ ಆಯ್ಕೆ
ಉಪಾಧ್ಯಕ್ಷರಾಗಿ ಪಾಂಡುರಂಗ ಕೋಟ್ಯಾನ್ ಆಯ್ಕೆ
(Padubidri) ಪಡುಬಿದ್ರಿ: ಪಡುಬಿದ್ರಿ ಮೀನುಗಾರರ ಪ್ರಾಥಮಿಕ ವಿವಿಧೋದ್ದೇಶ ಸಹಕಾರಿ ಸಂಘ ಇದರ 2026-31 ರ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಲೀಲಾಧರ ಸಾಲ್ಯಾನ್ ಮತ್ತು ಉಪಾಧ್ಯಕ್ಷರಾಗಿ ಪಾಂಡುರಂಗ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾದರು.
ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಶೇಖರ್ ಸಾಲ್ಯಾನ್ , ಅಶೋಕ್ ಸಾಲ್ಯಾನ್ , ಸುಧಾಕರ್ ಸಾಲ್ಯಾನ್, ಹರೀಶ್ ಪುತ್ರನ್, ಸಂತೋಷ್ ಪಡುಬಿದ್ರಿ, ಕಿರಣ್ ರಾಜ್ ಕರ್ಕೇರ, ಶ್ರೀಮತಿ ಅರತಿ, ಹೀರಾವತಿ ಎನ್ ಕರ್ಕೇರ ಆಯ್ಕೆಗೊಂಡರು.
ಚುನಾವಣಾ ಅಧಿಕಾರಿ ಜಯಂತಿ ಎಸ್ ರವರು ಚುನಾವಣೆ ನಡೆಸಿ ಕೊಟ್ಟರು.

