• Home  
  • ಕೊಡವೂರು: ಏಪ್ರಿಲ್ 18 ರಂದು ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸವ (Kodavoor: Nemotsava at Sri Panchadhoomavati temple on April 18)
- ಧಾರ್ಮಿಕ

ಕೊಡವೂರು: ಏಪ್ರಿಲ್ 18 ರಂದು ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸವ (Kodavoor: Nemotsava at Sri Panchadhoomavati temple on April 18)

Share: ಕೊಡವೂರು: ಏಪ್ರಿಲ್ 18 ರಂದು ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸವ ಸಂಜೆ 3:30ಕ್ಕೆ “ಸಾವಿರ ಸೂಟೆಯ ಬೃಹತ್ ಶೋಭಾಯಾತ್ರೆ” ನಡೆಯಲಿದೆ.  (Udupi) ಉಡುಪಿ: ಕೊಡವೂರು ಗ್ರಾಮದ ಜುಮಾದಿ ನಗರದ ಶ್ರೀ ಪಂಚ ಧೂಮಾವತಿ ದೈವಸ್ಥಾನದಲ್ಲಿ ಏಪ್ರಿಲ್ 18ರ ಶನಿವಾರ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.   ಬೆಳಿಗ್ಗೆ 8:30ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಜುಮಾದಿ ನಗರ ದೈವಸ್ಥಾನದಲ್ಲಿ ಪ್ರಧಾನ ಹೋಮ, ಕಲಾಶಾಭಿಷೇಕ ಮತ್ತು ಚಪ್ಪರ […]

 (Udupi) ಉಡುಪಿ: ಕೊಡವೂರು ಗ್ರಾಮದ ಜುಮಾದಿ ನಗರದ ಶ್ರೀ ಪಂಚ ಧೂಮಾವತಿ ದೈವಸ್ಥಾನದಲ್ಲಿ ಏಪ್ರಿಲ್ 18ರ ಶನಿವಾರ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

  ಬೆಳಿಗ್ಗೆ 8:30ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಜುಮಾದಿ ನಗರ ದೈವಸ್ಥಾನದಲ್ಲಿ ಪ್ರಧಾನ ಹೋಮ, ಕಲಾಶಾಭಿಷೇಕ ಮತ್ತು ಚಪ್ಪರ ಮೂಹೂರ್ತ ಹಾಗೂ ಮಧ್ಯಾಹ್ನ 12:30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

  ಸಂಜೆ 3:30ಕ್ಕೆ ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದಿಂದ ಭಜನಾ ತಂಡಗಳು, ಚೆಂಡೆ, ಡೋಲು ಹಾಗೂ ತಾಳಮದ್ದಳೆಗಳೊಂದಿಗೆ “ಸಾವಿರ ಸೂಟೆಯ ಬೃಹತ್ ಶೋಭಾಯಾತ್ರೆ” ನಡೆಯಲಿದೆ.

   ರಾತ್ರಿ 8:30 ರಿಂದ ಶ್ರೀ ಪಂಚಧೂಮಾವತಿ ಬಂಟ ದೈವಗಳ ವೈಭವದ ನೇಮೋತ್ಸವ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.