• Home  
  •    ಮಜೂರು ಪ್ರೀಮಿಯರ್ ಲೀಗ್-2026 : ಎಂಪಿಎಲ್ ಸೀಸನ್-05 ಉದ್ಘಾಟನೆ (Majuru Premier League-2026 : MPL Season-05 Opening)
- ಕ್ರೀಡೆ

   ಮಜೂರು ಪ್ರೀಮಿಯರ್ ಲೀಗ್-2026 : ಎಂಪಿಎಲ್ ಸೀಸನ್-05 ಉದ್ಘಾಟನೆ (Majuru Premier League-2026 : MPL Season-05 Opening)

Share:    ಮಜೂರು ಪ್ರೀಮಿಯರ್ ಲೀಗ್-2026 : ಎಂಪಿಎಲ್ ಸೀಸನ್-05 ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿದ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಆಜ್ಮತ್ ಆಲಿ (Kaup) ಕಾಪು : ಮಜೂರು ಪ್ರೀಮಿಯರ್ ಲೀಗ್ -2026 ಎಂಪಿಎಲ್ ಸೀಸನ್ 05 ಇದರ ಉದ್ಘಾಟನೆಯನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಆಜ್ಮತ್ ಆಲಿಯವರು ನೆರವೇರಿಸಿದರು ನೆರವೇರಿಸಿ, ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು.    ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಯುವಕರು […]

(Kaup) ಕಾಪು : ಮಜೂರು ಪ್ರೀಮಿಯರ್ ಲೀಗ್ -2026 ಎಂಪಿಎಲ್ ಸೀಸನ್ 05 ಇದರ ಉದ್ಘಾಟನೆಯನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಆಜ್ಮತ್ ಆಲಿಯವರು ನೆರವೇರಿಸಿದರು ನೆರವೇರಿಸಿ, ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು.

   ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಯುವಕರು ಸಾಮಾಜಿಕ ಕಳಕಳಿ ಹಾಗೂ ಕ್ರೀಡಾಕೂಟಕ್ಕೆ ನೀಡುತ್ತಿರುವ ಪ್ರೋತ್ಸಾಹ ನಿಜಕ್ಕೂ ಶ್ಲಾಘನೀಯ ಎಂದು ಪ್ರೋತ್ಸಾಹಿಸಿ ಮಾತನಾಡಿದರು.

   ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆಯವರು ಪ್ರಥಮ ಬಹುಮಾನ ಪಡೆದ ಫೈಝಿ ಬಾಯ್ಸ್ ಹಾಗೂ ದ್ವಿತೀಯ ಬಹುಮಾನ ಪಡೆದ ಫ್ರೆಂಡ್ಸ್ ಮಜೂರು ತಂಡಕ್ಕೆ ಶುಭ ಹಾರೈಸಿದರು.

 ಮಜೂರು ಬದ್ರಿಯ ಜುಮ್ಮಾ ಮಸ್ಜಿದ್ ಅಧ್ಯಕ್ಷ ಡಾ. ಫಾರೂಕ್ ಚಂದ್ರನಗರ, ಅನಿವಾಸಿ ಭಾರತೀಯ ಉದ್ಯಮಿ ರೈಟ್ ಚಾಯ್ಸ್ ಇದರ ಮಾಲಕರಾದ ಆಯಾಜ್ ಕೈಕಂಬ, ಮಾಜಿ ಕಾಪು ಪುರಸಭೆ ಸದಸ್ಯ ಇಮ್ರಾನ್ ಮಜೂರು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಎಸ್.ಡಿ.ಪಿ.ಐ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ‌ ಕೆ.ಪಿ ಸಾದಿಕ್, ಎಂ ಹೆಚ್ ಹಮೀದ್, ಶೌಕತ್‌ ಆಲಿ ಮಲ್ಲಾರು, ಆಯಾಜ್ ಕುಚ್ಚಿಗುಡ್ಡೆ, ಫಕ್ರುದ್ದೀನ್ ಮಜೂರು, ಆಸೀಫ್ ಆಯಾನ್ ಮಜೂರು, ಹರೀಶ್ ಪೂಜಾರಿ, ನಸ್ರುದ್ದಿನ್ ಮಜೂರು, ದೀಪಕ್ ಕುಮಾರ್, ಇಸ್ಮಾಯಿಲ್ ಎಂ.ಎಂ.ಎಸ್, ಎರ್ಮಾಳ್, ಹರೀಶ್ ಪೂಜಾರಿ, ಪ್ರಕಾಶ್ ಶೆಟ್ಟಿ, ಫಯಾಜ್ ಎಫ್. ಎ ವಿಲ್ಲಾ, ಮಂಜುನಾಥ್ ಮಜೂರು, ಕೌಸರ್ ಜುಬೈಲ್, ಕಾರ್ಯಕ್ರಮದ ಆಯೋಜಕ  ಮಿಸ್ಕಿನ್ ಫೌಂಡೇಶನ್ ಸೌದಿ ಅರೇಬಿಯಾ ಇದರ ಅಧ್ಯಕ್ಷರಾದ ಶಂಶುದ್ದಿನ್ ಉಮ್ಮರ್, ಸಲೀಂ ಮಜೂರ್, ಕಾಪು ಸುಲ್ತಾನ್ ಚಾಯ್ಸ್ ಇದರ ಮಾಲಕ ಕಬೀರ್ ಮಜೂರು, ಅಕ್ಬರಾಲಿ, ಮುಸ್ತಾಫಾ ಶಾಯಿಲ್, ಮಜೂರು  ತಂಡಗಳ ಉಸ್ತುವಾರಿ ಫೈಸಲ್ ಮಜೂರು ಹಾಗೂ  ಹಮೀದ್ ಮಲ್ಲಾರ್  ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.