ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಸೀಯಾಳಾಭಿಷೇಕ
ಪ್ರಧಾನ ಅರ್ಚಕ ಕೆ. ರಘುಪತಿ ಉಡುಪ ನೇತೃತ್ವದಲ್ಲಿ ಸಾಮೂಹಿಕ ಸೀಯಾಳಾಭಿಷೇಕ
(Kunjuru) ಕುಂಜೂರು : ಲೋಕಕಲ್ಯಾಣಾರ್ಥವಾಗಿ ಮತ್ತು ಸಕಾಲಿಕ ಮಳೆ, ಬೆಳೆ, ಸಮೃದ್ಧಿಗಾಗಿ ಪ್ರಾರ್ಥಿಸಿ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಕೆ. ರಘುಪತಿ ಉಡುಪ ನೇತೃತ್ವದಲ್ಲಿ ಸಾಮೂಹಿಕ ಸೀಯಾಳಾಭಿಷೇಕ ನಡೆಸಲಾಯಿತು.
ಪವಿತ್ರಪಾಣಿ ಕೆ.ಎಲ್. ಕುಂಡಂತಾಯ, ಆಡಳಿತ ಮೊಕ್ತೇಸರ ನಡಿಮನೆ ದೇವರಾಜ ರಾವ್, ಮೊಕ್ತೇಸರರಾದ ಸತೀಶ್ ಕುಂಡಂತಾಯ, ರಾಮಮೂರ್ತಿ ಭಟ್, ಸಂತೋಷ್ ಶೆಟ್ಟಿ, ಚಂದ್ರಹಾಸ ಆಚಾರ್ಯ, ಚಂದ್ರಿಕಾ ಶೆಟ್ಟಿ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವೈ. ಪ್ರಪುಲ್ಲ ಶೆಟ್ಟಿ ಎಲ್ಲೂರುಗುತ್ತು, ಪ್ರಬಂಧಕ ರಾಘವೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

