• Home  
  •   ಚಂದ್ರನಗರ ಬಟರ್ ಫ್ಲೈ ಸಭಾ ಭವನದಲ್ಲಿ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ (Free comprehensive health check-up camp at Chandranagar Butterfly Sabha Bhavan)
- health

  ಚಂದ್ರನಗರ ಬಟರ್ ಫ್ಲೈ ಸಭಾ ಭವನದಲ್ಲಿ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ (Free comprehensive health check-up camp at Chandranagar Butterfly Sabha Bhavan)

Share: ಚಂದ್ರನಗರ ಬಟರ್ ಫ್ಲೈ ಸಭಾ ಭವನದಲ್ಲಿ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಫಾರೂಕ್ ಚಂದ್ರನಗರ   (Kaup)ಕಾಪು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಘಟಕ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಚಂದ್ರನಗರ, ಗ್ರಾಮ ಪಂಚಾಯತ್ ಕುತ್ಯಾರು – ಕಳತ್ತೂರು, ಅಲಯನ್ಸ್ ಕ್ಲಬ್ ಉಡುಪಿ ರಾಯಲ್, […]

(Kaup)ಕಾಪು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಘಟಕ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಚಂದ್ರನಗರ, ಗ್ರಾಮ ಪಂಚಾಯತ್ ಕುತ್ಯಾರು – ಕಳತ್ತೂರು, ಅಲಯನ್ಸ್ ಕ್ಲಬ್ ಉಡುಪಿ ರಾಯಲ್, ರೋಟರಿ ಕ್ಲಬ್ ಶಿರ್ವ ಇದರ ಸಹಯೋಗದೊಂದಿಗೆ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಚಂದ್ರನಗರದ ಬಟರ್ ಫ್ಲೈ ಹಾಲ್ ಸಭಾಂಗಣದಲ್ಲಿ ನಡೆಯಿತು.

 ಕಾರ್ಯಕ್ರಮದ ಉದ್ಘಾಟನೆಯನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ದಂತ ಆರೋಗ್ಯ ಅಧಿಕಾರಿ ಡಾ. ಗಾಯತ್ರಿಯವರು ನೆರವೇರಿಸಿ, ಹಲ್ಲುಗಳ ಶುಚಿತ್ವ ಕಾಪಾಡುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

  ಸಮಾಜ ಸೇವಕ, ಬಟರ್ ಫ್ಲೈ ಪಾರ್ಟಿ ಹಾಲ್ ಮಾಲಕ ಡಾ. ಫಾರೂಕ್ ಚಂದ್ರನಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

   ಈ ಸಂದರ್ಭ ಅವರು ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ, ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ  ಎಂದರು.

 ಶ್ರೀಮತಿ ವಸಂತಿ ಐ. ಸಿ. ಟಿ.ಸಿ ಆಪ್ತ ಸಮಾಲೋಚಕಿ ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಇವರು ಮಾತನಾಡಿ, ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.

 ಉಚಿತ ನೇತ್ರ ತಪಾಸಣೆ, ಮಧುಮೇಹ ರಕ್ತದೊತ್ತಡ ತಪಾಸಣೆ, ದಂತ ಆರೋಗ್ಯ ತಪಾಸಣೆ, ರಕ್ತ ಹೀನತೆ ಕಂಡುಹಿಡಿಯುವ ಪರೀಕ್ಷೆ ಶಿಬಿರದಲ್ಲಿ ನಡೆಸಲಾಯಿತು.

  ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೆಣೈ, ಆರೋಗ್ಯ ರಕ್ಷಾ ಸಮಿತಿ ಕಾಪು ತಾಲೂಕು ಸದಸ್ಯರಾದ ದಿವಾಕರ ಬಿ. ಶೆಟ್ಟಿ ಕಳತ್ತೂರು, ಸಮಾಜ ಸೇವಕರಾದ ದಿವಾಕರ ಡಿ. ಶೆಟ್ಟಿ ಕಳತ್ತೂರು, ಶೌರ್ಯ ಟ್ರಸ್ಟ್ ವ್ಯವಸ್ಥಾಪಕ ಸುಭ್ರಮಣ್ಯ, ನೇತ್ರಾಧಿಕಾರಿ ಶ್ರೀಮತಿ ರಕ್ಷಿತಾ, ಶಿರ್ವ ರೋಟರಿ ಕ್ಲಬ್ ಸದಸ್ಯರಾದ ವಿಠ್ಠಲ್ ನಾಯ್ಕ್ , ಏನ್ ಏನ್ ಓ ಜಿಲ್ಲಾ ಉಪಾಧ್ಯಕ್ಷರಾದ ಯು. ಎ ರಶೀದ್ ಕಾಪು, ಸಮಾಜ ಸೇವಕರಾದ ಡಾ. ಶೇಖ್ ವಹೀದ್ ಉದ್ಯಾವರ, ಶಂಶುದ್ದಿನ್ ಕರಂದಾಡಿ, ಎಸ್. ಎ ರಝಕ್ ಚಂದ್ರನಗರ, ಕಳತ್ತೂರು ಕುತ್ಯಾರು ವಿಭಾಗದ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು

 ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.