• Home  
  • ಉಚ್ಚಿಲ : ನಾಯಿ ಅಡ್ಡ ಬಂದ ಪರಿಣಾಮ ರಿಕ್ಷಾ ಪಲ್ಟಿ, ಚಾಲಕ ಗಂಭೀರ, ನಾಯಿ ಸಾವು (Uchila: Rickshaw overturns after dog crosses path, driver in critical condition, dog dies)
- ಅವಘಡ

ಉಚ್ಚಿಲ : ನಾಯಿ ಅಡ್ಡ ಬಂದ ಪರಿಣಾಮ ರಿಕ್ಷಾ ಪಲ್ಟಿ, ಚಾಲಕ ಗಂಭೀರ, ನಾಯಿ ಸಾವು (Uchila: Rickshaw overturns after dog crosses path, driver in critical condition, dog dies)

Share: ಉಚ್ಚಿಲ : ನಾಯಿ ಅಡ್ಡ ಬಂದ ಪರಿಣಾಮ ರಿಕ್ಷಾ ಪಲ್ಟಿ, ಚಾಲಕ ಗಂಭೀರ, ನಾಯಿ ಸಾವು ಪಣಿಯೂರು ಸೆಂಟರ್ ನಿವಾಸಿ ವಾಸು ಕುಲಾಲ್‌ ರವರ ಮಗ ವಿಶ್ವನಾಥ ಗಾಯಗೊಂಡ ರಿಕ್ಷಾ ಚಾಲಕ (Uchila) ಉಚ್ಚಿಲ: ಉಚ್ಚಿಲಜನಪ್ರಿಯ ಮರದ ಮಿಲ್‌ ಎದುರು ಉಚ್ಚಿಲ – ಮುದರಂಗಡಿ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮ ರಿಕ್ಷಾ ಪಲ್ಟಿಯಾಗಿ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.   ರಿಕ್ಷಾ ಚಾಲಕರನ್ನು ಪಣಿಯೂರು ಸೆಂಟರ್ ನಿವಾಸಿ ವಾಸು ಕುಲಾಲ್‌ […]

(Uchila) ಉಚ್ಚಿಲ: ಉಚ್ಚಿಲಜನಪ್ರಿಯ ಮರದ ಮಿಲ್‌ ಎದುರು ಉಚ್ಚಿಲ – ಮುದರಂಗಡಿ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮ ರಿಕ್ಷಾ ಪಲ್ಟಿಯಾಗಿ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

  ರಿಕ್ಷಾ ಚಾಲಕರನ್ನು ಪಣಿಯೂರು ಸೆಂಟರ್ ನಿವಾಸಿ ವಾಸು ಕುಲಾಲ್‌ ರವರ ಮಗ ವಿಶ್ವನಾಥ ಎಂದು ಗುರುತಿಸಲಾಗಿದೆ.

   ಆತ ಶಾಲಾ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವಾಗ ಈ ಘಟನೆ ಸಂಭವಿಸಿದೆ. ರಿಕ್ಷಾದಲ್ಲಿ ಪ್ರಯಾಣಿಕರು ಇಲ್ಲದ್ದರಿಂದ ಸಂಭಾವ್ಯ ಅವಘಡ ತಪ್ಪಿದೆ.

 ಗಾಯಾಳು ವಿಶ್ವನಾಥ್ ರವರನ್ನು ಉಚ್ಚಿಲದ ಸಮಾಜ ಸೇವಕ ಜಲಾಲ್ ಮತ್ತು ಹಮೀದ್‌ ಎಸ್ಡಿಪಿಐ ಅಂಬುಲೆನ್ಸ್‌ ನಲ್ಲಿ ಉಡುಪಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

  ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.