ಕಾಪು ಶ್ರೀ ಹೊಸಮಾರಿಗುಡಿಗೆ ಮುಂಬಯಿಯ ಮಾಜಿ ಪೊಲೀಸ್ ಆಯುಕ್ತ ಡಾ. ಸತ್ಯಪಾಲ್ ಸಿಂಗ್ ಭೇಟಿ
ಮಾರಿಯಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ಅನುಗ್ರಹ ಪ್ರಸಾದ ನೀಡಿದಶ್ರೀನಿವಾಸ ತಂತ್ರಿ ಕಲ್ಯ
(Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿಗೆ ಭಾರತ ಸರ್ಕಾರದ ಮಾನವ ಸಂಪನ್ಮೂಲ (ಉನ್ನತ ಶಿಕ್ಷಣ) ಮತ್ತು ಜಲಸಂಪನ್ಮೂಲ ಖಾತೆಯ ಮಾಜಿ ಸಚಿವ ಮತ್ತು ಮುಂಬೈನ ಮಾಜಿ ಪೊಲೀಸ್ ಆಯುಕ್ತ, ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯ ಹರಿದ್ವಾರದ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಮತ್ತು ಪತ್ನಿ ಡಾ. ಅಲ್ಕಾ ಸಿಂಗ್ ಹಾಗೂ ರಿಷಿ ಪಲ್ಪುರವರು ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮನ ದರುಶನ ಪಡೆದರು.
ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯರವರು ಮಾರಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಅನುಗ್ರಹ ಪ್ರಸಾದ ನೀಡಿದರು.
ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಶೇಕರ ಸಾಲ್ಯಾನ್, ರಮೇಶ್ ಹೆಗ್ಡೆ ಕಲ್ಯ ಮತ್ತಿತರರು ಉಪಸ್ಥಿತರಿದ್ದರು.

