• Home  
  • ಮೂಳೂರು : ಲಾರಿಗೆ ಇಚರ್ ಟೆಂಪೋ ಡಿಕ್ಕಿ, ಚಾಲಕನ ಕಾಲಿಗೆ ತೀವ್ರ ಗಾಯ (Mulur: Lorry collides with Icher Tempo, driver seriously injured in leg)
- ಅಪಘಾತ

ಮೂಳೂರು : ಲಾರಿಗೆ ಇಚರ್ ಟೆಂಪೋ ಡಿಕ್ಕಿ, ಚಾಲಕನ ಕಾಲಿಗೆ ತೀವ್ರ ಗಾಯ (Mulur: Lorry collides with Icher Tempo, driver seriously injured in leg)

Share: ಮೂಳೂರು : ಲಾರಿಗೆ ಇಚರ್ ಟೆಂಪೋ ಡಿಕ್ಕಿ, ಚಾಲಕನ ಕಾಲಿಗೆ ತೀವ್ರ ಗಾಯ   ಸೋಮವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಘಟಿಸಿದ ಘಟನೆ (Kaup) ಕಾಪು : ಲಾರಿಯೊಂದಕ್ಕೆ ಈಚರ್ ವಾಹನವು ಹಿಂದಿನಿಂದ ಡಿಕ್ಕಿಯಾಗಿ ಈಚರ್ ಚಾಲಕನ ಎರಡೂ ಕಾಲುಗಳಿಗೆ ತೀವ್ರ ಗಾಯವಾದ ಘಟನೆ ರಾ.ಹೆ.66ರ  ಮೂಳೂರು ಗುರುದೇವ್ ಬಾರ್ ಮುಂಭಾಗ ಸೋಮವಾರ ಬೆಳಗ್ಗಿನ ಜಾವ ಘಟಿಸಿದೆ.   ಈಚರ್ ಚಾಲಕನನ್ನು ಹನುಮರಡ್ಡಿ ಇನಾಮತಿ (34) ಎಂದು ಗುರುತಿಸಲಾಗಿದೆ.   ಸೋಮವಾರ ಮುಂಜಾನೆ 2 […]

(Kaup) ಕಾಪು : ಲಾರಿಯೊಂದಕ್ಕೆ ಈಚರ್ ವಾಹನವು ಹಿಂದಿನಿಂದ ಡಿಕ್ಕಿಯಾಗಿ ಈಚರ್ ಚಾಲಕನ ಎರಡೂ ಕಾಲುಗಳಿಗೆ ತೀವ್ರ ಗಾಯವಾದ ಘಟನೆ ರಾ.ಹೆ.66ರ  ಮೂಳೂರು ಗುರುದೇವ್ ಬಾರ್ ಮುಂಭಾಗ ಸೋಮವಾರ ಬೆಳಗ್ಗಿನ ಜಾವ ಘಟಿಸಿದೆ.

  ಈಚರ್ ಚಾಲಕನನ್ನು ಹನುಮರಡ್ಡಿ ಇನಾಮತಿ (34) ಎಂದು ಗುರುತಿಸಲಾಗಿದೆ.

  ಸೋಮವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಹುಬ್ಬಳ್ಳಿಯಿಂದ ಕೇರಳಕ್ಕೆ ಸಾಗುತ್ತಿದ್ದ ಈಚರ್ ವಾಹನವು ಮುಂದೆ ಅದೇ ದಾರಿಯಲ್ಲಿ ಸಾಗುತ್ತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಚರ್ ವಾಹನದ ಬಲಬದಿ ಸಂಪೂರ್ಣ ಜಖಂಗೊಂಡಿದೆ. ಅಪಘಾತದಲ್ಲಿ ಚಾಲಕನ ಎರಡು ಕಾಲುಗಳು ಸಿಲುಕಿಕೊಂಡು ಸ್ಥಳೀಯರು ಸುಮಾರು ಅರ್ಧಗಂಟೆ ಹೆಣಗಾಡಿದ ಬಳಿಕ ಚಾಲಕನನ್ನು ಹೊರತೆಗೆಯಲಾಯಿತು.

  ಉಚ್ಚಿಲದ ಸಮಾಜ ಸೇವಕ ಜಲಾಲುದ್ದೀನ್‌ ಮತ್ತು ಎಸ್ಡಿಪಿಐ ಆಂಬುಲೆನ್ಸ್ ಚಾಲಕ ಹಮೀದ್‌ ರವರು  ಗಾಯಾಳುವನ್ನು ರಕ್ಷಿಸಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

 ಕಾಪು ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.  

Leave a comment

Your email address will not be published. Required fields are marked *

eMedia Kannada  @2025. All Rights Reserved.