• Home  
  • ಕಟಪಾಡಿ ಸಿ.ಎ. ಬ್ಯಾಂಕ್ ಎಜಿಎಂ ಅವರ ಮನೆಯಂಗಳದಲ್ಲಿ ಚಾಪೆ ನೇಜಿ Katapady CA Bank AGM’s house is covered in a mat Neji)
- ಕೃಷಿ

ಕಟಪಾಡಿ ಸಿ.ಎ. ಬ್ಯಾಂಕ್ ಎಜಿಎಂ ಅವರ ಮನೆಯಂಗಳದಲ್ಲಿ ಚಾಪೆ ನೇಜಿ Katapady CA Bank AGM’s house is covered in a mat Neji)

Share: ಕಟಪಾಡಿ ಸಿ.ಎ. ಬ್ಯಾಂಕ್ ಎಜಿಎಂ ಅವರ ಮನೆಯಂಗಳದಲ್ಲಿ ಚಾಪೆ ನೇಜಿ   ಇನ್ನಂಜೆ ಅಜಿಲಕಾಡುವಿನ ರಮೇಶ್ ಪೂಜಾರಿಯವರಿಂದ 6 ಎಕರೆ ಗದ್ದೆಯಲ್ಲಿ ಚಾಪೆ ನೇಜಿಯ ಕೃಷಿ (Katapady) ಕಟಪಾಡಿ : ಪ್ರಸ್ತುತ ಕಟಪಾಡಿ ಸಿ.ಎ. ಬ್ಯಾಂಕ್ ಇದರ ಎ.ಜಿ.ಎಂ. (ಸಹಾಯಕ ಕಾರ್ಯನಿರ್ವಹಣಾಧಿಕಾರಿ) ಇನ್ನಂಜೆ ಅಜಿಲಕಾಡುವಿನ ರಮೇಶ್ ಪೂಜಾರಿ ಅವರು ಹಡೀಲು ಭೂಮಿ ಸಹಿತ ಸುಮಾರು 6 ಎಕರೆ ಗದ್ದೆಯಲ್ಲಿ ಯಂತ್ರದ ಮೂಲಕ ಚಾಪೆ ನೇಜಿ ನಾಟಿಯ ಕೃಷಿ ಮಾಡುವ ಮೂಲಕ ಅವರ ಕೃಷಿ ಪ್ರೇಮವು ಗಮನ ಸೆಳೆದಿದೆ. […]

(Katapady) ಕಟಪಾಡಿ : ಪ್ರಸ್ತುತ ಕಟಪಾಡಿ ಸಿ.ಎ. ಬ್ಯಾಂಕ್ ಇದರ ಎ.ಜಿ.ಎಂ. (ಸಹಾಯಕ ಕಾರ್ಯನಿರ್ವಹಣಾಧಿಕಾರಿ) ಇನ್ನಂಜೆ ಅಜಿಲಕಾಡುವಿನ ರಮೇಶ್ ಪೂಜಾರಿ ಅವರು ಹಡೀಲು ಭೂಮಿ ಸಹಿತ ಸುಮಾರು 6 ಎಕರೆ ಗದ್ದೆಯಲ್ಲಿ ಯಂತ್ರದ ಮೂಲಕ ಚಾಪೆ ನೇಜಿ ನಾಟಿಯ ಕೃಷಿ ಮಾಡುವ ಮೂಲಕ ಅವರ ಕೃಷಿ ಪ್ರೇಮವು ಗಮನ ಸೆಳೆದಿದೆ.

   ಇವರು ನೆರೆ ಹೊರೆಯವರ, ಸಂಬಂಧಿಗಳ ಸುಮಾರು 4 ಎಕರೆಗೂ ಮಿಕ್ಕಿದ ಹಡೀಲು ಬಿದ್ದ ಗದ್ದೆಯನ್ನು ಹಾಗೂ ಮನೆಯ 2 ಎಕರೆ ಗದ್ದೆಯನ್ನು ಯಾಂತ್ರೀಕೃತ ಕೃಷಿಯಲ್ಲಿ ಬಳಸಿಕೊಂಡಿದ್ದು, ಹಡೀಲು ಭೂಮಿಯನ್ನು ನಳ ನಳಿಸುವಂತೆ ಮಾಡಿರುತ್ತಾರೆ.

 ಮನೆಯಂಗಳದಲ್ಲಿ ನೇಜಿಗದ್ದೆಯಲ್ಲಿ ಯಾಂತ್ರೀಕೃತ ನಾಟಿ:

  ಇಷ್ಟೊಂದು ಪ್ರಮಾಣದ ಗದ್ದೆಗಳಲ್ಲಿ ಸಾಂಪ್ರದಾಯಿಕ ಕೃಷಿ ಒಬ್ಬನಿಂದ ಸುಧಾರಿಸಲು ಕಷ್ಟ ಸಾಧ್ಯ ಎಂದು ಅರಿತ ರಮೇಶ್ ಪೂಜಾರಿ ಅವರು ಮನೆಯಂಗಳದಲ್ಲಿ ಚಾಪೆ ನೇಜಿಯನ್ನು ಸ್ವತಃ ಸಿದ್ಧ ಪಡಿಸಿ ಯಾಂತ್ರೀಕೃತ ನಾಟಿಯನ್ನು ಮಾಡಿದ್ದಾರೆ.

  2025ರ ಡಿಸೆಂಬರ್ ತಿಂಗಳಲ್ಲಿಯೇ ತನ್ನ ಗದ್ದೆಯನ್ನು ಉಳುಮೆ ಮಾಡಿದ್ದಾರೆ. ಬಳಿಕ 2026ರ ಮೇ ತಿಂಗಳಲ್ಲಿ ಅದರ ಒಣಗಿದ ಮಣ್ಣನ್ನು ಆಯ್ದು ಚೆನ್ನಾಗಿ ಹುಡಿ ಮಾಡಿ ಸಾರಿಸಿ ಕಲ್ಲು-ಕಸ ಮುಕ್ತಗೊಳಿಸಿ ಮನೆಯಂಗಳಕ್ಕೆ ಸಾಗಿಸಿ ಸಿದ್ಧ ಪಡಿಸಿ ಇಟ್ಟಿರುತ್ತಾರೆ.

   ಚಾಪೆ ನೇಜಿ ಸಿದ್ಧ ಪಡಿಸುವಲ್ಲಿ ಈ ಮಣ್ಣು ಬಹುಮುಖ್ಯ ಪಾತ್ರ ವಹಿಸಲಿದ್ದು, ಮನೆಯಂಗಳದಲ್ಲಿಯೇ ಸೂಕ್ತ ರೀತಿಯ ಮ್ಯಾಟ್ ಸಿದ್ಧ ಪಡಿಸಿದ್ದಾರೆ. ಸೆಗಣಿ ನೀರು ಬಳಸಿಕೊಂಡು ಮನೆಯ ಕಾಂಕ್ರೀಟ್ ಅಂಗಳದಲ್ಲಿ ಬಿತ್ತನೆ ಮಾಡಿ ಸುಮಾರು 550 ಟ್ರೇ ಚಾಪೆ ನೇಜಿಯನ್ನು ಎಂಒ4 ತಳಿಯ ಭತ್ತದ ಬೀಜ ಬಳಸಿ ಸಿದ್ಧ ಪಡಿಸಿದ್ದಾರೆ.

  ಚಾಪೆ ನೇಜಿ ನಾಟಿಗೆ 4 ದಿನಗಳ ಮೊದಲೇ ಉಳುಮೆ :

   ಚಾಪೆ ನೇಜಿ ನಾಟಿಗೂ ಮೊದಲೇ ಹಟ್ಟಿಗೊಬ್ಬರ, ಕೋಳಿ ಗೊಬ್ಬರ, ಸುಣ್ಣ, ಸುಟ್ಟ ಮಣ್ಣು ಸಹಿತ ಸಾವಯವ ಗೊಬ್ಬರ ಬಳಸಿದ ಗದ್ದೆಯನ್ನು 4 ದಿನಗಳ ಮೊದಲೇ ಉಳುಮೆ ಮಾಡಿ ಸಿದ್ಧಪಡಿಸಬೇಕಿದೆ ಎಂದು ರಮೇಶ್ ಪೂಜಾರಿ ತಿಳಿಸಿದ್ದು, ಆ ಬಳಿಕ ನೀರಿನ ಮಟ್ಟವನ್ನು ತಗ್ಗಿಸಿ ನಾಟಿ ಯಂತ್ರವನ್ನು ಬಳಸಿ ಮಲ್ಲಮಾರು, ಪೇರ್ಲುಮಾರು, ಗೋರಟಗ, ಕೋಂಕದ, ದಂಬೆದ ಕಂಡ, ಕುಲೆಂಜಿ, ತಾರೆದಡಿ, ಕಲ್ಲ ಕಂಡ, ಕುಲೆಂಜಿ ಗದ್ದೆ, ಬಾಕ್ಯಾರು, ಪೊಯ್ಯಕಂಡ ಸಹಿತ ಇತರೇ ಗದ್ದೆಗಳಲ್ಲಿ ಯಂತ್ರದ ಮೂಲಕ 16 ದಿನಗಳ ಚಾಪೆ ನೇಜಿಯನ್ನು ಸಾಲು ನಾಟಿ ಕೈಗೊಂಡಿದ್ದಾರೆ. ಸರಿಯಾಗಿ ನಾಟಿ ಆಗದ ಕೆಲವೆಡೆ ಆಯ್ದ ಸ್ಥಳಗಳಲ್ಲಿ ಕೈಯಿಂದ ನೇಜಿ ನಾಟಿ ಮಾಡಲಾಗುತ್ತದೆ. ಸ್ವಲ್ಪ ಬಲಿತ ಬಳಿಕ ಕೋನೋ ವೀಡರ್ ಬಳಸಲಾಗುತ್ತದೆ.

  ಚಾಪೆ ನೇಜಿ ಸಿದ್ಧ ಪಡಿಸುವಾಗಲೇ ಸೂಕ್ತ ಆರೈಕೆ ಮಾಡಲಾಗಿದ್ದು, 120 ದಿನಗಳ ಬಳಿಕ ಭರಪೂರ ಫಸಲು ಕೈ ಸೇರುವ ನಿರೀಕ್ಷೆಯನ್ನು ಹೊಂದಿದ್ದಾರೆ.

   ರಮೇಶ್‌ ಪೂಜಾರಿಯವರು ಮಾತನಾಡಿ, ಕಚೇರಿ ಕೆಲಸದ ನಡುವೆ ರಜೆಯ ದಿನಗಳನ್ನು ಬಳಸಿಕೊಂಡು ಗದ್ದೆಯ ಬದು ಕಟ್ಟುವುದು ಸಹಿತ ಇತರೇ ಕೃಷಿ ಕಾಯಕಕ್ಕೆ ತೊಡಗಿಸಿಕೊಳ್ಳುತ್ತೇನೆ. ಕೃಷಿ ಕೂಲಿ ಕಾರ್ಮಿಕರ ಕೊರತೆ ಇದ್ದು, ಯಾಂತ್ರೀಕೃತ ಕೃಷಿಗೆ ತೊಡಗಿಕೊಂಡಿದ್ದೇನೆ. ಪುತ್ರಿ ಎಂ-ಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ದೀಪ್ತಿ, ಪತ್ನಿ ರೇಖಾ ಹಾಗೂ ಕೆಲ ಆಪ್ತ ಸ್ನೇಹಿತರು ರಜೆ ಹಾಕಿ ನನ್ನ ಕೃಷಿ ಕಾಯಕಕ್ಕೆ ಕೈ ಜೋಡಿಸುತ್ತಾರೆ.

  ಉಳುಮೆ ಯಂತ್ರವನ್ನು ಹೊಂದಿದ್ದು ಸ್ವತಃ ಉಳುಮೆ ಮಾಡುತ್ತೇನೆ. ಬೇಸಾಯದ ಸಮಯದಲ್ಲಿ ಬೆಳಗ್ಗೆ3 ಗಂಟೆಯಿಂದ 7 ಗಂಟೆ ಬಳಿಕ ಸಂಜೆ ಕಚೇರಿಯಿಂದ ಹಿಂತಿರುಗಿದ ಬಳಿಕ ಗದ್ದೆಯ ಎಲ್ಲಾ ಕೆಲಸಗಳನ್ನು ಮಾಡುವ ಮೂಲಕ ಆರೋಗ್ಯಯುತ ಬದುಕು ಕಾಣುವಂತಾಗಿದೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ ರಮೇಶ್. ‌

Leave a comment

Your email address will not be published. Required fields are marked *

eMedia Kannada  @2025. All Rights Reserved.