ರಾಮ ಮಂದಿರ ನಿರ್ಮಾಣಕ್ಕೆ ಹೆಜಮಾಡಿ ಕಾಂಗ್ರೆಸ್ ಕೊಡುಗೆ ಏನು…? : ಶರಣ್ ಕುಮಾರ್ ಮಟ್ಟು ಪ್ರತಿಕ್ರಿಯೆ
ಹಿಂದೂ ವಿರೋಧಿ ಮಾನಸಿಕತೆಗಳಿಂದ ಕಾಂಗ್ರೆಸ್ ದೇಶಾದ್ಯಂತ ತೂತು ಬಿದ್ದ ಕೊಡಪಾನ : ಶರಣ್
(Hejmadi) :ಹೆಜಮಾಡಿ: ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಹೆಜಮಾಡಿ ಕಾಂಗ್ರೆಸ್ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಭೋದ್ ಚಂದ್ರರವರ ಕೊಡುಗೆ ಏನು. ಎಂದು ಬಿಜೆಪಿ ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ತೀವ್ರವಾಗಿ ಪ್ರತಿಕ್ರಯಿಸಿದ್ದಾರೆ.
ಅಯೋಧ್ಯೆಯ ಶ್ರೀ ರಾಮ ಮಂದಿರದ ಕಾಣಿಕೆ ಹುಂಡಿ ಕದ್ದ ಎಲ್ಲಾ ಕಳ್ಳರನ್ನು ಅಲ್ಲಿಯ ರಾಜ್ಯ ಸರಕಾರ ಬಂಧಿಸಿ ಈಗಾಗಲೇ ಜೈಲಿಗಟ್ಟಿದೆ.
ಶೀ ರಾಮನೆ ಕಾಲ್ಪನಿಕ, ರಾಮೇಶ್ವರಂನ ಧನುಷ್ಕೋಡಿ ಯಲ್ಲಿರುವ ಶ್ರೀ ರಾಮ ನಿರ್ಮಿತ ರಾಮ ಸೇತುವೆಯನ್ನು ಒಡೆಯಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಒಪ್ಪಿಗೆ ಕೊಡುವಾಗ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ತಾವು ಯಾವ ಬಿಲದಲ್ಲಿ ಅಡಗಿದ್ದಿರಿ?.
ನನ್ನಂತಹ ರಾಮ ಭಕ್ತರಿಗಷ್ಟೆ ಶ್ರೀ ರಾಮ ಆರಾಧ್ಯ ದೇವರು..ನಿಮ್ಮಂತಹ ಸಮಯ ಸಾಧಕ ರಾಜಕಾರಣಿಗಲ್ಲ.
ಇಂತಹ ಹಿಂದೂ ವಿರೋಧಿ ಮಾನಸಿಕತೆಗಳಿಂದ ಈಗಾಗಲೇ ಕಾಂಗ್ರೆಸ್ ದೇಶಾದ್ಯಂತ ತೂತು ಬಿದ್ದ ಕೊಡಪಾನ ದಂತಾಗಿದೆ. ನೀವೂ ಕೂಡ ತೂತು ಬಿದ್ದ ಕೊಡಪಾನದ ಒಂದು ತೂತು ಮಾತ್ರ. ಆದ್ದರಿಂದ ನಿಮ್ಮಲ್ಲಿ ಪ್ರಭೇಯೂ ಇಲ್ಲ…ಚಂದ್ರನೂ ಇಲ್ಲ!
ಶೀ ರಾಮ ಮಂದಿರದ ವಿಚಾರದಲ್ಲಿ ಯಾವುದೇ ದೃಶ್ಯ ಮಾಧ್ಯಮದ ಮುಖಾಂತರ ನನ್ನೊಂದಿಗೆ ನೀವು ನೇರ ಚರ್ಚೆಗೆ ಬನ್ನಿ… ಇದು ನನ್ನ ಪಂಥಾಹ್ವಾನ ನಿಮಗೆ ಎಂದು ಶರಣ್ ಕುಮಾರ್ ಆಕ್ರೋಶಿತರಾಗಿ ಮಟ್ಟು ಹೇಳಿದ್ದಾರೆ.

