ಧ. ಗ್ರಾ. ಯೋಜನೆ : ಶಿರ್ವ ಒಕ್ಕೂಟದಿಂದ ಪಡುಬೆಳ್ಳೆಯಲ್ಲಿ “ಅಟಿದ ಲೇಸು” ಕಾರ್ಯಕ್ರಮ (Sri Kshetra Dharmasthala Village Development Project: “Atida Laceu” Program at Padubella by Shirva Zone Union)
ಪಡುಬೆಳ್ಳೆ ಗೆಳೆಯರ ಬಳಗದಲ್ಲಿ ನೆರವೇರಿದ ಅಟಿದ ಲೇಸು ಕಾರ್ಯಕ್ರಮ
(Sirva) ಶಿರ್ವ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರ್ವ ವಲಯದ ಒಕ್ಕೂಟದ ವತಿಯಿಂದ “ಅಟಿದ ಲೇಸು” ಕಾರ್ಯಕ್ರಮ ಮಂಗಳವಾರ ಪಡುಬೆಳ್ಳೆ ಗೆಳೆಯರ ಬಳಗದಲ್ಲಿ ನಡೆಯಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಪೂರ್ವ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ವೆರವೇರಿಸಿದರು.
ಸಂಪನ್ಮೂಲ ವ್ಯಕ್ತಿ ಆಗಿ ನಿವೃತ್ತ ಶ್ರೀಮತಿ ಶಿಕ್ಷಕಿ ಅರುಂಧತಿಯವರು ಆಟಿ ತಿಂಗಳ ಜೀವನ ಶೈಲಿ ಮತ್ತು ತಿಂಡಿ ತಿನಿಸುಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರು ನಾಗರಾಜ್ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ದಯಾನಂದ ಹೆಜಮಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಶೆಟ್ಟಿ, ಬಳಗದ ಸದಸ್ಯರು ಜೋಸೆಫ್ ಹಾಗೂ ರಾಘವೇಂದ್ರ ಶೆಟ್ಟಿ, ಸುಜಾತಾ ಸುವರ್ಣ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಂದ್ರ ಕರ್ಕಾಲುರವರು ಆಟೋಟ ಸ್ಪರ್ಧೆ ನೆರವೇರಿಸಿದರು.

