• Home  
  • ಪಡುಬಿದ್ರಿ ಮುಂಡಾಲ ಯುವ ವೇದಿಕೆಯಿಂದ ಆಟಿದ ಅಂಗಲಾಪು ಕಾರ್ಯಕ್ರಮ (“Angalapu” program performed by Padubidri Mundala Yuva Vedike)
- ಸನ್ಮಾನ, ಅಭಿನಂದನೆ - ಸೌಹಾರ್ಧ

ಪಡುಬಿದ್ರಿ ಮುಂಡಾಲ ಯುವ ವೇದಿಕೆಯಿಂದ ಆಟಿದ ಅಂಗಲಾಪು ಕಾರ್ಯಕ್ರಮ (“Angalapu” program performed by Padubidri Mundala Yuva Vedike)

Share: ಪಡುಬಿದ್ರಿ ಮುಂಡಾಲ ಯುವ ವೇದಿಕೆಯಿಂದ ಆಟಿದ ಅಂಗಲಾಪು ಕಾರ್ಯಕ್ರಮ ಪಡುಬಿದ್ರಿಯ ಸುಜಾತಾ ಆಡಿಟೋರಿಯಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ (Padubidri) ಪಡುಬಿದ್ರಿ : ಪಡುಬಿದ್ರಿ ಮುಂಡಾಲ ಯುವ ವೇದಿಕೆಯ ಆಯೋಜನೆಯಲ್ಲಿಆಟಿಯ ಸತ್ವ ಮತ್ತು ಸತ್ಯ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ವಿಚಾರ-ಆಟಿಯ ತೆನಸು-ಸಾಂಸ್ಕೃತಿಕ ಕಾರ್ಯಕ್ರಮ ಪಡುಬಿದ್ರಿ ಸುಜಾತಾ ಆಡಿಟೋರಿಯಂ ನಲ್ಲಿ ನಡೆಯಿತು.  ಆಟಿ ಕಳೆಂಜನಿಗೆ ಸಂಪ್ರದಾಯದಂತೆ ಊರಿನ ಮಾರಿ ಕಳೆಯುವ ಸಲುವಾಗಿ ಅಕ್ಕಿ-ಮೆನಸ್ಸು-ಅರಿಶಿನ-ತೆಂಗಿನಕಾಯಿ ಇತ್ಯಾದಿಯನ್ನು ನೀಡಿ ಕಾರ್ಯಕ್ರಮ ಉದ್ಘಾಟಿಸಲಾಯಿತು.  ಈ ಸಂದರ್ಭದಲ್ಲಿ ಆಟಿಯ ವಿಚಾರಧಾರೆಗಳನ್ನು ಜಾನಪದ […]

ಪಡುಬಿದ್ರಿಯ ಸುಜಾತಾ ಆಡಿಟೋರಿಯಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ

(Padubidri) ಪಡುಬಿದ್ರಿ : ಪಡುಬಿದ್ರಿ ಮುಂಡಾಲ ಯುವ ವೇದಿಕೆಯ ಆಯೋಜನೆಯಲ್ಲಿಆಟಿಯ ಸತ್ವ ಮತ್ತು ಸತ್ಯ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ವಿಚಾರ-ಆಟಿಯ ತೆನಸು-ಸಾಂಸ್ಕೃತಿಕ ಕಾರ್ಯಕ್ರಮ ಪಡುಬಿದ್ರಿ ಸುಜಾತಾ ಆಡಿಟೋರಿಯಂ ನಲ್ಲಿ ನಡೆಯಿತು.

 ಆಟಿ ಕಳೆಂಜನಿಗೆ ಸಂಪ್ರದಾಯದಂತೆ ಊರಿನ ಮಾರಿ ಕಳೆಯುವ ಸಲುವಾಗಿ ಅಕ್ಕಿ-ಮೆನಸ್ಸು-ಅರಿಶಿನ-ತೆಂಗಿನಕಾಯಿ ಇತ್ಯಾದಿಯನ್ನು ನೀಡಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

 ಈ ಸಂದರ್ಭದಲ್ಲಿ ಆಟಿಯ ವಿಚಾರಧಾರೆಗಳನ್ನು ಜಾನಪದ ವಿದ್ವಾಂಸ ಡಾ. ವೈ.ಎನ್.ಶೆಟ್ಟಿ ಅದ್ಭುತವಾಗಿ ತಿಳಿಸಿ ಹೇಳಿದರು.

  ಪ್ರದೀಪ್ ಆಚಾರ್ಯ, ರಾಜು ಹೆಜಮಾಡಿ, ಸದಾಶಿವ ಪಡುಬಿದ್ರಿ ಶುಭ ಹಾರೈಸಿದರು.

  ಮಂಜುನಾಥ ಎರ್ಮಾಳ್ ಅಧ್ಯಕ್ಷತೆ ವಹಿಸಿದ್ದರು.

 ಈ ಸಂದರ್ಭ ಉಮೇಶ್ ಬೊಗ್ಗರಿ ಲಚ್ಚಿಲ್, ರಾಮ್ ಪಲಿಮಾರು, ಕರಿಯ ಕೇರಿ, ನಿತೀನ್ ಸಾಲ್ಯಾನ್, ಪ್ರಕಾಶ್ ಮುಂಡ್ಕೂರು, ಕು.ಅಶ್ವಿನಿ, ಕು. ಅರ್ಚನ ಉಪಸ್ಥಿತರಿದ್ದರು.

  ಸುರೇಶ್ ಪಡುಬಿದ್ರಿ ಸ್ವಾಗತಿಸಿದರು. ಶ್ರೀಧರ್ ವಂದಿಸಿದರು, ಪ್ರಸನ್ನ ಪಡುಬಿದ್ರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.