• Home  
  • ಒಂದೇ ಕೊಕ್ಕೆಗೆ ತಂದೆ, ಮಗಳು ನೇಣು ಬಿಗಿದು ಆತ್ಮಹತ್ಯೆ (Father, daughter commit suicide by hanging themselves from the same hook)
- ಅಪರಾಧ

ಒಂದೇ ಕೊಕ್ಕೆಗೆ ತಂದೆ, ಮಗಳು ನೇಣು ಬಿಗಿದು ಆತ್ಮಹತ್ಯೆ (Father, daughter commit suicide by hanging themselves from the same hook)

Share:   ಒಂದೇ ಕೊಕ್ಕೆಗೆ ತಂದೆ, ಮಗಳು ನೇಣು ಬಿಗಿದು ಆತ್ಮಹತ್ಯೆ ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ನಡೆದ ಧಾರುಣ ಘಟನೆ   (Kasaragodu) ಕಾಸರಗೋಡು: ತಂದೆ ಹಾಗೂ ಮಗಳು ಇಬ್ಬರು ಮನೆಯ ಕೋಣೆಯಲ್ಲಿ ಒಂದೇ ಕೊಕ್ಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ಘಟಿಸಿದೆ.   ಆತ್ಮಹತ್ಯೆಗೆ ಶರಣಾದ ಅಪ್ಪ, ಮಗಳು ಗಣೇಶ್ ಹಾಗೂ ವೈಷ್ಣವಿ ಎಂದು ಗುರುತಿಸಲಾಗಿದೆ.   ಇವರು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು ಮೂಲಗಳ ಪ್ರಕಾರ ಕೌಟುಂಬಿಕ […]

  (Kasaragodu) ಕಾಸರಗೋಡು: ತಂದೆ ಹಾಗೂ ಮಗಳು ಇಬ್ಬರು ಮನೆಯ ಕೋಣೆಯಲ್ಲಿ ಒಂದೇ ಕೊಕ್ಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ಘಟಿಸಿದೆ.

  ಆತ್ಮಹತ್ಯೆಗೆ ಶರಣಾದ ಅಪ್ಪ, ಮಗಳು ಗಣೇಶ್ ಹಾಗೂ ವೈಷ್ಣವಿ ಎಂದು ಗುರುತಿಸಲಾಗಿದೆ.

  ಇವರು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು ಮೂಲಗಳ ಪ್ರಕಾರ ಕೌಟುಂಬಿಕ ಸಮಸ್ಯೆಗಳೇ ಈ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರ ಬಹುದೆಂದು ಶಂಕಿಸಲಾಗಿದೆ.

  ಆಗಸ್ಟ್ 15 ರಂದು ರಾತ್ರಿ ಮಗಳು ವೈಷ್ಣವಿ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದನ್ನು ಗಮನಿಸಿದ ತಂದೆ ಗಣೇಶನ್ ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಆದರೆ, ವಿಷಯ ತಿಳಿದು ನೆರೆಹೊರೆಯವರು ಮನೆಗೆ ಧಾವಿಸುವಷ್ಟರಲ್ಲಿ ತಂದೆ ಗಣೇಶನ್ ಕೂಡ ಮಗಳು ನೇಣು ಬಿಗಿದುಕೊಂಡಿದ್ದ ಅದೇ ಕೊಕ್ಕೆಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

  ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮೇಲ್ಪರಂಬ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

  ಶವಗಳನ್ನು ವಶಕ್ಕೆ ಪಡೆದು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

  ಘಟನೆಗೆ ನಿಖರ ಕಾರಣವೇನು ಹಾಗೂ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯೇನು ಎಂಬುದರ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.