• Home  
  • ಪಡುಬಿದ್ರಿ: ಸುಮಾರು 3ಗಂಟೆ ಕಾಲ ಸಾಗರದಲ್ಲಿದ್ದ ಮಾನಸಿಕ ಅಸ್ಸ್ಥಗೊಂಡ ಯುವಕ (Padubidri: Mentally ill youth found in ocean for nearly 3 hours)
- ಸಹಾಯ ಹಸ್ತ

ಪಡುಬಿದ್ರಿ: ಸುಮಾರು 3ಗಂಟೆ ಕಾಲ ಸಾಗರದಲ್ಲಿದ್ದ ಮಾನಸಿಕ ಅಸ್ಸ್ಥಗೊಂಡ ಯುವಕ (Padubidri: Mentally ill youth found in ocean for nearly 3 hours)

Share: ಪಡುಬಿದ್ರಿ: ಸುಮಾರು 3ಗಂಟೆ ಕಾಲ ಸಾಗರದಲ್ಲಿದ್ದ ಮಾನಸಿಕ ಅಸ್ಸ್ಥಗೊಂಡ ಯುವಕ  ದಡಕ್ಕೆ ಮರಳಲು ನಿರಾಕರಿಸಿದಾಗ ರಕ್ಷಿಸಿದ ಈಶ್ವರ್‌ ಮಲ್ಪೆ ತಂಡ (Padubidri) ಪಡುಬಿದ್ರಿ : ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ ಯುವಕನೋರ್ವ ಭಾನುವಾರ ಮದ್ಯಾಹ್ನ ಸಮುದ್ರದಲ್ಲಿ ಮೂರು ಗಂಟೆಗಳ ಕಾಲ ಈಜಾಡುತ್ತಿದ್ದು, ಎಷ್ಟೇ ಮನವೊಲಿಸಿದರೂ ದಡಕ್ಕೆ ಬರಲು ನಿರಾಕರಿಸಿದಾಗ ಕೊನೆಗೆ ಸಮಾಜ ಸೇವಕ ಈಶ್ವರ್‌ ಮಲ್ಪೆ ಆಗಮಿಸಿ ಅವರ ಮನವೊಲಿಸಿ ರಕ್ಷಿಸಿದ ಘಟನೆ ಭಾನುವಾರ ಸಂಭವಿಸಿದೆ.   ಕಾಡಿಪಟ್ಣ ನಿವಾಸಿ, ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ ಯತೀಶ್‌(38) ಭಾನುವಾರ  ನಡು ಮಧ್ಯಾಹ್ನದ […]

(Padubidri) ಪಡುಬಿದ್ರಿ : ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ ಯುವಕನೋರ್ವ ಭಾನುವಾರ ಮದ್ಯಾಹ್ನ ಸಮುದ್ರದಲ್ಲಿ ಮೂರು ಗಂಟೆಗಳ ಕಾಲ ಈಜಾಡುತ್ತಿದ್ದು, ಎಷ್ಟೇ ಮನವೊಲಿಸಿದರೂ ದಡಕ್ಕೆ ಬರಲು ನಿರಾಕರಿಸಿದಾಗ ಕೊನೆಗೆ ಸಮಾಜ ಸೇವಕ ಈಶ್ವರ್‌ ಮಲ್ಪೆ ಆಗಮಿಸಿ ಅವರ ಮನವೊಲಿಸಿ ರಕ್ಷಿಸಿದ ಘಟನೆ ಭಾನುವಾರ ಸಂಭವಿಸಿದೆ.

  ಕಾಡಿಪಟ್ಣ ನಿವಾಸಿ, ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ ಯತೀಶ್‌(38) ಭಾನುವಾರ  ನಡು ಮಧ್ಯಾಹ್ನದ ವೇಳೆ ಪಡುಬಿದ್ರಿಯ ಕರಾವಳಿ ನಿವಾಸಿಗಳು ನೋಡನೋಡುತ್ತಿದ್ದಂತೆಯೇ ಅರಬೀ ಸಮುದ್ರಕ್ಕಿಳಿದು ಮೂರು ಗಂಟೆಗಳ ಕಾಲ ಈಜಾಡುತ್ತಿದ್ದ. ಸ್ಥಳೀಯ ದೋಣಿಯವರು ಬಂದು ರಕ್ಷಿಸಲೆತ್ನಿಸಿದರೂ ಮರಳಲು ನಿರಾಕರಿಸಿದ್ದಾನೆ.

   ಯತೀಶ್‌ ಅವರು ಬ್ಲೂ ಫ್ಲ್ಯಾಗ್‌ ಬೀಚ್‌ನಲ್ಲಿ ವೈಫ್‌ ಗಾರ್ಡ್ ವೃತ್ತಿಯಲ್ಲಿದ್ದವರಾಗಿದ್ದಾರೆ. ಈ ಹಿಂದೆಯೂ ಒಂದೆರಡು ಬಾರಿ ಅವರು ಈ ದುಃಸಾಹಸ ಗೈದಿದ್ದಾಗ ಸ್ಥಳಿಯರೇ ಇವರನ್ನು ದಡಕ್ಕೆ ಕರೆತಂದಿದ್ದರು.

  ಇಂದು ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಅವರಿಗೆ ಪಡುಬಿದ್ರಿಯ ಸದಾಶಿವ ಪಡುಬಿದ್ರಿ ಕರೆಮಾಡಿ ವಿಷಯ ತಿಳಿಸಿದ್ದರು. ಆ ಕೂಡಲೇ ಕಾರ್ಯತತ್ಪರರಾದ ಶಾಸಕರು ಈಶ್ವರ್‌ ಮಲ್ಪೆ ಅವರನ್ನು ಸಂಪರ್ಕಿಸಿ ಪಡುಬಿದ್ರಿ ಸಮುದ್ರ ತೀರಕ್ಕೆ ಹೋಗಿ ವ್ಯಕ್ತಿಯನ್ನು ರಕ್ಷಿಸುವಂತೆ ಮನವಿ ಮಾಡಿದ್ದರು.

  ಸುಮಾರು 2-15ರವೇಳೆಗೆ ಪಡುಬಿದ್ರಿಯ ಕಡಲ ಕಿನಾರೆಗೆ ಆಗಮಿಸಿದ ಈಶ್ವರ್‌ ಮಲ್ಪೆ ಅವರು ಸಮುದ್ರಕ್ಕಿಳಿದು ಸುಮಾರು ಮೂರು ಮಾರು ದೂರಕ್ಕೆ ತೆರಳಿ ಮಾನವೀಯತೆಯ ಮಾತುಗಳೊಂದಿಗೆ ಯತೀಶ್‌ ಅವರ ಮನವೊಲಿಸಿ ಅವರೊಂದಿಗೆ ಈಜುತ್ತಲೇ 3-15ರ ವೇಳೆಗೆ ದಡ ಸೇರಿದ್ದಾರೆ.

   ಈಶ್ವರ್‌ ಮಲ್ಪೆ ಅವರೊಂದಿಗೆ ಸ್ಥಳೀಯ ಈಜುಪಟುಗಳೂ, ಬ್ಲೂ ಫ್ಲ್ಯಾಗ್‌ ಬೀಚ್‌ನ ಲೈಫ್‌ ಗಾರ್ಡ್ ಗಳಾದ ಪ್ರಜ್ವಲ್‌, ಸುಶಾಂತ್‌, ಬಾದಲ್‌ ಅವರು ಸಹಕರಿಸಿದ್ದರು.

  ಕಾಡಿಪಟ್ಣ ಮೊಗವೀರ ಸಭಾ ಅಧ್ಯಕ್ಷ ಅಶೋಕ್‌ ಸಾಲ್ಯಾನ್‌ ಅವರು ಈಶ್ವರ್‌ ಮಲ್ಪೆ ಅವರಿಗೆ ಊರಿನ ಪರ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ನಡುವೆ ಕಾಪುವಿನ ಭೈರವಿ ದೋಣಿಯಲ್ಲಿ ಆಗಮಿಸಿದ್ದ ಮೀನುಗಾರರ ತಂಡವೂ ಯತೀಶ್‌ ಅವರ ಕೈ ಹಿಡಿದು ದೋಣಿಗೇ ಎಳೆದುಕೊಳ್ಳಲು ಅರ್ಧ ತಾಸು ನಡೆಸಿದ ಪ್ರಯತ್ನಗಳೂ ವ್ಯರ್ಥವಾಗಿದ್ದವು.

  ಸದ್ಯ ಯತೀಶ್‌ ಅವರನ್ನು ಉಡುಪಿಯ ಎವಿ ಬಾಳಿಗಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಪಡುದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.