• Home  
  • ಅಥಣಿ : ಮದಭಾವಿಯಲ್ಲಿ 9 ವರ್ಷಗಳಿಂದ ವಸತಿ,  ಜಾಗಕ್ಕಾಗಿ ಅಲೆಯುತ್ತಿರುವ ಮಂಗಳಮುಖಿ (Athani: Mangalamukhi has been wandering for 9 years in Madabhavi looking for a place to live)
- PROBLEMS - protest

ಅಥಣಿ : ಮದಭಾವಿಯಲ್ಲಿ 9 ವರ್ಷಗಳಿಂದ ವಸತಿ,  ಜಾಗಕ್ಕಾಗಿ ಅಲೆಯುತ್ತಿರುವ ಮಂಗಳಮುಖಿ (Athani: Mangalamukhi has been wandering for 9 years in Madabhavi looking for a place to live)

Share:   ಅಥಣಿ : ಮದಭಾವಿಯಲ್ಲಿ 9 ವರ್ಷಗಳಿಂದ ವಸತಿ,  ಜಾಗಕ್ಕಾಗಿ ಅಲೆಯುತ್ತಿರುವ ಮಂಗಳಮುಖಿ   ಗ್ರಾಮ ಪಂಚಾಯಿತಿ ಠರಾವು ಇದ್ದರೂ ಆದೇಶ ಪತ್ರ ನೀಡದ ಅಧಿಕಾರಿಗಳು. ​(Athani) ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ಖಾಯಂ ಆಗಿ ವಾಸವಾಗಿರುವ ಮಂಗಳಮುಖಿ ರಮಜಾನ್ ದಾದು ಮುಲ್ಲಾರವರು ತಮಗೆ ವಾಸಿಸಲು ವಸತಿ ಮಂಜೂರು ಮಾಡುವಂತೆ ಕೋರಿ ಕಳೆದ ಹಲವು ವರ್ಷಗಳಿಂದ ಸರಕಾರಿ ಕಚೇರಿಗಳ ಅಲೆಯುತ್ತಿದ್ದರೂ , ಈ ತನಕ ಯಾವುದೇ ನ್ಯಾಯ ಸಿಕ್ಕಿಲ್ಲ […]

  ಅಥಣಿ : ಮದಭಾವಿಯಲ್ಲಿ 9 ವರ್ಷಗಳಿಂದ ವಸತಿ,  ಜಾಗಕ್ಕಾಗಿ ಅಲೆಯುತ್ತಿರುವ ಮಂಗಳಮುಖಿ  

ಗ್ರಾಮ ಪಂಚಾಯಿತಿ ಠರಾವು ಇದ್ದರೂ ಆದೇಶ ಪತ್ರ ನೀಡದ ಅಧಿಕಾರಿಗಳು.

​(Athani) ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ಖಾಯಂ ಆಗಿ ವಾಸವಾಗಿರುವ ಮಂಗಳಮುಖಿ ರಮಜಾನ್ ದಾದು ಮುಲ್ಲಾರವರು ತಮಗೆ ವಾಸಿಸಲು ವಸತಿ ಮಂಜೂರು ಮಾಡುವಂತೆ ಕೋರಿ ಕಳೆದ ಹಲವು ವರ್ಷಗಳಿಂದ ಸರಕಾರಿ ಕಚೇರಿಗಳ ಅಲೆಯುತ್ತಿದ್ದರೂ , ಈ ತನಕ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ತೀವ್ರ ಅಳಲು ತೋಡಿಕೊಂಡಿದ್ದಾರೆ.

​  ಮದಭಾವಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಭೆಯಲ್ಲಿ ಈ ಹಿಂದೆ ಇವರ ವಾಸದ ಕುರಿತು ಸರ್ವಾನುಮತದಿಂದ ಠರಾವು ಪಾಸ್ ಮಾಡಲಾಗಿದೆ. ಆದರೆ, ಠರಾವು ಪಾಸ್ ಆಗಿ ವರ್ಷಗಳೇ ಕಳೆದರೂ ಅಧಿಕಾರಿಗಳು ಮಾತ್ರ ‘ಈಗ ಕೊಡುತ್ತೇವೆ, ನಾಳೆ ಕೊಡುತ್ತೇವೆ’ ಎಂದು ಬಾಯಿಮಾತಿನ ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಇಲ್ಲಿಯವರೆಗೆ ಯಾವುದೇ ಅಧಿಕೃತ ಆದೇಶ ಪತ್ರ ಅಥವಾ ಹಕ್ಕುಪತ್ರವನ್ನು ನೀಡಿಲ್ಲ ಎಂದು ರಮಜಾನ್ ಮುಲ್ಲಾ ಹೇಳಿದ್ದಾರೆ.  

​ಅಧಿಕಾರಿಗಳ ಅಲೆದಾಟದಿಂದ ಬೇಸತ್ತ ಸಂತ್ರಸ್ತೆ:

  ತಮ್ಮ ವಾಸದ ಜಾಗ ಹಾಗೂ ಮನೆಗಾಗಿ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲೂಕು ಪಂಚಾಯಿತಿ, ತಹಶೀಲ್ದಾರ್ ಕಚೇರಿ, ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದವರೆಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಲಾಗಿದೆ. ಆದರೆ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ “ಹೇಳೋರಿಲ್ಲ, ಕೇಳೋರಿಲ್ಲ” ಎಂಬ ಅತಂತ್ರ ಹಾಗೂ ಶೋಚನೀಯ ಸ್ಥಿತಿಯಲ್ಲಿ ಬದುಕು ಸಾಗಿಸುವಂತಾಗಿದೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.

​ಸರಕಾರ ಮತ್ತು ಜಿಲ್ಲಾ ಆಡಳಿತಕ್ಕೆ ಮನವಿ:

  ಒಂದೆಡೆ ಸಮಾಜದ ಮುಖ್ಯವಾಹಿನಿಗೆ ಬರಲು ಹೆಣದಾಡುತ್ತಿರುವ ತೃತೀಯ ಲಿಂಗಿಗಳಿಗೆ ಸರಕಾರ ನಾನಾ ಸೌಲಭ್ಯಗಳನ್ನು ಘೋಷಿಸುತ್ತಿದ್ದರೂ, ತಳಮಟ್ಟದಲ್ಲಿ ಮಾತ್ರ ಅಧಿಕಾರಿಗಳ ಉದಾಸೀನತೆಯಿಂದಾಗಿ ಬಡವರಿಗೆ ನ್ಯಾಯ ಸಿಗುತ್ತಿಲ್ಲ ಎಂಬುದಕ್ಕೆ ಈಘಟನೆಯೇ ಸಾಕ್ಷಿಯಾಗಿದೆ.

​   ಇನ್ನಾದರೂ ಬೆಳಗಾವಿ ಜಿಲ್ಲಾಧಿಕಾರಿಗಳು, ಅಥಣಿ ತಾಲೂಕಾಡಳಿತ, ರಾಜ್ಯ ಸರಕಾರ ಹಾಗೂ ಸಂಬಂಧಪಟ್ಟ ಸಚಿವರು ಈ ಕೂಡಲೇ ಮಧ್ಯಪ್ರವೇಶಿಸಿ, ಮದಭಾವಿ ಗ್ರಾಮದ ಮಂಗಳಮುಖಿ ರಮಜಾನ್ ದಾದು ಮುಲ್ಲಾ ಅವರಿಗೆ ವಾಸಿಸಲು ಸೂಕ್ತವಾದ ಖುಲ್ಲಾ ಜಾಗವನ್ನು ಗುರುತಿಸಿ, ಸರಕಾರದ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿ ತ್ವರಿತವಾಗಿ ಆದೇಶ ಪತ್ರ ನೀಡಬೇಕು. ತಪ್ಪಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂತ್ರಸ್ತೆ ಎಚ್ಚರಿಕೆ ನೀಡಿದ್ದಾರೆ

   ವರದಿ: ಮಹೇಶ್ ಶರ್ಮಾ

Leave a comment

Your email address will not be published. Required fields are marked *

eMedia Kannada  @2025. All Rights Reserved.