• Home  
  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ (Shree Kshetra Dharmasthala Village Development Yojana Shaurya Swayamsevak Training Worker)
- TRAINING

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ (Shree Kshetra Dharmasthala Village Development Yojana Shaurya Swayamsevak Training Worker)

Share:  ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಶೌರ್ಯ ವಿಪ್ಪತ್ತು ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಕಾಪುವಿನ ನಾರಾಯಣ ಗುರು ಸಭಾಭವನದಲ್ಲಿ ಎನ್ ಡಿ ಆರ್ ಎಫ್ ತಂಡದಿಂದ  ತರಬೇತಿ (Kaup) ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಪು ತಾಲೂಕು, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ ಹೆಗ್ಗಡೆಯವರ ಶುಭಾಶಿರ್ವಾದದೊಂದಿಗೆ ಶೌರ್ಯ ವಿಪ್ಪತ್ತು ಸ್ವಯಂ […]

(Kaup) ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಪು ತಾಲೂಕು, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ ಹೆಗ್ಗಡೆಯವರ ಶುಭಾಶಿರ್ವಾದದೊಂದಿಗೆ ಶೌರ್ಯ ವಿಪ್ಪತ್ತು ಸ್ವಯಂ ಸೇವಕರ ತರಬೇತಿ ಕಾರ್ಯಗಾರವು ಭಾನುವಾರ ಕಾಪುವಿನ ನಾರಾಯಣ ಗುರು ಸಭಾಭವನದಲ್ಲಿ ಜರಗಿತು.

 ಕಾರ್ಯಕ್ರಮವನ್ನು ಕಾಪು ಪೋಲಿಸ್ ಠಾಣೆಯ ಉಪ ಠಾಣಾಧಿಕಾರಿ ರವೀಶ್ ಹೊಳ್ಳ ಉದ್ಘಾಟಿಸಿದರು.

ಅವರು ಮಾತನಾಡಿ, ಸ್ವಯಂ ಮುಂಜಾಗೃತೆಯೊಂದಿಗೆ ಇತರರ ಸೇವೆ ಮಾಡಬೇಕು. ಮೊದಲು ನಮ್ಮ ಮನೆ ನಂತರ  ಸಮಾಜದ ಬಗೆಗೆ ಯೋಚಿಸಬೇಕಿದೆ. ಶಾಲೆ, ಕಾಲೇಜಿಗೆ ಹೋಗುವ ಮಕ್ಕಳ ಬಗೆಗೆ ಪೋಷಕರು ಗಮನಹರಿಸಿ. ಮೊಬೈಲ್ ಬಳಕೆ, ದುರಭ್ಯಾಸದ ಕಡೆಗೆ ಯುವ ಜನತೆ ಹೋಗದಂತೆ ತಡೆಯಬೇಕು. ಧರ್ಮಸ್ಥಳ ಎಲ್ಲಾ ರೀತಿಯ ಸಮಾಜ ಸೇವೆ ಮಾಡುತ್ತಿದೆ. ಆ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರದಂತೆ ಎಲ್ಲರೂ ಶ್ರಮವಹಿಸಿ ಎಂದು ಕಿವಿ ಮಾತು ಹೇಳಿದರು.

 ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಮಾತನಾಡಿ, ಕೆರೆಗಳ ಪುನಶ್ಚೇತನ, ಮದ್ಯ ಮುಕ್ತ ಶಿಬಿರಗಳ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಪರ ಕಾರ್ಯ ಚಟುವಟಿಕೆ ಮಾಡುತ್ತಿದೆ. ವ್ಯಾಪಕವಾಗಿ ಡ್ರಗ್ಸ್ ಗೆ  ಬಲಿಯಾಗುತ್ತಿರುವ ಯುವ ಜನರನ್ನು ತಡೆಯುವ ನಿಟ್ಟಿನಲ್ಲಿ ಶಿಬಿರಗಳ ಆಯೋಜನೆ ಹಾಗೂ ಡ್ರಗ್ಸ್ ಮುಕ್ತ ಕಾಪು ತಾಲೂಕು ಮಾಡುವ ಕಾರ್ಯ ಯೋಜನೆ ರೂಪಿಸಬೇಕಿದೆ ಎಂದರು.

 ತರಬೇತುದಾರರಾದ ವಿಜಯವಾಡದ ಎನ್ ಡಿ ಆರ್ ಎಫ್ ಇನ್ಸ್ಪೆಕ್ಟರ್ ಶಾಂತಿಲಾಲ್ ಜಟಿಯ ಮಾತನಾಡಿ, ಮಾನವ ಸೇವೆಗೆ ಧರ್ಮದ ಮಿತಿಯಿಲ್ಲ. ಧರ್ಮಸ್ಥಳದಿಂದ ನಮಗೆ ಸಮಾಜ ಸೇವೆಯ ವೇದಿಕೆ ಕಲ್ಪಿಸಿದೆ. ಎನ್ ಡಿ ಆರ್ ಎಫ್ ನಿಂದ ಕರ್ನಾಟಕದಲ್ಲಿ ವಿವಿಧ ಆಪತ್ತುಗಳಿಂದ 1ಲಕ್ಷ 20 ಸಾವಿರ ಜನರನ್ನು ರಕ್ಷಿಸಲಾಗಿದೆ ಎಂದರು.

  ತಾಲೂಕು ಜನಜಾಗೃತಿ ವೇದಿಕೆ ಕಾಪು ತಾಲೂಕು ಅಧ್ಯಕ್ಷರಾದ ಸತ್ಯೇಂದ್ರ ಪೈ ಅಧ್ಯಕ್ಷತೆ ವಹಿಸಿ, ವಿಪತ್ತು ಬರುವ ಮೊದಲು ಯೋಚಿಸಿ, ಮುಂದಡಿ ಇಡಬೇಕೆಂದರು.

  ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್, ಶೌರ್ಯ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಜೈವಂತ ಪಟಗಾರ, ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಕ್ಯಾಪ್ಟನ್ ರಾಜು ಪಾಣರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಉಪಸ್ಥಿತರಿದ್ದರು.

  ಕಾಪು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಸ್ವಾಗತಿಸಿದರು. ಶೌರ್ಯ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಜೈವಂತ ಪಟಗಾರ ಪ್ರಸ್ತಾವಿಸಿದರು. ಉಚ್ಚಿಲ ವಲಯ ಮೇಲ್ವಿಚಾರಕಿ ಶ್ರೀಮತಿ ವಿನುತ ಕಾರ್ಯಕ್ರಮ ನಿರೂಪಿಸಿದರು. ಶೌರ್ಯ ತಂಡದ ಶ್ರೀಮತಿ ರಜನಿ ಸೂಡ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.