• Home  
  • ಬೆಳಪು : ನಂದಿಗೋಣ ಪರಿವಾರ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರಕ್ಕೆ ಪ್ರಶ್ನಾಚಿಂತನೆ (Questioning for comprehensive rehabilitation of Nandigona Parivar area of ​Belapu industrial zone)
- ಧಾರ್ಮಿಕ

ಬೆಳಪು : ನಂದಿಗೋಣ ಪರಿವಾರ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರಕ್ಕೆ ಪ್ರಶ್ನಾಚಿಂತನೆ (Questioning for comprehensive rehabilitation of Nandigona Parivar area of ​Belapu industrial zone)

Share: ಬೆಳಪು : ನಂದಿಗೋಣ ಪರಿವಾರ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರಕ್ಕೆ ಪ್ರಶ್ನಾಚಿಂತನೆ ಕೇರಳದ ಪ್ರಸಿದ್ಧ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರ ಮೂಲಕ ನಡೆದ ಪ್ರಶ್ನಾಚಿಂತನೆ (Belapu) ಬೆಳಪು : ಬೆಳಪು ಗ್ರಾಮದಲ್ಲಿರು ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಅತೀ ಪುರಾತನ ಕಾರಣಿಕದ ಕ್ಷೇತ್ರ ಶ್ರೀ ನಂದಿಗೋಣ ಹಾಗೂ ಪರಿವಾರ ಶಕ್ತಿಗಳ ಸಾನಿಧ್ಯದ ಸಮಗ್ರ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಕೇರಳದ ಪ್ರಸಿದ್ಧ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರ ಮೂಲಕ ಭಾನುವಾರ ಪ್ರಶ್ನಾಚಿಂತನೆ ನಡೆಸಲಾಯಿತು.    ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಎಂ. ವಾಸುದೇವ […]

(Belapu) ಬೆಳಪು : ಬೆಳಪು ಗ್ರಾಮದಲ್ಲಿರು ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಅತೀ ಪುರಾತನ ಕಾರಣಿಕದ ಕ್ಷೇತ್ರ ಶ್ರೀ ನಂದಿಗೋಣ ಹಾಗೂ ಪರಿವಾರ ಶಕ್ತಿಗಳ ಸಾನಿಧ್ಯದ ಸಮಗ್ರ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಕೇರಳದ ಪ್ರಸಿದ್ಧ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರ ಮೂಲಕ ಭಾನುವಾರ ಪ್ರಶ್ನಾಚಿಂತನೆ ನಡೆಸಲಾಯಿತು.

   ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಎಂ. ವಾಸುದೇವ ಶೆಟ್ಟಿ ಹಾಗೂ ಕಾರ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರ ಯಜಮಾನತ್ವದಲ್ಲಿ ಪ್ರಶ್ನಾಚಿಂತನೆ ನೆರವೇರಿತು.

  ಇದಕ್ಕೂ ಮುನ್ನ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಿ ಸೀಯಾಳಾಭಿಷೇಕ ಸಲ್ಲಿಸಲಾಯಿತು.

  ಕಾಪು ಶಾಸಕ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ   ವೆಂಕಟರಾಜ ತಂತ್ರಿ, ಕುತ್ಯಾರು ಕೇಂಜ ಶ್ರೀಧರ ತಂತ್ರಿ,  ಪ್ರಕಾಶ್ ಅಮ್ಮಣ್ಣಾಯ, ಎಲ್ಲೂರು ದೇವಸ್ಥಾನದ ಆಡಳಿತ ಮೊಕ್ತೇಸರ ಅರುಣಾಕರ ಶೆಟ್ಟಿ ಕಳತ್ತೂರು, ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ನಡಿಮನೆ ದೇವರಾಜ ರಾವ್, ಕಾನ ಶ್ರೀ ಬ್ರಹ್ಮಲಿಂಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಕಾಶ್ ರಾವ್ ಪಠೇಲ್, ಪ್ರಮುಖರಾದ ಸುರೇಶ್ ತಂತ್ರಿ ಬೆಟ್ಟಿಗೆ, ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ಮೋಹನ್ ಶೆಟ್ಟಿ ಬೆಳಪುಗುತ್ತು, ದೇವಿಪ್ರಸಾದ್ ಶೆಟ್ಟಿ ಬಡಕರಗುತ್ತು, ಸುಭಾಶ್ ಶೆಟ್ಟಿ ದೊರಕಳಗುತ್ತು, ಅಶೋಕ್ ಶೆಟ್ಟಿ ಬೆಳಪು, ಉದ್ಯಮಿಗಳಾದ ಮಲ್ಲಾರು ಶಶಿಧರ ಶೆಟ್ಟಿ ಮಸ್ಕತ್, ಸುರೇಶ್ ಶೆಟ್ಟಿ ಅಯೋಧ್ಯೆ, ಶ್ರೀಪತಿ ಭಟ್, ಸಮಿತಿ ಪ್ರಧಾನ ಕಾರ್ಯದರ್ಶಿ ಸುಶೀನ್ ಶೆಟ್ಟಿ ಪಣಿಯೂರುಗುತ್ತು, ಕೋಶಾಧಿಕಾರಿ ವಸುಂಧರ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ಜೊತೆ ಕೋಶಾಧಿಕಾರಿಗಳಾದ ಹರೀಶ್ ನಾಯಕ್, ನರಸಿಂಹ ಜೆನ್ನಿ, ಸಮಿತಿಯ ಗೌರವಾಧ್ಯಕ್ಷರು, ಗೌರವ ಸಲಹೆಗಾರರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಬೆಳಪು ಕೈಗಾರಿಕಾ ವಲಯದ ಕೈಗಾರಿಕೋದ್ಯಮಿಗಳು ಹಾಗೂ ಊರ-ಪರವೂರ ಭಗವದ್ಭಕ್ತರು ಪಾಲ್ಗೊಂಡಿದ್ದರು.

   ಜೀರ್ಣೋದ್ಧಾರದ ಪ್ರಯುಕ್ತ ಮುಂದಿನ ದಿನಗಳಲ್ಲಿ ಸ್ವರ್ಣಾರೂಢ ಅಷ್ಟಮಂಗಳ ಪ್ರಶ್ನೆಯ ಮೂಲಕ ಚಿಂತನೆ ನಡೆಸಲು ತೀರ್ಮಾನಿಸಲಾಯಿತು.‌

 ಅಷ್ಟಮಂಗಳ ಪ್ರಶ್ನೆಗೆ ಪೂರ್ವಭಾವಿಯಾಗಿ ಅಗತ್ಯ ಪ್ರಾಯಶ್ಚಿತ ವಿಧಾನಗಳನ್ನು ನಡೆಸಲು ಸಂಕಲ್ಪಿಸಲಾಯಿತು.‌

Leave a comment

Your email address will not be published. Required fields are marked *

eMedia Kannada  @2025. All Rights Reserved.