• Home  
  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ   ಪಡುಬಿದ್ರಿ ವಲಯದ ಪದಾಧಿಕಾರಿಗಳ ತರಬೇತಿ (Training for Office Bearers of the Padubidri Zone of the Shri Kshetra Dharmasthala Rural Development Project)
- ಸಂಘ, ಸಂಸ್ಥೆಗಳು - ಸಾಂಸ್ಕೃತಿಕ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ   ಪಡುಬಿದ್ರಿ ವಲಯದ ಪದಾಧಿಕಾರಿಗಳ ತರಬೇತಿ (Training for Office Bearers of the Padubidri Zone of the Shri Kshetra Dharmasthala Rural Development Project)

Share: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ   ಪಡುಬಿದ್ರಿ ವಲಯದ ಪದಾಧಿಕಾರಿಗಳ ತರಬೇತಿ ಪಡುಬಿದ್ರಿ ಶ್ರೀ ಪ್ರಸನ್ನ ಪಾರ್ವತಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಾಗಾರ (Padubidri) ಪಡುಬಿದ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ ಪಡುಬಿದ್ರಿ ವಲಯದ ಪದಾಧಿಕಾರಿಗಳ ತರಬೇತಿ ಕಾರ್ಯಗಾರ ಪಡುಬಿದ್ರಿ ಶ್ರೀ ಪ್ರಸನ್ನ ಪಾರ್ವತಿ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆಯಿತು. ತರಬೇತಿ ಕಾರ್ಯಗಾರವನ್ನು ಶ್ರೀ ಪ್ರಸನ್ನ ಪಾರ್ವತಿ ದೇವಸ್ಥಾನದ ಅರ್ಚಕರಾದ ಜಗದಾಭಿರಾಮ  ಸ್ವಾಮಿ ಯವರು ಉದ್ಘಾಟಿಸಿದರು.  ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವ […]

(Padubidri) ಪಡುಬಿದ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ ಪಡುಬಿದ್ರಿ ವಲಯದ ಪದಾಧಿಕಾರಿಗಳ ತರಬೇತಿ ಕಾರ್ಯಗಾರ ಪಡುಬಿದ್ರಿ ಶ್ರೀ ಪ್ರಸನ್ನ ಪಾರ್ವತಿ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆಯಿತು.

ತರಬೇತಿ ಕಾರ್ಯಗಾರವನ್ನು ಶ್ರೀ ಪ್ರಸನ್ನ ಪಾರ್ವತಿ ದೇವಸ್ಥಾನದ ಅರ್ಚಕರಾದ ಜಗದಾಭಿರಾಮ  ಸ್ವಾಮಿ ಯವರು ಉದ್ಘಾಟಿಸಿದರು.

 ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವ ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ ಜಗದಾಭಿರಾಮ  ಸ್ವಾಮಿಯವರು ಕಾರ್ಯಗಾರಕ್ಕೆ ಶುಭ ಹಾರೈಸಿದರು.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕರಾದ ನಾಗರಾಜ ಶೆಟ್ಟಿ ಅವರು ತರಬೇತಿ ನೀಡಿ, ಸಂಘಗಳ ನಿರ್ವಹಣೆ, ಪದಾಧಿಕಾರಿಗಳ ಜವಾಬ್ದಾರಿ, ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದರು.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಸಂಘಗಳ ವಾರದ ಸಭೆ ನಿರ್ವಹಣೆ, ಕ್ಷೇತ್ರದಿಂದ ಸಿಗುವ ಸೌಲಭ್ಯಗಳು, ಬಡ್ಡಿ ದರಗಳ ಬಗ್ಗೆ ಮಾಹಿತಿಯನ್ನು ನೀಡಿದರು.

  ವಲಯಧ್ಯಕ್ಷರಾದ ಭುಜಂಗ ಆಚಾರ್ಯರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ವಲಯ ಮೇಲ್ವಿಚಾರಕರಾದ ಜಗದೀಶ್ ಪೂಜಾರಿ ಮತ್ತು ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.