• Home  
  • ಕಾಪು ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಛತಾ ಹೀ ಸೇವಾ 2026 ಕಾರ್ಯಕ್ರಮ (‘Swachhata Hi Seva 2026’ program at Kapu Santhe Market.)
- social work

ಕಾಪು ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಛತಾ ಹೀ ಸೇವಾ 2026 ಕಾರ್ಯಕ್ರಮ (‘Swachhata Hi Seva 2026’ program at Kapu Santhe Market.)

Share: ಕಾಪು ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಛತಾ ಹೀ ಸೇವಾ 2026 ಕಾರ್ಯಕ್ರಮ ಉಡುಪಿ ಟೋಲ್‌ ವೇ, ಕಾಪು ಪೋಲಿಸ್‌ ಮತ್ತು ಪುರಸಭೆಯಿಂದ ಸಹಭಾಗಿತ್ವ (Kaup) ಕಾಪು: ಉಡುಪಿ ಟೋಲ್‌ ವೇ, ಕಾಪು ಪುರಸಭೆ ಮತ್ತು ಕಾಪು ಪೊಲೀಸ್ ಠಾಣೆ ಇದರ ಸಹಯೋಗದಲ್ಲಿ ಶುಕ್ರವಾರ ಕಾಪು ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಛತಾಹೀ ಸೇವಾ 2026 ಕಾರ್ಯಕ್ರಮ ಜರಗಿತು.  ಸ್ವಚ್ಛತಾಹೀ ಸೇವಾ 2026 ಕಾರ್ಯಕ್ರಮವು ಸೆ. 17 ರಿಂದ ಅ. 2 ರವರೆಗೆ ನೆರವೇರಲಿದೆ.   ಕಾರ್ಯಕ್ರಮದಲ್ಲಿ ಕಾಪು ಟೋಲ್‌ ವೇ ಸಂಸ್ಥೆಯಿಂದ […]

(Kaup) ಕಾಪು: ಉಡುಪಿ ಟೋಲ್‌ ವೇ, ಕಾಪು ಪುರಸಭೆ ಮತ್ತು ಕಾಪು ಪೊಲೀಸ್ ಠಾಣೆ ಇದರ ಸಹಯೋಗದಲ್ಲಿ ಶುಕ್ರವಾರ ಕಾಪು ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಛತಾಹೀ ಸೇವಾ 2026 ಕಾರ್ಯಕ್ರಮ ಜರಗಿತು.

 ಸ್ವಚ್ಛತಾಹೀ ಸೇವಾ 2026 ಕಾರ್ಯಕ್ರಮವು ಸೆ. 17 ರಿಂದ ಅ. 2 ರವರೆಗೆ ನೆರವೇರಲಿದೆ.

  ಕಾರ್ಯಕ್ರಮದಲ್ಲಿ ಕಾಪು ಟೋಲ್‌ ವೇ ಸಂಸ್ಥೆಯಿಂದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಮನವಿ ಮಾಡಲಾಯಿತು.

 ವ್ಯಾಪಾರಿಗಳಿಗೆ ಪುರಸಭೆಯ ವತಿಯಿಂದ ಬಟ್ಟೆ ಚೀಲ ಹಾಗೂ ಟೋಲ್‌ ವೇ ಸಂಸ್ಥೆಯಿಂದ ಪೇಪರ್ ಚೀಲವನ್ನು ನೀಡಲಾಯಿತು.

  ಕಾಪು ಅಪರಾಧ ವಿಭಾಗದ ಎಸ್‌ ಐ ಶುಭಾಕರ್‌, ಎಎಸ್‌ ಐ  ರವೀಶ್‌ ಹೊಳ್ಳರವರು ವ್ಯಾಪಾರಿಗಳಿಗೆ ಸ್ವಚ್ಛತೆಯ ಬಗ್ಗೆ ಸಮರ್ಪಕ ಮಾಹಿತಿ ನೀಡಿದರು.

  ಕಾರ್ಯಕ್ರಮದಲ್ಲಿ ಉಡುಪಿ ಟೋಲ್‌ ವೇ ಸಂಸ್ಥೆಯ ಯೋಜನಾಧಿಕಾರಿ ಅಮೃತ ಲಿಂಗಂ, ಟೋಲ್ ಮ್ಯಾನೇಜರ್ ತಿಮ್ಮಯ್ಯ ಮತ್ತು ಪೊಲಿರಾಜು, ಸಿವಿಲ್ ಇಂಜಿನಿಯರ್ ಅಜಯ್, ಸೈಟ್‌ ಇಂಜಿನಿಯರ್ ಸುನಿಲ್, ರಸ್ತೆ ಸುರಕ್ಷತಾ ಅಧಿಕಾರಿ ಶೈಲೇಶ್ ಶೆಟ್ಟಿ, ಅನಿಶ್‌,  ಪೆಟ್ರೋಲಿಂಗ್‌ ತಂಡದ ಸದಸ್ಯರು, ಮಲ್ಲಿಕಾರ್ಜುನ, ಪುರಸಭಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.