ಮುಂಡ್ಕೂರು ಪದವು ಭಾಗದಲ್ಲಿ ಆಕ್ರಮ ಕೆಂಪು ಕಲ್ಲು ಗಣಿಗಾರಿಕೆ
ಅಪಾಯದ ಭೀತಿಯಲ್ಲಿ ನೀರಿನ ಟ್ಯಾಂಕ್
(Mundkuru) ಮುಂಡ್ಕೂರು: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳ ಪದವು ಸರಕಾರಿ ಜಾಗದಲ್ಲಿ ಆಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ವಾರಾಹಿ ಕುಡಿಯುವ ನೀರು ಯೋಜನೆಯಿಂದ ಹೊಸದಾಗಿ ನಿರ್ಮಿತವಾದ ನೀರಿನ ಟ್ಯಾಂಕ್, ಶೆಡ್ ಅಪಾಯದಲ್ಲಿದೆ.
ಕೆಲ ವ್ಯಕ್ತಿಗಳು ಯಾವುದೇ ಕಾನೂನು ಬದ್ಧ ಪರವಾನಿಗೆ ಅಥವಾ ಅನುಮತಿ ಪಡೆಯದೆ ನಿಯಮಗಳನ್ನು ಉಲ್ಲಂಘಿಸಿ ಆಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅಕ್ರಮ ಕೆಂಪು ಗಣಿಗಾರಿಕೆಯ ಪಕ್ಕದಲ್ಲಿ ವಾರಾಹಿ ಕುಡಿಯುವ ನೀರಿನ ಯೋಜನೆಯ ಟ್ಯಾಂಕ್ ಹಾಗೂ ಶೆಡ್ ನಿರ್ಮಾಣಗೊಳ್ಳುತ್ತಿದ್ದು ಅದನ್ನು ಲೆಕ್ಕಿಸದೆ ಟ್ಯಾಂಕಿನ ಪಕ್ಕದಲ್ಲಿಯೇ ಗಣಿಗಾರಿಕೆ ನಡೆಸುತ್ತಿದ್ದಾರೆ.
ಅಕ್ರಮ ಗಣಿಗಾರಿಕೆಯಿಂದ ನೀರಿನ ಟ್ಯಾಂಕಿಗೆ ಹಾಗೂ ಶೆಡ್ಡಿಗೆ ಅಪಾಯ ಉಂಟಾಗಬಹುದು. ಗ್ರಾಮ ಪಂಚಾಯತ್, ಗಣಿ ಇಲಾಖೆ ಇದರ ಬಗ್ಗೆ ಗಮನಹರಿಸಿ ಕೂಡಲೇ ಗಣಿಗಾರಿಕೆಯನ್ನು ನಿಲ್ಲಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಗ್ರಾಮಸ್ಥರ ಆಗ್ರಹವಾಗಿದೆ.

