• Home  
  • ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ (World Hospice and Palliative Care Day observed in Mahe)
- ಶಾಲಾ ಕಾಲೇಜು - ಸಹಾಯ ಹಸ್ತ

ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ (World Hospice and Palliative Care Day observed in Mahe)

Share: ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ  ಉಪಶಾಮಕ ಆರೈಕೆ ಮತ್ತು ಮಾನವೀಯ ಸ್ಪಂದನೆಗೆ ಆದ್ಯತೆ (Manipala) ಮಣಿಪಾಲ, ಅಕ್ಟೋಬರ್ 6. : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಗಂಭೀರ ಹಾಗೂ ಮಾರಣಾಂತಿಕವಾದ ಕಾಯಿಲೆಗಳೊಂದಿಗೆ ಬದುಕುತ್ತಿರುವವರಿಗೆ ಉಪಶಾಮಕ ಆರೈಕೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 10, 2026ರಂದು ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನವನ್ನು (ಡಬ್ಲ್ಯುಎಚ್‌ಪಿಸಿಡಿ) ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ. […]

(Manipala) ಮಣಿಪಾಲ, ಅಕ್ಟೋಬರ್ 6. : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಗಂಭೀರ ಹಾಗೂ ಮಾರಣಾಂತಿಕವಾದ ಕಾಯಿಲೆಗಳೊಂದಿಗೆ ಬದುಕುತ್ತಿರುವವರಿಗೆ ಉಪಶಾಮಕ ಆರೈಕೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 10, 2026ರಂದು ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನವನ್ನು (ಡಬ್ಲ್ಯುಎಚ್‌ಪಿಸಿಡಿ) ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ.

   ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೆಯ ಶನಿವಾರ ಆಚರಿಸಲಾಗುತ್ತಿದ್ದು ಈ ವರ್ಷ ಅಕ್ಟೋಬರ್ 10ರಂದು ಬಂದಿದೆ. ‘ನೋವು ನಿರ್ವಹಣೆ: ಉಪಶಾಮಕ ಆರೈಕೆಯ ಅತ್ಯಗತ್ಯ ಭಾಗ’ ಎಂಬುದು 2026ರ ಧ್ಯೇಯವಾಕ್ಯವಾಗಿದ್ದು, ಸಮಗ್ರ ಆರೈಕೆಯ ಭಾಗವಾಗಿ ಕಾಯಿಲೆಯ ಯಾತನೆಯನ್ನು ನಿರ್ವಹಿಸುವ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ. ಉಪಶಾಮಕ ಆರೈಕೆಯು ದೈಹಿಕ ಸ್ಥಿತಿಯನ್ನಷ್ಟೇ ಅಲ್ಲದೆ, ಮಾನಸಿಕ, ಸಾಮಾಜಿಕ ಮತ್ತು ಆಂತರಂಗಿಕ ಪರಿಸ್ಥಿತಿಗಳನ್ನು ಪರಿಗಣಿಸಿ, ನೆಮ್ಮದಿ, ಘನತೆ ಮತ್ತು ಜೀವನದ ಗುಣಮಟ್ಟಕ್ಕೆ ಆದ್ಯತೆ ನೀಡುತ್ತದೆ.

  ಈ ಆಚರಣೆಯ ಅಂಗವಾಗಿ ಮಣಿಪಾಲ ಹಾಸ್ಪಿಸ್‌ ಆ್ಯಂಡ್ ರೆಸ್ಪೈಟ್ ಸೆಂಟರ್ (ಎಂಎಚ್‌ಆರ್‌ಸಿ) ಅಕ್ಟೋಬರ್ 10, 2026ರಂದು ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಕಾರ್ಯಕ್ರಮವನ್ನು ಆಯೋಜಿಸಿದೆ. ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ಕುರಿತು ಜಾಗೃತಿ ಮೂಡಿಸಲು, ಕರಾವಳಿ ಕರ್ನಾಟಕದ ವಿವಿಧ ಕ್ಲಬ್‌ಗಳ ಓಟಗಾರರು ಮತ್ತು ಸೈಕ್ಲಿಸ್ಟ್‌ಗಳು ಬೆಳಿಗ್ಗೆ 5:15ಕ್ಕೆ ಮಂಗಳೂರಿನ ಲಾಲ್‌ಬಾಗ್ ಬಳಿಯ ಕಾರ್ಪೊರೇಷನ್ ವೃತ್ತದಿಂದ ಹೊರಟು ಮಣಿಪಾಲದ ಎಂಎಚ್‌ಆರ್‌ಸಿವರೆಗೆ ಸುಮಾರು 68 ಕಿ. ಮೀ. ದೂರವನ್ನು ಕ್ರಮಿಸಲಿದ್ದಾರೆ.

   2025ರ ಏಪ್ರಿಲ್‌ನಲ್ಲಿ ಉದ್ಘಾಟನೆಗೊಂಡ ಎಂಎಚ್‌ಆರ್‌ಸಿ, 2025ರ ಸೆಪ್ಟೆಂಬರ್ 1ರಿಂದ ರೋಗಿಗಳನ್ನು ದಾಖಲಿಸಿಕೊಳ್ಳಲು ಆರಂಭಿಸಿತು. 10 ಹಾಸಿಗೆಗಳೊಂದಿಗೆ ಕಾರ್ಯಾರಂಭ ಮಾಡಿದ ಕೇಂದ್ರವು ಈಗ 40 ಹಾಸಿಗೆಗಳಿಗೆ ವಿಸ್ತರಣೆಗೊಂಡಿದ್ದು, ಮೊದಲ ವರ್ಷದಲ್ಲಿ 694 ರೋಗಿಗಳಿಗೆ ಆರೈಕೆ ನೀಡಿದೆ ಹಾಗೂ 1,300ಕ್ಕೂ ಹೆಚ್ಚು ಕುಟುಂಬದ ಆರೈಕೆದಾರರಿಗೆ ಬೆಂಬಲ ಒದಗಿಸಿದೆ. ಈ ಎಲ್ಲ ಸೇವೆಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗಿದೆ. 2026ರಲ್ಲಿ ನರ-ಉಪಶಾಮಕ ಆರೈಕೆಗೆ (ನ್ಯೂರೋಪ್ಯಾಲಿಯೇಟಿವ್ ಕೇರ್) ವಿಶೇಷ ಒತ್ತು ನೀಡಿ 65 ಹಾಸಿಗೆಗಳಿಗೆ ಹಾಗೂ 2027ರಲ್ಲಿ 100 ಹಾಸಿಗೆಗಳಿಗೆ ವಿಸ್ತರಿಸಲು ಎಂಎಚ್‌ಆರ್‌ಸಿ ಯೋಜಿಸಿದೆ. ಕೆಎಂಸಿ ಮಣಿಪಾಲದ ಪ್ಯಾಲಿಯೇಟಿವ್ ಮೆಡಿಸಿನ್ ಆ್ಯಂಡ್ ಸಪೋರ್ಟಿವ್ ಕೇರ್ ವಿಭಾಗದ ಹೊರರೋಗಿ ವಿಭಾಗದ (ಒಪಿಡಿ) ಮೂಲಕ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಎಂಎಚ್‌ಆರ್‌ಸಿಗೆ ದಾಖಲಾತಿ ಪಡೆಯಬಹುದು.

   ಎಂಎಚ್‌ಆರ್‌ಸಿ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿರುವ ಬಗ್ಗೆ ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ‘ಉಪಶಾಮಕ ಆರೈಕೆಯನ್ನು ಆರೋಗ್ಯ ಸೇವೆಯ ವಿಸ್ತರಣೆಯಾಗಿಯೇ ಕಾಣುವ ಅಗತ್ಯವಿದೆ.  ಉಪಶಾಮಕ ಆರೈಕೆಯನ್ನು ಒದಗಿಸುವ ಮಹತ್ವದ ಹೊಣೆಗಾರಿಕೆ ಆರೋಗ್ಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಮೇಲಿದೆ. ಎಂಎಚ್‌ಆರ್‌ಸಿಯನ್ನು ಸ್ಥಾಪಿಸುವ ಮೂಲಕ ಮಾಹೆ ಪ್ರಮುಖವಾದ ಹೆಜ್ಜೆಯನ್ನಿರಿಸಿದ್ದು, ತನ್ನ ಆರೋಗ್ಯಸೇವಾ ವ್ಯವಸ್ಥೆಯ ವ್ಯಾಪ್ತಿಯೊಳಗೆ  ಸುಸಜ್ಜಿತ ಹಾಸ್ಪೈಸ್ ಅನ್ನು ಸ್ಥಾಪಿಸಿರುವ ಭಾರತದ ಏಕೈಕ ವಿಶ್ವವಿದ್ಯಾಲಯ ಎನಿಸಿಕೊಂಡಿದೆ ಎಂದು ಹೇಳಿದರು.

  ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ‘ಮಾಹೆ ಸದಾ ಪ್ರವರ್ತಕ ಸಂಸ್ಥೆಯಾಗಿದೆ. ಆರೋಗ್ಯ ಸೇವೆ ಒದಗಿಸುವುದನ್ನು ಮೀರಿ, ಜ್ಞಾನಸೃಷ್ಟಿ ಹಾಗೂ ಭವಿಷ್ಯಕ್ಕಾಗಿ ಸಾಮರ್ಥ್ಯ ವೃದ್ಧಿಯೂ ನಮ್ಮ ಜವಾಬ್ದಾರಿಯಾಗಿದೆ ಎಂದರು.

ಎಂಎಚ್‌ಆರ್‌ಸಿಯ ನಿರ್ದೇಶಕರಾದ ಉಪಶಾಮಕ ವೈದ್ಯಶಾಸ್ತ್ರ ಸಲಹಾ ತಜ್ಞೆ ಡಾ. ಸೀಮಾ ಆರ್. ರಾವ್ ಮಾತನಾಡಿ, ‘ಗಂಭೀರ ಕಾಯಿಲೆ ಇರುವ ರೋಗಿಗಳ ದೊಡ್ಡ ಭಯಗಳಲ್ಲಿ ನೋವು ಕೂಡ ಒಂದು. ಬಹುತೇಕ ಸಂದರ್ಭಗಳಲ್ಲಿ ಅದನ್ನು ಉತ್ತಮವಾಗಿ ನಿರ್ವಹಿಸಬಹುದು ಎಂದರು.

  ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಕುಲಪತಿ ಡಾ. ಶರತ್ ಕೆ. ರಾವ್, ಸಹ ಕುಲಪತಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಎಂಎಚ್‌ಆರ್‌ಸಿಯ ನಿರ್ದೇಶಕರಾದ ಉಪಶಾಮಕ ವೈದ್ಯಶಾಸ್ತ್ರ ಸಲಹಾ ತಜ್ಞೆ ಡಾ. ಸೀಮಾ ಆರ್. ರಾವ್ ಹಾಗೂ ಸಂಶೋಧನಾ ನಿರ್ದೇಶಕ ಮತ್ತು ಉಪಶಾಮಕ ವೈದ್ಯಶಾಸ್ತ್ರ ಮತ್ತು ಪೂರಕ ಆರೈಕೆ ವಿಭಾಗದ ಪ್ರಾಧ್ಯಾಪಕ ಡಾ. ನವೀನ್ ಸಾಲಿನ್ಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.