ಉಡುಪಿ – ಉಚ್ಚಿಲ ದಸರಾ 2026 : ದಸರಾ ತಯಾರಿಯ ಪರಿಶೀಲನೆ ನಡೆಸಿದ ಡಿಸಿ, ಎಸ್ಪಿ
ಅಕ್ಟೋಬರ್ 12ರಂದು ಮಹಿಳಾ ದಸರಾಕ್ಕೆ ಆಗಮಿಸಲಿರುವ ಸಿಎಂ ಡಿಕೆ ಶಿವ ಕುಮಾರ್
(Uchila) ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಡುಪಿ ಉಚ್ಚಿಲ ದಸರಾ 2026 ಅಕ್ಟೋಬರ್ 11ರ ಭಾನುವಾರದಿಂದ ಮೊದಲ್ಗೊಂಡು ಅಕ್ಟೋಬರ್ 21 ರವರೆಗೆ ನೆರವೇರಲಿದೆ. ಅಕ್ಟೋಬರ್ 12ರಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಸಂಜೆ ಮಹಿಳಾ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಇಲ್ಲಿಯ ಪೂರ್ವ ತಯಾರಿ ಪರಿಶೀಲನೆ ನಡೆಸಲು ಶನಿವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಮತ್ತು ಉಡುಪಿ ಪೊಲೀಸ್ ವರಷ್ಠಾಧಿಕಾರಿ ಹರಿರಾಂ ಶಂಕರ್ ಪರಿಶೀಲನೆ ನಡೆಸಿದರು.
ಈ ಸಂದರ್ಭ ದಕ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ ಜಿ ಶಂಕರ್ ಮತ್ತು ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ ಅವರೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ಬಂದೋ ಬಸ್ತಿನ ಬಗ್ಗೆ ಸಲಹೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ವಿಶ್ವಾಸ ಅಮೀನ್ ಗುಂಡು ಬಿ ಅಮೀನ್, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಸಹಿತ ಆಡಳಿತ ಮಂಡಳಿ ಸದಸ್ಯರು, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಮತ್ತು ಪೊಲೀಸರು ಉಪಸ್ಥಿತರಿದ್ದರು.

