• Home  
  • ಗ್ರಾಮೀಣ ಭಾಗದ ಯುವ ಜನರ ಬದುಕಿಗೆ ಆಶಾಕಿರಣವಾದ ಉಡುಪಿ ಗ್ರಾಮೀಣ ಬಂಟರ ಸಂಘ (Udupi Grameen Bantara Sangha, a ray of hope for the lives of the youth in rural areas)
- social work

ಗ್ರಾಮೀಣ ಭಾಗದ ಯುವ ಜನರ ಬದುಕಿಗೆ ಆಶಾಕಿರಣವಾದ ಉಡುಪಿ ಗ್ರಾಮೀಣ ಬಂಟರ ಸಂಘ (Udupi Grameen Bantara Sangha, a ray of hope for the lives of the youth in rural areas)

Share: ಗ್ರಾಮೀಣ ಭಾಗದ ಯುವ ಜನರ ಬದುಕಿಗೆ ಆಶಾಕಿರಣವಾದ ಉಡುಪಿ ಗ್ರಾಮೀಣ ಬಂಟರ ಸಂಘ  ಕುಂತಳನಗರ: ಮೆಗಾ ಉದ್ಯೋಗ ಮೇಳ ಮತ್ತು ಸ್ಟಡೀ ಅಬ್ರಾಡ್ ಸಮಾರೋಪ   (Udupi) ಉಡುಪಿ: ಗ್ರಾಮೀಣ ಭಾಗದ ಯುವ ಜನರ ಬದುಕಿಗೆ ಆಶಾಕಿರಣವಾದ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ ಜನಪರವಾಗಿ ಯೋಚಿಸುವಲ್ಲಿ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.   ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಘದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಸನ್ […]

(Udupi) ಉಡುಪಿ: ಗ್ರಾಮೀಣ ಭಾಗದ ಯುವ ಜನರ ಬದುಕಿಗೆ ಆಶಾಕಿರಣವಾದ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ ಜನಪರವಾಗಿ ಯೋಚಿಸುವಲ್ಲಿ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.

  ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಘದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಸನ್ ಸೆಂಟರ್‌ಲ್ಲಿ ನಡೆದ 5ನೇ ಮೆಗಾ ಉದ್ಯೋಗ ಮೇಳ ಮತ್ತು ಸ್ಟಡೀ ಅಬ್ರಾಡ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತ ನಾಡಿದರು.

 ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಶೋಕ್ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈವರೆಗೆ ನಾಲ್ಕು ಉದ್ಯೋಗ ಮೇಳಗಳ ಮೂಲಕ 3500 ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡಿದ್ದು ಈ ಬಾರಿಯೂ 52 ಕಂಪನಿಗಳು ಉದ್ಯೋಗಾವ ಕಾಶವನ್ನು ನೀಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

 ಈ ಸಂದರ್ಭ ಪತ್ರಕರ್ತ ಎ ಮೀಡಿಯಾ ಕನ್ನಡದ ಬಾಲಕೃಷ್ಣ ಪೂಜಾರಿ ಉಚ್ಚಿಲ ಮತ್ತು ವಿ4 ಸಂಸ್ಥೆಯ ರವಿರಾಜ್‌ ರವರನ್ನು ಸನ್ಮಾನಿಸಲಾಯಿತು.

    ಶಾಸಕ ಗುರುರಾಜ್ ಗಂಟೀಹೊಳಿ, ಉದ್ಯೋಗ ಮೇಳದ ಸಂಚಾಲಕ ನಿಟ್ಟೆ ವಿವಿಯ ಉದ್ಯೋಗ ನಿಯೋಜನೆ ವಿಭಾ ಮುಖ್ಯಸ್ಥ ಭರತ್ ಜಿ. ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ,ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಜಾಗತಿಕ ಬಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೆಡಿಎಸ್ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಉಡುಪಿ ಬಂಟರ ಮಾತೃ ಸಂಘದ ಉಪಾಧ್ಯಕ್ಷ ಮಿಥುನ್ ಹೆಗ್ಡೆ, ಸುಜ್ಞಾನ್‌ ಪ್ರತಿನಿಧಿ ನತಾಷಾ, ಮನೋಹ‌ರ್ ಶೆಟ್ಟಿ ಸಾಯಿರಾಧ, ಪ್ರಮುಖರಾದ ಬೆಳ್ಳಂಪಳ್ಳಿ ನವೀನ್ ಕುಮಾ‌ರ್ ಶೆಟ್ಟಿ‌, ಸುರೇಶ್ ಶೆಟ್ಟಿ ನವೀನ್ ಶೆಟ್ಟಿ ಪಡುಬಿದ್ರಿ, ಪೂನಮ್ ಶೆಟ್ಟಿ, ಅಜಯ್ ಪುರುಷೋತ್ತಮ ಶೆಟ್ಟಿ, ನಿರುಪಮಾ ಪ್ರಸಾದ್ ಶೆಟ್ಟಿ ಮನೋಹ‌ರ್ ಶೆಟ್ಟಿ ತೋನ್ಸೆ, ಸಂತೋಷ್ ಶೆಟ್ಟಿ ಪಲ್ಲವಿ, ಉಮೇಶ್ ಶೆಟ್ಟಿ ಕುತ್ಯಾರು, ಸಂತೋಷ್, ಪ್ರಜ್ವಲ್ ಶೆಟ್ಟಿ, ಟ್ರಸ್ಟ್ ಕಾರ್ಯಕ್ರಮ ನಿರ್ದೇಶಕ ಪದ್ಮನಾಭ ಹೆಗ್ಡೆ, ನಿರ್ದೇಶಕರಾದ ದಯಾನಂದ ಶೆಟ್ಟಿ ಕಲ್ಮಂಜೆ, ಸತೀಶ್ ಶೆಟ್ಟಿ ಜಗದೀಶ್ ಶೆಟ್ಟಿ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.

  ಅಶೋಕ್‌ ಕುಮಾ‌ರ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ವಿಜಿತ್ ಶೆಟ್ಟಿ ವಂದಿಸಿದರು. ನಿಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಪ್ರೊಪೆಸರ್ ಡಾ. ಸುಧೀರ್ ಕುಮಾರ್ ರೈ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.