• Home  
  • ಬದುಕು ಮೆರವಣಿಗೆಯಂತೆ – ಡಾ. ಗುರುರಾಜ ಕರ್ಜಗಿ ಅಭಿಮತ (Life is Like a Procession – Dr. Gururaja Karjagi’s Perspective
- ಧಾರ್ಮಿಕ

ಬದುಕು ಮೆರವಣಿಗೆಯಂತೆ – ಡಾ. ಗುರುರಾಜ ಕರ್ಜಗಿ ಅಭಿಮತ (Life is Like a Procession – Dr. Gururaja Karjagi’s Perspective

Share: ಬದುಕು ಮೆರವಣಿಗೆಯಂತೆ – ಡಾ. ಗುರುರಾಜ ಕರ್ಜಗಿ ಅಭಿಮತ  ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ  ಕಲಾಮಂಟಪದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮ (Kateelu) ಕಟೀಲು : ವೇಷಧಾರಿಗಳು, ಕಲಶ ಹಿಡಿದವರು, ಕುಣಿಯುವವರು, ವಾದ್ಯವಾದಕರು ಹೀಗೆ ನಾನಾ ಮಂದಿಯೊಂದಿಗೆ ಹೊರಟ ಮೆರವಣಿಗೆಯನ್ನು ಹಾದಿಯುದ್ಧಕ್ಕೂ ನಾನಾ ಭಾವನೆಗಳೊಂದಿಗೆ ನೋಡುವ ಸಾಲುಸಾಲು ಜನರು. ನಮ್ಮ ಬದುಕೂ ಒಂದು ಅದ್ಭುತ ಮೆರವಣಿಗೆಯಂತೆ ಎಂದು ಖ್ಯಾತ ಚಿಂತಕ ಡಾ. ಗುರುರಾಜ ಕರ್ಜಗಿ ಹೇಳಿದರು.   ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕಲಾಮಂಟಪದಲ್ಲಿ ಆಯೋಜಿಸಲಾದ ಉಪನ್ಯಾಸ […]

(Kateelu) ಕಟೀಲು : ವೇಷಧಾರಿಗಳು, ಕಲಶ ಹಿಡಿದವರು, ಕುಣಿಯುವವರು, ವಾದ್ಯವಾದಕರು ಹೀಗೆ ನಾನಾ ಮಂದಿಯೊಂದಿಗೆ ಹೊರಟ ಮೆರವಣಿಗೆಯನ್ನು ಹಾದಿಯುದ್ಧಕ್ಕೂ ನಾನಾ ಭಾವನೆಗಳೊಂದಿಗೆ ನೋಡುವ ಸಾಲುಸಾಲು ಜನರು. ನಮ್ಮ ಬದುಕೂ ಒಂದು ಅದ್ಭುತ ಮೆರವಣಿಗೆಯಂತೆ ಎಂದು ಖ್ಯಾತ ಚಿಂತಕ ಡಾ. ಗುರುರಾಜ ಕರ್ಜಗಿ ಹೇಳಿದರು.

  ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕಲಾಮಂಟಪದಲ್ಲಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಮನೆಯಿಂದ ಸಾಮಾನುಗಳ ಪಟ್ಟಿ ಮಾಡಿಕೊಂಡು ಕಿರಾಣಿ ಅಂಗಡಿಗೆ ಹೋಗಿ ನಮಗೆ ಬೇಕಾದ್ದನ್ನು ಕೇಳಿ ಅಂಗಡಿಯವ ಕೊಟ್ಟದ್ದನ್ನು ತರುತ್ತಿದ್ದೆವು. ಈಗ ಹಾಗಲ್ಲ, ಮಾಲ್‌ಗಳಿಗೆ ಹೋದರೆ ಒಂದೇ ಬಗೆಯ ನಾನಾ ಕಂಪನಿಗಳ ಅನೇಕ ವಸ್ತುಗಳಿರುತ್ತವೆ. ಮನೆಗೆ ಬಂದು ಚೀಲ ತೆರೆದು ನೋಡಿದರೆ ನಮಗೆ ಅಗತ್ಯವಿಲ್ಲದ್ದನ್ನೂ ಕೊಂಡು ತಂದಿರುತ್ತೇವೆ.

   ನಾವು ಸಮಾಜದಿಂದ ಪಡೆದುದ್ದನ್ನು ವಾಪಾಸು ಕೊಡಬೇಕು. ಅದು ಜ್ಞಾನ ಅಥವಾ ಬೇರೆ ಏನೇ ಆಗಿರಬಹುದು.
  ಪಾಶ್ಚಾತ್ಯರು ತಮಗೆ ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎನ್ನುತ್ತಾರೆ. ಸಮಯಕ್ಕೆ ಮಹತ್ವ ಕೊಡುತ್ತಾರೆ ಅಂತಹ ಪ್ರಾಮಾಣಿಕತೆಯನ್ನು ನಾವು ಕಲಿಯಬೇಕು. ವಿದೇಶದಲ್ಲಿ ದುಡ್ಡು ಮುಖ್ಯ ಎಂದು ನಂಬಿದ್ದರೆ, ಇಲ್ಲಿ ಜೀವಂತಿಕೆಯನ್ನು ನಂಬಿದ್ದೇವೆ.

   ನಾನು ಒಳ್ಳೆಯವನೇ ಆದರೆ ಜಗತ್ತು ಒಳ್ಳೆಯದು. ನನ್ನ ಜೀವನ ಸಂತೊಷವಾಗಿರಬೇಕಾದರೆ ಒಳ್ಳೆಯದ್ದನ್ನೇ ಮಾಡಬೇಕು. ಒಳ್ಳೆಯದನ್ನೇ ನೋಡಬೇಕು. ನಾವು ಬದುಕಿದಾಗ ಮನೆ ಸಮಾಜಕ್ಕೆ ಒಳ್ಳೆಯದನ್ನು ಮಾಡುವುದು ಮಾತ್ರವಲ್ಲ, ಕೃಷ್ಣನಂತೆ ಹೆಜ್ಜೆ ಗುರುತನ್ನು ಮೂಡಿಸಬೇಕು. ಜನರು ಓದದೇ ಅರ್ಥ ಮಾಡಿಕೊಂಡ ಮಹಾಕಾವ್ಯಗಳು ರಾಮಾಯಣ ಮತ್ತು ಮಹಾಭಾರತ ಎನ್ನುವುದು ಗಮನೀಯ ಎಂದು ಕರ್ಜಗಿ ಹೇಳಿದರು.
  ಕಟೀಲು ದೇಗುಲದ ಅರ್ಚಕರಾದ ಶ್ರೀಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಸದಾನಂದ ಆಸ್ರಣ್ಣ ಉಪಸ್ಥಿತಿಯಲ್ಲಿ ಡಾ. ಕರ್ಜಗಿಯವರನ್ನು ದೇವರ ಶೇಷವಸ್ತ್ರ ನೀಡಿ ಗೌರವಿಸಲಾಯಿತು.  

Leave a comment

Your email address will not be published. Required fields are marked *

eMedia Kannada  @2025. All Rights Reserved.