ಯುವವಾಹಿನಿ ಪಡುಬಿದ್ರಿ :16ನೇ ವರ್ಷದ ಮಕ್ಕಳ ಹಬ್ಬ ಕಾರ್ಯಕ್ರಮ
ಖುಷಿ ಅಲಗುಂದಿ ‘ಕಲಾಶ್ರೀ’ ನವ್ಯ ಪಿ ಓಲೇಕರ್ ಗೆ ‘ಕಲಾರತ್ನ’ಪ್ರಶಸ್ತಿ ಪ್ರದಾನ
(Padubidri) ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ 16 ನೇ ವರ್ಷದ ಮಕ್ಕಳ ಹಬ್ಬವು ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರಾಥಮಿಕ ವಿಭಾಗ) ಇಲ್ಲಿ ಭಾನುವಾರ ಜರಗಿತು.
ಕೆಪಿಎಸ್ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿ ಕು. ತನಿಷಾ ಕಾರ್ಯಕ್ರಮ ಉದ್ಘಾಟಿಸಿದರು.
ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ನಿಖಿಲ್ ಪೂಜಾರಿ, ಪಡುಬಿದ್ರಿಯ ಕಲ್ಲಟ್ಟೆ ಜಾರಂದಾಯ ದೈವಸ್ಥಾನದ ಗುತ್ತಿನಾರ್ ವಿಶು ಕುಮಾರ್ ಶೆಟ್ಟಿ, ಕೆಪಿಎಸ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೃಷ್ಣ ಬಂಗೇರ, ಎಸ್ಡಿಎಮ್ಸಿ ಉಪಾಧ್ಯಕ್ಷ ವಸಂತ್, ನಾಮನಿರ್ದೇಶಿತ ಸದಸ್ಯ ಹೇಮಚಂದ್ರ ಸಾಲ್ಯಾನ್ ಉಪಸ್ಥಿತರಿದ್ದರು.
ಚೈತ್ರ ಗಣೇಶ್ ಮತ್ತು ದೀಪಕ್ ಕರ್ನಿರೆ ನಿರೂಪಿಸಿದರು.
ಸಮಾರೋಪ
ಸಮಾರೋಪ ಸಮಾರಂಭದ ಮುಖ್ಯ ಅತಿಥಿಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ. ಉಡುಪಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ,16 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ಮಕ್ಕಳ ಹಬ್ಬ ಕಾರ್ಯಕ್ರಮ ಆಯೋಜಿಸಿರುವ ಪಡುಬಿದ್ರಿ ಯುವವಾಹಿನಿಯ ಕಾರ್ಯ ಶ್ಲಾಘನೀಯ. ಸಂಸ್ಕೃತಿ, ಸಂಸ್ಕಾರದೊಂದಿಗೆ ಬದುಕನ್ನು ಸಾಗಿಸುವ ಬಗ್ಗೆ ಬಾಲ್ಯದಲ್ಲಿ ಪೋಷಕರು ಮಕ್ಕಳಿಗೆ ತಿಳಿಸಬೇಕಾಗಿದೆ. ಸಣ್ಣ ವಯಸ್ಸಿನಲ್ಲಿ ಮೊಬೈಲ್ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ಹೆತ್ತವರು ನಿಗಾವಹಿಸಬೇಕಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಿ, ಮಕ್ಕಳಿಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.
ಆಧ್ಯಾ ಫೌಂಡೇಶನ್ ಉಳ್ಳೂರು ಅಧ್ಯಕ್ಷರಾದ ರಾಕೇಶ್ ಅಜಿಲ ಕೆ.ಆರ್ ಮಾತನಾಡಿ, ಯುವ ಸಮುದಾಯವು ತಂತ್ರಜ್ಞಾನವನ್ನು ಸದುಪಯೋಗಿಪಡಿಸಿಕೊಂಡು ಸಮಾಜದಲ್ಲಿಯ ಮಾರಕಗಳಿಂದ ದೂರವಿರಬೇಕಿದೆ ಎಂದರು.
ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷರಾದ ಕೆ. ಸದಾನಂದ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ದ್ವಿತೀಯ ಉಪಾಧ್ಯಕ್ಷ ಸುರೇಶ್ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಮಮತಾ ರಾಜ್, ಕೆಪಿಎಸ್ ಪಡುಬಿದ್ರಿ ಪ್ರಾಂಶುಪಾಲರಾದ ಡಾ. ಸುಮಾ ಎಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೈಲಜ ಜಿ. ಎನ್. ಮಾತನಾಡಿದರು.
ಸನ್ಮಾನ :
ಸಹಕಾರಿ ರತ್ನ ಪುರಸ್ಕೃತ ವೈ. ಸುಧೀರ್ ಕುಮಾರ್, ಉಪನ್ಯಾಸಕ ಹರೀಶ್ ಕೋಟ್ಯಾನ್ ಉಳ್ಳೂರು, ಮಕ್ಕಳ ಹಬ್ಬ ಕಾರ್ಯಕ್ರಮದ ರುವಾರಿ ರವಿರಾಜ್ ಎನ್ ಕೋಟ್ಯಾನ್, ಘಟಕದ ಅಧ್ಯಕ್ಷ ನಿಖಿಲ್ ಪೂಜಾರಿ, ಕ್ರೀಡಾ ವಿಭಾಗದಲ್ಲಿ ಪೃಥ್ವಿನ್ ಹರೀಶ್ ಅಂಚನ್, ತೇಜಲ್ ಪಿ ಕೋಟ್ಯಾನ್, ಪ್ರಾಚಿ ಪ್ರದೀಪ್ ಕೋಟ್ಯಾನ್, ಅಕ್ಷಯ್ ಗಂಗಾಧರ್ ಕೋಟ್ಯಾನ್, ನಕ್ಷತ್ರ ಲೋಕೇಶ್ ರನ್ನು ಸನ್ಮಾನಿಸಲಾಯಿತು.
ಕಲಾಶ್ರೀ ಮತ್ತು ಕಲಾರತ್ನ ಪ್ರಶಸ್ತಿ:
1 ನೇ ತರಗತಿಯಿಂದ 4ನೇ ತರಗತಿಯ ಮಕ್ಕಳಿಗಾಗಿ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಶೇಷ ಸಾಧನೆ ಗೈದ 4ನೇ ತರಗತಿ ವಿದ್ಯಾರ್ಥಿನಿ ಖುಷಿ ಅಲಗುಂದಿ ‘ಕಲಾಶ್ರೀ’ ಮತ್ತು 5ನೇ ತರಗತಿಯಿಂದ 7ನೇ ತರಗತಿಯ ಮಕ್ಕಳಿಗಾಗಿ ನಡೆದ ಸ್ಪರ್ಧೆಯಲ್ಲಿ ವಿಶೇಷ ಸಾಧನೆಗೈದ 6ನೇ ತರಗತಿ ವಿದ್ಯಾರ್ಥಿನಿ ನವ್ಯ ಪಿ. ಓಲೇಕರ್ ಗೆ ‘ಕಲಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಘಟಕದ ಸದಸ್ಯ ಅಭಿಷೇಕ್ ಕೋಟ್ಯಾನ್ ಪ್ರಾಯೋಜಿತ ವಿದ್ಯಾರ್ಥಿ ವೇತನ ವಿತರಣೆ, ಯುವವಾಹಿನಿ ಘಟಕದಿಂದ ಶಿಕ್ಷಕರಿಗೆ ಗೌರವ, ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.
ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷರಾದ ನಿಖಿಲ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ದ್ವಿತೀಯ ಉಪಾಧ್ಯಕ್ಷ ಸುರೇಶ್ ಪೂಜಾರಿ, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷರಾದ ಕೆ. ಸದಾನಂದ ಪೂಜಾರಿ, ಆಧ್ಯಾ ಫೌಂಡೇಶನ್ ಉಳ್ಳೂರು ಅಧ್ಯಕ್ಷರಾದ ರಾಕೇಶ್ ಅಜಿಲ ಕೆ.ಆರ್., ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಮಮತಾ ರಾಜ್, ಕೆಪಿಎಸ್ ಪಡುಬಿದ್ರಿ ಪ್ರಾಂಶುಪಾಲರಾದ ಡಾ. ಸುಮಾ ಎಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೈಲಜ ಜಿ. ಎನ್, ಯುವವಾಹಿನಿ ಪಡುಬಿದ್ರಿ ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಹರೀಶ್ ಕೋಟ್ಯಾನ್ ಉಳ್ಳೂರು ಉಪಸ್ಥಿತರಿದ್ದರು.
ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕ ಹರೀಶ್ ಕೋಟ್ಯಾನ್ ಉಳ್ಳೂರು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ರವಿರಾಜ್ ಎನ್ ಕೋಟ್ಯಾನ್ ಪ್ರಸ್ತಾವಿಸಿದರು. ಸುಷ್ಮಾ, ಪ್ರಕಾಶ್ ಕೆರೆಮನೆ ನಿರೂಪಿಸಿದರು. ಪೂರ್ಣಿಮ ವಿಧಿತ್ ಬಹುಮಾನಿತರ ಪಟ್ಟಿ ವಾಚಿಸಿದರು. ಘಟಕದ ಕಾರ್ಯದರ್ಶಿ ರಾಜೇಶ್ವರಿ ಅವಿನಾಶ್ ವಂದಿಸಿದರು.

