ತೆಂಕ ಎರ್ಮಾಳು ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡ ಉದ್ಘಾಟನೆ
ತೆಂಕ ಎರ್ಮಾಳು ಎಜ್ಯುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟಿರುವ ಅದಮಾರು ಮಠದ ಶ್ರೀ ವಿಬುದೇಶ ತೀರ್ಥ ಶ್ರೀಪಾದರ ಸಂಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡವನ್ನು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಉದ್ಘಾಠಿಸಿದರು.
ಅವರು ಈ ಸಂದರ್ಭ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಅಧಿಕವಾಗುತ್ತಿದ್ದು, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಲು ಸಾಧ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ,ಪ್ರಮೋದ್ ಮಧ್ವರಾಜ್, ಅದಾನಿ ದಕ್ಷಿಣ ಭಾರತ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಡಿಸಿಸಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉದ್ಯಮಿ ಶಶಿಧರ ಕೆ. ಶೆಟ್ಟಿ ಎರ್ಮಾಳು, ಡಾ. ಸುನಿಲ್ ಕುಮಾರ್ ಎರ್ಮಾಳ್, ಉಪ ಶಿಕ್ಷಣಾಕಾರಿ ಗಣಪತಿ ಕೆ., ಶಿಕ್ಷಣ ಸಂಯೋಜಕ ಶಂಕರ್ ಉಪಸ್ಥಿತರಿದ್ದರು.
ಎರ್ಮಾಳು ತೆಂಕ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿದರು.
ಎರ್ಮಾಳು ತೆಂಕ ಮೊಗವೀರ ಸಧಾದ ಅಧ್ಯಕ್ಷ ದಾಮೋದರ ಸುವರ್ಣ ಪ್ರಸ್ತಾವಿಸಿದರು.
ಸೊಸೈಟಿಯ ಮುಂಬಯಿ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಎಂ. ಸುವರ್ಣ ವರದಿ ವಾಚಿಸಿದರು.
ಭವಾನಿ ಹಾಗೂ ಭಾಗ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.
ತೆಂಕ ಮೊಗವೀರ ಸಭಾ ಮುಂಬಯಿ ಸಮಿತಿ ಅಧ್ಯಕ್ಷ ಮೋಹನ್ ಕೆ. ಅಮೀನ್ ವಂದಿಸಿದರು.

