ಬೆಂಗಳೂರು: ತನ್ನ ತಾಯಿಯನ್ನು ಕೊಂದು, ಮೃತದೇಹವನ್ನು ಸೂಟ್‌ಕೇಸ್ ನಲ್ಲಿ ಹಾಕಿ ಪೋಲಿಸ್ ಠಾಣೆಗೆ ತಂದು ಪೋಲೀಸರಿಗೆ ಶರಣಾಧ ಘಟನೆ ಬೆಂಗಳೂರಿನಲ್ಲಿ ಘಟಿಸಿದೆ.
ತನ್ನ ತಾಯಿ ಬೀವಾ ಪಾಲ್ (70) ಅವರಿಗೆ 20 ನಿದ್ರೆ ಮಾತ್ರೆಗಳನ್ನು ಕೊಟ್ಟುಮಲಗಿಸಿ, ನಂತರ ಶಾಲಿನಿಂದ ಕುತ್ತಿಗೆ ಬಿಗಿದು ಕೊಂದಿರುವ ಮಗಳು ಸೆನಾಲಿ ಸೇನ್ (39), ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಬೆಂಗಳೂರಿನ ಮೈಕೊ ಲೇಔಟ್ ಠಾಣೆಗೆ ಶರಣಾಗಿದ್ದಾಳೆ.
ಆರೋಪಿ ಸೆನಾಲಿ ಸೇನ್, ತಾಯಿ ಬೀವಾ ಪಾಲ್ ಮತ್ತು ಅತ್ತೆ ಜೊತೆ ಬಿಳೇಕನಹಳ್ಳಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ವಾಸವಿದ್ದರು. ಮನೆಯಲ್ಲಿ ನಿತ್ಯವೂ ಗಲಾಟೆ ನಡೆಯುತ್ತಿತ್ತು. ಇದರಿಂದ ಬೇಸತ್ತು ಮಗಳು ಕೃತ್ಯ ಎಸಗಿದ್ದಾಳೆ’ ಎಂದು ಪೊಲೀಸರು ಹೇಳಿದರು.
ಜೂನ್ 12ರಂದು ಬೆಳಿಗ್ಗೆ ತಾಯಿಗೆ 20 ನಿದ್ರೆ ಮಾತ್ರೆಯನ್ನು ಸೆನಾಲಿ ನುಂಗಿಸಿದ್ದಳು. ಬಳಿಕ ತಾಯಿ ಹೊಟ್ಟೆ ನೋವು ಅಂದಾಗ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಳು. ಇದಾದ ಬಳಿಕ ಟ್ರಾಲಿ ಸೂಟ್‌ಕೇಸ್‌ನಲ್ಲಿ ತಾಯಿಯ ಮೃತದೇಹ ಹಾಗೂ ತಂದೆಯ ಫೋಟೊ ಇಟ್ಟಿದ್ದಳು. ನಂತರ, ಮಧ್ಯಾಹ್ನ ಠಾಣೆಗೆ ಸೂಟ್‌ಕೇಸ್ ತಂದಿದ್ದಳು. ಅದನ್ನು ನೋಡಿದ ಪೊಲೀಸ್ ಸಿಬ್ಬಂದಿ ದಂಗಾಗಿದ್ದಾರೆ.
ತಾಯಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಅದರಿಂದ ಬೇಸತ್ತಿದ್ದರು. ತೀರಿಕೊಂಡಿರುವ ತನ್ನ ಪತಿ ಬಳಿ ತನ್ನನ್ನೂ ಕಳುಹಿಸುವಂತೆ ಮಗಳಿಗೆ ಹೇಳಿದ್ದಳು. ಹೀಗಾಗಿ, ಮಗಳು ಕೊಲೆ ಮಾಡಿದ್ದಾಳೆ. ಎಂದು ಸೆನಾಲಿ ಪೊಲೀಸರಿಗೆ ತಿಳಿಸಿದ್ದಾಳೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಸೆನಾಲಿಯನ್ನು ಬಂಧಿಸಿದ್ದಾರೆ.
ಕೊಲೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಿದೆ’ ಎಂದು ಪೊಲೀಸರು ಹೇಳಿದರು.

