ಪಡುಬಿದ್ರಿಯ ಆತ್ಮ ಶಕ್ತಿ ವಿವಿದ್ದೋದೇಶ ಸಹಕಾರಿ ಸಂಘದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಪಡುಬಿದ್ರಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಪಡುಬಿದ್ರಿ ಬೋರ್ಡ್ ಶಾಲೆಯಲ್ಲಿ “ಉಚಿತ ನೇತ್ರ ತಪಾಸಣೆ , ದಂತ ಚಿಕಿತ್ಸೆ ಮತ್ತು ಸಾಮಾನ್ಯ ವ್ಯೆದ್ಯಕೀಯ ತಪಾಸಣಾ ಶಿಬಿರ ಗುರುವಆರ ನೆರವೇರಿತು.
ಶಿಬಿರವನ್ನು ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್ ಉದ್ಘಾಠಿಸಿದರು.
ಅವರು ಈ ಸಂದರ್ಭ ಮಾತನಾಡಿ, ಸಹಕಾರಿ ಸಂಸ್ಥೆಗಳು ಕೇವಲ ಲಾಭದ ದೃಷ್ಟಿಯನ್ನುಹೊಂದದೆ ಜೊತೆಗೆ ಜನರ ಅರೋಗ್ಯ ದೃಷ್ಟಿಯಿಂದ ಉಚಿತವಾಗಿ ಸಾರ್ವಜನಿಕರಿಗೆ ವ್ಯೆದಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಉತ್ತಮ ಗುಣಮಟ್ಟದಲ್ಲಿ ನೀಡುತ್ತಿರುವುದು ಶ್ಲಾಘನೀಯ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಅತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಆತ್ಮ ಶಕ್ತಿ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮಾಜಿ ತಾ.ಪಂ. ಸದಸ್ಯ ನವೀನಚಂದ್ರ ಜೆ. ಶೆಟ್ಟಿ, ಪಡುಬಿದ್ರಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ವೈ. ಸುಕುಮಾರ್ , ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯ ಕೃಷ್ಣಯ್ಯ , ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಕೃಷ್ಣ ಬಂಗೇರ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪದ್ಮಿನಿ ತಂತ್ರಿ, ಅಮೃತಮಾಯಿ ಮಠ ಬೋಳೂರು ಇಲ್ಲಿನ ವೆೃದ್ಯಾಧಿಕಾರಿಗಳಾದ ಡಾ. ಸುಚಿತ್ರಾ ಸೊರಕೆ , ಡಾ. ದೇವದಾಸ್ , ಉಡುಪಿ ಪ್ರಸಾದ್ ನೇತ್ರಾಲಯದ ವ್ಯೆದ್ಯಾಧಿಕಾರಿ ಡಾ. ಅಕ್ಷತಾ, ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ವ್ಯೆದ್ಯಾಧಿಕಾರಿ ಡಾ. ಅಧ್ರಾ ಮಂಗಳೂರು ವೆನ್ ಲಾಕ್ ಆಸ್ಪತ್ರೆ ಯ ಬ್ಲಡ್ ಬ್ಯಾಂಕ್ , ಲ್ಯಾಬ್ ಟೆಕ್ನಿಷನ್ ಜೋಯಾಸನ್ ಉಪಸ್ಥಿತರಿದ್ದರು..
ಸುಮಾರು 350 ಮಂದಿ ಶಿಬಿರದ ಪ್ರಯೋಜನ ಪಡೆದರು.
180 ಮಂದಿಗೆ ಕಣ್ಣಿನ ತಪಾಸಣಿ ನಡೆಸಲಾಯಿತು. ಒಟ್ಟು 120 ಮಂದಿಗೆ ಕನ್ನಡವನ್ನು ನೀಡಲಾಯಿತು.. 30 ಮಂದಿಗೆ ಕಣ್ಣಿನ ಪೂರೆ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
80 ಮಂದಿಗೆ ದಂತ ಚಿಕಿತ್ಸೆ ಯನ್ನು ನಡೆಸಲಾಯಿತು.. 100 ಮಂದಿ ಶಾಲಾ ವಿದ್ಯಾರ್ಥಿಗಳಿಗೆ ರಕ್ತ ವರ್ಗೀಕರಣ ತಪಾಸಣೆ ನಡೆಸಲಾಯಿತು. 60 ಮಂದಿಗೆ ಸಾಮಾನ್ಯ ವ್ಯೆದ್ಯಕೀಯ ತಪಾಸಣೆ ನಡೆಸಲಾಯಿತು..
ಪಡುಬಿದ್ರಿ ಶಾಖಾ ಪ್ರಬಂಧಕರಾದ ಸ್ವಾತಿ ಸ್ವಾಗತಿಸಿದರು. ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ದೀಪಿಕಾ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು.

