• Home  
  • ವಳಚ್ಚಿಲ್ ಸಹ್ಯಾದ್ರಿ ಕಾಲೇಜು ಬಳಿ ಭೀಕರ ರಸ್ತೆ ಅಪಘಾತ
- ಅಪರಾಧ

ವಳಚ್ಚಿಲ್ ಸಹ್ಯಾದ್ರಿ ಕಾಲೇಜು ಬಳಿ ಭೀಕರ ರಸ್ತೆ ಅಪಘಾತ

Share: ಡಿವೈಡರ್ ಗೆ ಬೈಕ್ ಬಡಿದು ಎಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು ಮಂಗಳೂರು : ನಗರದ ಹೊರವಲಯದ ವಳಚ್ಚಿಲ್ ಬಳಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜ್ ನ ಅರ್ಕಿಟೆಕ್ ವಿಭಾಗ ವಿದ್ಯಾರ್ಥಿಯಾಗಿರುವ ಕೇರಳ ಮೂಲದ ಮಹಮ್ಮದ್ ನಶತ್ (21) ಎಂಬಾತ ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಯಾಗಿದ್ದಾನೆ. ಬುಧವಾರ ಬೆಳಗ್ಗೆ ಕಾಲೇಜಿಗೆ‌ ಹೋಗುವಾಗ ಬೈಕ್ ಡಿವೈಡರ್ ಗೆ ಬಡಿದು ಯುವಕ ಹಾಗೂ ಬೈಕ್ ಮೇಲಕ್ಕೆ ಎಸೆಯಲ್ಪಟ್ಟಿದ್ದು, ಈ ದೃಶ್ಯ […]

ಡಿವೈಡರ್ ಗೆ ಬೈಕ್ ಬಡಿದು ಎಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮಂಗಳೂರು : ನಗರದ ಹೊರವಲಯದ ವಳಚ್ಚಿಲ್ ಬಳಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜ್ ನ ಅರ್ಕಿಟೆಕ್ ವಿಭಾಗ ವಿದ್ಯಾರ್ಥಿಯಾಗಿರುವ ಕೇರಳ ಮೂಲದ ಮಹಮ್ಮದ್ ನಶತ್ (21) ಎಂಬಾತ ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಯಾಗಿದ್ದಾನೆ.

ಬುಧವಾರ ಬೆಳಗ್ಗೆ ಕಾಲೇಜಿಗೆ‌ ಹೋಗುವಾಗ ಬೈಕ್ ಡಿವೈಡರ್ ಗೆ ಬಡಿದು ಯುವಕ ಹಾಗೂ ಬೈಕ್ ಮೇಲಕ್ಕೆ ಎಸೆಯಲ್ಪಟ್ಟಿದ್ದು, ಈ ದೃಶ್ಯ ರಸ್ತೆ ಬದಿ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅತೀ ವೇಗ ಅಪಘಾತಕ್ಕೆ ಕಾರಣವಾಗಿದೆ.

ಅಪಘಾತದಲ್ಲಿ ಯುವಕನ ತಲೆ ವಿದ್ಯುತ್ ಕಂಬಕ್ಕೆ ಬಡಿದು, ತಲೆ ಛಿದ್ರಗೊಂಡು, ಆತ ಸ್ಥಳದಲ್ಲೇ ಸಾವನ್ನಪಿದ್ದಾನೆ ಎಂದು ತಿಳಿದು ಬಂದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.