• Home  
  • ರಾ.ಹೆ. ೬೬ರ ಕಟಪಾಡಿ ಜಂಕ್ಷನ್ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಪರಿಶೀಲನೆ
- ರಾಜಕೀಯ - ವಿಡಿಯೋ

ರಾ.ಹೆ. ೬೬ರ ಕಟಪಾಡಿ ಜಂಕ್ಷನ್ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಪರಿಶೀಲನೆ

Share: ರಾ.ಹೆ. ೬೬ರ ಕಟಪಾಡಿ ಜಂಕ್ಷನ್ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಪರಿಶೀಲನೆ  ಉಡುಪಿ\ ಕಟಪಾಡಿ, ಸೆ.೨೬: ರಾ.ಹೆ.೬೬ರ ಕಟಪಾಡಿ ಜಂಕ್ಷನ್ ಪ್ರದೇಶದಲ್ಲಿ ಓವರ್ ಬ್ರಿಡ್ಜ್ ಬೇಡಿಕೆ, ವಾಹನ ದಟ್ಟಣೆಯಿಂದ ಜನರಿಗೆ ರಾಷ್ಟ್ರೀಯ ಹೆದ್ದಾರಿ ದಾಟುವಲ್ಲಿ ಸಮಸ್ಯೆ ಇರುವುದರ ಬಗ್ಗೆ  ಗಮನಕ್ಕೆ ತಂದಿದ್ದು, ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಮಂಜೂರಾತಿ ಮಾಡಿರುತ್ತಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೇಳಿದರು. […]

ರಾ.ಹೆ. ೬೬ರ ಕಟಪಾಡಿ ಜಂಕ್ಷನ್ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಪರಿಶೀಲನೆ

 ಉಡುಪಿ\ ಕಟಪಾಡಿ, ಸೆ.೨೬: ರಾ.ಹೆ.೬೬ರ ಕಟಪಾಡಿ ಜಂಕ್ಷನ್ ಪ್ರದೇಶದಲ್ಲಿ ಓವರ್ ಬ್ರಿಡ್ಜ್ ಬೇಡಿಕೆ, ವಾಹನ ದಟ್ಟಣೆಯಿಂದ ಜನರಿಗೆ ರಾಷ್ಟ್ರೀಯ ಹೆದ್ದಾರಿ ದಾಟುವಲ್ಲಿ ಸಮಸ್ಯೆ ಇರುವುದರ ಬಗ್ಗೆ  ಗಮನಕ್ಕೆ ತಂದಿದ್ದು, ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಮಂಜೂರಾತಿ ಮಾಡಿರುತ್ತಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೇಳಿದರು.

ಅವರು ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಎನ್.ಎಚ್.ಎ.ಐ. ಅಧಿಕಾರಿಗಳೊಂದಿಗೆ ಕಟಪಾಡಿ ಜಂಕ್ಷನ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ “ಈ ಮೀಡಿಯಾ”ಗೆ ಪ್ರತಿಕ್ರಿಯಿಸಿ ಮಾತನಾಡಿದರು.

ಮೂರು ವಿದ್ಯುತ್ ಲೈನ್‌ಗಳು ಹೆದ್ದಾರಿಯಲ್ಲಿ ಹಾದು ಹೋಗುತ್ತಿದೆ. ಈ ವಿದ್ಯುತ್ ಲೈನ್‌ಗಳ ತೆರವಿಗೆ ಬೇಕಾದ ಎಸ್ಟಿಮೇಟ್ ಮಾಡಿದ ತತ್‌ಕ್ಷಣ ಅದನ್ನು ತೆರವುಗೊಳಿಸಲು ಆವಶ್ಯಕ ಹಣವನ್ನು ನ್ಯಾಷನಲ್ ಹೈವೇ – ಕೇಂದ್ರ ಸರಕಾರ ಭರಿಸುತ್ತದೆ. ಮೆಸ್ಕಾಂ ಮೂಲಕ ತೆರವುಗೊಂಡ ತತ್‌ಕ್ಷಣ ಟೆಂಡರ್‌ಗೆ ಹಾಕಲಾಗುತ್ತದೆ. ಆ ಬಳಿಕ ಓವರ್ ಬ್ರಿಡ್ಜ್ ಕಾಮಗಾರಿಯ ಕೆಲಸವನ್ನು ಆರಂಭಿಸಲಾಗುತ್ತದೆ ಎಂದಿದ್ದಾರೆ.

ಈ ಸಂರ‍್ಭ ಎನ್‌ಎಚ್‌ಎಐ ಪ್ರಾಜೆಕ್ಟ್ ಅಧಿಕಾರಿ, ಟೋಲ್ ಮ್ಯಾನೇಜರ್ ಶಿವಪ್ರಸಾದ್, ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಉಪಾಧ್ಯಕ್ಷರಾದ ಸುಗುಣ ಪೂಜಾರ್ತಿ, ಕೋಟೆ ಗ್ರಾ.ಪಂ. ಉಪಾಧ್ಯಕ್ಷ ಯೋಗೀಶ್, ಗ್ರಾ.ಪಂ. ಸದಸ್ಯರು, ಗೀತಾಂಜಲಿ ಎಂ.ಸುವರ್ಣ, ರಾಜ್ಯ   ಶಿಲ್ಪಾ ಸುವರ್ಣ, ವೀಣಾ ಎಸ್. ಶೆಟ್ಟಿ, ಶ್ರೀಕಾಂತ್ ನಾಯಕ್,  ಗೋಪಾಲಕೃಷ್ಣ ರಾವ್, ಸುಮಾ ಯು. ಶೆಟ್ಟಿ, ಪ್ರಮುಖರಾದ ಕೆ. ಮುರಲೀಧರ ಪೈ, ನಿತಿನ್ ಶೇರಿಗಾರ್, ಸುಭಾಸ್ ಬಲ್ಲಾಳ್, ಉತ್ತಮ್ ಕಾಂಚನ್, ಗುರುಪ್ರಸಾದ್ ರಾವ್, ಸಂತೋಷ್, ಅಶೋಕ್ ಶೆಟ್ಟಿ, ಅಶೋಕ್ ರಾವ್, ವಿಜಯ್ ಕುಮಾರ್ ಉದ್ಯಾವರ, ಉದ್ಯಮಿ ಕೆ. ಸತ್ಯೇಂದ್ರ ಪೈ, ಡಾ| ಉದಯ ಕುಮಾರ್ ಶೆಟ್ಟಿ, ರಿತೇಶ್ ಕೋಟ್ಯಾನ್, ಗಣೇಶ್ ಕಿಣಿ, ಸುಧೀರ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.