• Home  
  • ಶ್ರೀ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪೂರ್ಣ ಸಹಕಾರ
- ಕರಾವಳಿ

ಶ್ರೀ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪೂರ್ಣ ಸಹಕಾರ

Share: ಶ್ರೀ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪೂರ್ಣ ಸಹಕಾರ.    ಉಡುಪಿ:  ಪುತ್ತಿಗೆ ಮಠದ ಶ್ರೀಶ್ರೀ   ಸುಗುಣೇಂದ್ರ  ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವಕ್ಕೆ ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪೂರ್ಣ ಸಹಕಾರವನ್ನು ಶ್ರೀ ಮಠದ ದಿವಾನರಾದ ಶ್ರಿ ನಾಗರಾಜ ಆಚಾರ್ಯರು ಕೋರಿದ್ದಾರೆ.      ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ ಶ್ರೀಶ ನಾಯಕ್ ರವರು ಪುತ್ತಿಗೆ ಮಠದ ಪರ್ಯಾಯ ಹಾಗೂ ಶ್ರೀಗಳವರ ಕೋಟಿ ಗೀತಾಲೇಖನ ಯಜ್ಞದಲ್ಲಿ ಯೂ ಕೂಡ ನಮ್ಮೆಲ್ಲರ ವಿಶೇಷ […]

ಶ್ರೀ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪೂರ್ಣ ಸಹಕಾರ.   

ಉಡುಪಿ:  ಪುತ್ತಿಗೆ ಮಠದ ಶ್ರೀಶ್ರೀ   ಸುಗುಣೇಂದ್ರ  ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವಕ್ಕೆ ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಸಂಪೂರ್ಣ ಸಹಕಾರವನ್ನು ಶ್ರೀ ಮಠದ ದಿವಾನರಾದ ಶ್ರಿ ನಾಗರಾಜ ಆಚಾರ್ಯರು ಕೋರಿದ್ದಾರೆ.

     ರಾಜ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ ಶ್ರೀಶ ನಾಯಕ್ ರವರು ಪುತ್ತಿಗೆ ಮಠದ ಪರ್ಯಾಯ ಹಾಗೂ ಶ್ರೀಗಳವರ ಕೋಟಿ ಗೀತಾಲೇಖನ ಯಜ್ಞದಲ್ಲಿ ಯೂ ಕೂಡ ನಮ್ಮೆಲ್ಲರ ವಿಶೇಷ ಸಹಕಾರ ಇದ್ದೇ ಇದೆ. ಶ್ರಿ ಕೃಷ್ಣನ ಸೇವೆಗೆ ನಾವೆಲ್ಲರೂ ಒಗ್ಗಟ್ಟಾಗಿ ಸೇವೆ ಮಾಡೋಣ ಎಂದು ತಿಳಿಸಿದರು.

 ಸಮಾಜದ ಹಿರಿಯರಾದ ಶ್ರೀ ರಮೇಶ್ ಸಲ್ವಾಂಕರ್, ಶ್ರೀ ಪರಮೇಶ್ವರ ಪ್ರಭು, ಶ್ರೀ ಜಗನ್ನಾಥ ನಾಯಕ್, ಶ್ರೀ ಕೇಶವ ನಾಯಕ್, ಶ್ರಿ ಉಪೇಂದ್ರ ನಾಯಕ್,  ಶ್ರೀ ರಾಮಕೃಷ್ಣ ನಾಯಕ್,  ಶ್ರೀಮತಿ ಸುಮಿತ್ರಾ ಏಚ್ ನಾಯಕ್ ಶ್ರೀಮತಿ ಶಕುಂತಲಾ ಪ್ರಭು, ಶ್ರೀಮತಿ ಪುಷ್ಪ ಎಸ್ ಪ್ರಭು,  ಎಸ್. ಗೋಪಾಲಕೃಷ್ಣ ನಾಯಕ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

 ಶ್ರಿ ಮಠದ ರಮೇಶ್ ಭಟ್ ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು.

 ಸಮಿತಿಯ ಶ್ರೀ ರವೀಂದ್ರ ಆಚಾರ್ಯ ಧನ್ಯವಾದವಿತ್ತರು. ಶ್ರೀ ಜಿ.ವಿ ಆಚಾರ್ಯರು  ಹಾಗೂ ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.