ಉಡಾ” ಬೇಟೆಯಾಡಿದಾತನ ಬೆನ್ನುಬಿದ್ದ ಅರಣ್ಯ ಇಲಾಖೆ
(Bantwala)ಬಂಟ್ವಾಳ: ವನ್ಯ ಜೀವಿಗಳಲ್ಲಿ ಒಂದಾದ “ಉಡಾ”ವನ್ನು ವ್ಯಕ್ತಿಯೋರ್ವ ಬೇಟೆಯಾಡಿ ಬಳಿಕ ಅದನ್ನು ಹಿಡಿದು ಫೋಟೊಗಳಿಗೆ ಫೋಸ್ ನೀಡಿ ವಿಜೃಂಭಿಸಿರುವ ಘಟನೆ ಬಂಟ್ವಾಳ ಸಮೀಪದ ವಗ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
“ಉಡಾ”ವನ್ನು ಸಾಯಿಸಿದ ವ್ಯಕ್ತಿಯನ್ನು ವಗ್ಗದ ಸುಧಾಕರ ಎಂದು ಹೆಸರಿಸಲಾಗಿದ್ದು, ಆತನ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆಯನ್ವಯ ಕೇಸ್ ದಾಖಲಿಸಲಿಸಿರುವ ಅರಣ್ಯ ಇಲಾಖಾಧಿಕಾರಿಗಳು ಆರೋಪಿಯನ್ನು ಬಲೆಗೆ ಕೆಡವಲು ಬೆನ್ನು ಬಿದ್ದಿದ್ದಾರೆ.
ಅಕ್ಟೋಬರ್ 11 ರಂದು ಈ ಘಟನೆ ಬೆಳಕಿಗೆ ಬಂದಿದ್ದು, ಬೃಹತ್ ಗಾತ್ರದ ಉಡಾವನ್ನು ಹಿಂಸಾತ್ಮಕ ರೀತಿಯಲ್ಲಿ ಸಾಯಿಸಿದ ಬಳಿಕ ಅದರ ಪೊಟೋ ತೆಗೆದು ವಿಜೃಂಭಿಸಿದಲ್ಲದೆ ಸಾಮಾಜಿಕ ಜಾಲಾ ತಾಣಗಳಲ್ಲಿ ಅದನ್ನು ಹರಿಯ ಬಿಟ್ಟಿದ್ದ.
ಈ ಬಗ್ಗೆ ಕೇಸು ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಆರೋಪಿ ಪೋಟೊವನ್ನು ಹಾಕಿರುವ ವಾಟ್ಸಾಪ್ ಗ್ರೂಪಿನ ಅಡ್ಮಿನ್‌ನನ್ನು ಈಗಾಗಲೇ ಅರಣ್ಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋಣಿ ಎಸ್.ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಫುಲ್ ರೈ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

