ಪಡುಬಿದ್ರಿ ರಾ.ಹೆ ೬೬ರಲ್ಲಿ ಟ್ಯಾಂಕರ್ ಹರಿದು ಯುವಕ ಸಾವು
ಪಡುಬಿದ್ರಿ: ಯುವಕನೋರ್ವ ಟ್ಯಾಂಕರ್ ಹರಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೇಟೆಯ ಬಸ್ಸು ನಿಲ್ದಾಣದ ಬಳಿ ಶುಕ್ರವಾರ ಸಂಜೆ ನಡೆದಿದೆ.
ಮೃತನನ್ನು ಕಂಚಿನಡ್ಕ ನಿವಾಸಿ ಪ್ರಜ್ವಲ್ (18) ಎಂದು ಗುರುತಿಸಲಾಗಿದೆ.
ಇಲ್ಲಿನ ಮಂಗಳೂರು ಕಡೆಗೆ ತೆರಳುವ ಬಸ್ಸು ನಿಲ್ದಾಣದಲ್ಲಿ ಹೆದ್ದಾರಿಯಲ್ಲಿ ಟೂರಿಸ್ಟ್ ವಾಹನವೊಂದರಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ವೇಳೆ ಹಿಂಬದಿಯಲ್ಲಿದ್ದ ಬೈಕ್ ಢಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟಿದ್ದನು.
ಇದೇ ವೇಳೆ ಟ್ಯಾಂಕರ್ ಅವರ ಮೇಲೆ ಹರಿದ ಪರಿಣಾಮ ಟ್ಯಾಂಕರ್ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟನು. ಚಕ್ರದಡಿ ಸಿಲುಕಿದ್ದು, ಬಳಿಕ ಮೃತದೇಹವನ್ನು ಹೊರತೆಗೆಯಲಾಯಿತು.
ಪಡುಬಿದ್ರಿ ಪೊಲೀಸರು (Padubidri Police Station)ಸ್ಥಳಕ್ಕೆ ಧಾವಿಸಿ ಸ್ಥಳಪರಿಶೀಲನೆ ನಡೆಸಿದ್ದಾರೆ.

