ಕಾಪುವಿನ ಖ್ಯಾತ ನಾಗಸ್ವರ ವಾದಕ ಜಲೀಲ್ ಸಾಹೇಬ್ ಹೃದಯಾಘಾತದಿಂದ ವಿಧಿ ವಶ
(KAUP)ಕಾಪು : ಕಾಪು ಪರಿಸರದಲ್ಲಿ ಹೆಸರುವಾಸಿಯಾಗಿದ್ದ ನಾಗಸ್ವರ ವಾದಕ ಶೇಖ್ ಜಲೀಲ್ ಸಾಹೇಬ್ ರವರು (56) ಇಂದು ಬೆಳಿಗ್ಗೆ ಹೊಟೇಲಿನಲ್ಲಿ ಚಹಾ ಕುಡಿಯುವ ಸಂದರ್ಭ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅವರು ಇಹಲೋಕ ತ್ಯಜಿಸಿದ್ದಾರೆ.
ಕಾಪುವಿನ ಕೊಪ್ಪಲಂಗಡಿಯ ನಿವಾಸಿಯಾಗಿರುವ ಜಲೀಲ್ ಸಾಹೇಬರು ಕಾಪು ಶ್ರೀ ಜನಾರ್ಧನ ದೇವಸ್ಥಾನ (Kaup Shri Laxmi Janardhan temple), ಕಾಪು ಕಲ್ಯ ಮಾರಿಯಮ್ಮ ದೇವಸ್ಥಾನ Kalya Shri Marigudi), ಕೊಪ್ಪಲಂಗಡಿ ವಾಸುದೇವ ದೇವಸ್ಥಾನ ಹಾಗೂ, ಕಲ್ಕುಡ ಗುಡಿಯಲ್ಲಿ ಜಲೀಲ್ ಸಾಹೇಬರು ತಮ್ಮ ಪೂರ್ವಜರ ಕಾಲದಿಂದಲೂ ಬಂದ ಸೇವೆಯನ್ನು ಮುಂದುವರಿಸಿದ್ದಾರೆ.
ಜಲೀಲ್ ಸಾಹೇಬರು ಪತ್ನಿ, ಮಗಳು, ಸಹೋದರ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಕಾಪು ಶ್ರೀ ಜನಾರ್ಧನ ದೇಗುಲದ ಆಡಳಿತ ಮಂಡಳಿ ಸಹಿತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

